‘ನಾ ಕಂಡಂತೆ ದಸರಾ’ “ಐತಿಹಾಸಿಕ ರಾಜ ಗತ ವೈಭವ ನಾಡ ಸಿರಿಯು”…..

ನನ್ನ ಕಂಗಳಲ್ಲಿ ಬಿಂಬಿಸಿದ ದಸರಾ ಹಬ್ಬವು



ವಿಶ್ವಜನ ಮನ ಸೂರೆ ಗೊಳ್ಳುವ ಕರುನಾಡ
ಹಬ್ಬವು
ಶತಗತಕಾಲದ ರಾಜ ಮಹಾರಾಜರ ಆಡಳಿತದ
ಮೆರಗು
ಚಿನ್ನದ ಅಂಬಾರಿಯ ಮೇಲೆ ಶ್ರೀ
ಚಾಮುಂಡೇಶ್ವರಿ ವಿರಾಜಿಸುವ
ಆನೆಗಳ ಅಶ್ವ ಗಾಂಭೀರ್ಯ ನಡೆ
ಮನಮೋಹಕವು
ಸೂರ್ಯ ಚಂದ್ರರಂತೆ ಬೆಳಕ ಪ್ರಸರಿಸುವ
ಲಕ್ಷೋಪಲಕ್ಷ ದೀಪೋತ್ವವು
ಜಗದ ಜನ ಮನ ಸೆಳೆವ ನಾಡ ಹಬ್ಬವು
ಮೈಸೂರು ಮಲ್ಲಿಗೆ ಹೂವು ಪರಿಮಳ
ಅರಮನೆಯ ಸೌಂದರ್ಯವು
ಕರುನಾಡ ವಿವಿಧ ಸಾಂಸ್ಕೃತಿಕ ಕಲಾ ತಂಡಗಳ
ಕಲೆ ರಸದೌತಣವು
ಫಲ ಪುಷ್ಪರಾಶಿ ಆಹಾರ ಸವಿಮೇಳ ಕನ್ನಡ
ಸವಿರಸವು
ದಸರಾ ರಾಜ ಮಹಾರಾಜರ ಆದರ್ಶ ಆಳ್ವಿಕೆ
ಬೆಳಗುತ್ತಿದೆ ವಿಶ್ವದೆಲ್ಲೆಡೆಯು
ಕರುನಾಡ ಐತಿಹಾಸಿಕ ರಾಜ ಗತ ವೈಭವ ನಾಡ
ಸಿರಿಯು
ನಾ ಕಂಡಂತೆ ದಸರಾ ಬಹು ಖುಷಿಯಾಯಿತು
ಮನವು
ಅನವರತ ನಂದಾದೀಪದಂತೆ ಹೊನ್ನಕಿರಣ
ಮೈಸೂರು ದಸರಾ ವೈಭವ ಕೀರ್ತಿಯು
ಶ್ರೀ ಸುರೇಶ ಶಂಕ್ರೆಪ್ಪ ಅಂಗಡಿ
ದೇಶಂಸು ದೇವರ ಹಿಪ್ಪರಗಿ
