ಶ್ರೀಮದ್ ಭಗವದ್ಗೀತೆಯಲ್ಲಿ ಭಕ್ತಿ ಯೋಗಕ್ಕೆ ಬಹಳ ಮಹತ್ವವಿದೆ – ಜಿ.ಶರ್ಮಿಳಾ ರಮಣ.
ಚಳ್ಳಕೆರೆ ಅ.13




ಸ್ವಯಂ ಭಗವಂತನಿಂದ ಅರ್ಜುನನಿಗೆ ಹೇಳಲ್ಪಟ್ಟ ಶ್ರೀಮದ್ ಭಗವದ್ಗೀತೆಯಲ್ಲಿ ಭಕ್ತಿಯೋಗಕ್ಕೆ ಅತ್ಯಂತ ಹೆಚ್ಚಿನ ಮಹತ್ವವನ್ನು ನೀಡಲಾಗಿದೆ ಎಂದು ಚಳ್ಳಕೆರೆಯ ತ್ಯಾಗರಾಜ ನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದ ಸದಸ್ಯೆ ಶ್ರೀಮತಿ ಜಿ ಶರ್ಮಿಳಾ ರಮಣ ತಿಳಿಸಿದರು.

ವಾಲ್ಮೀಕಿ ನಗರದ ಸದ್ಭಕ್ತರಾದ ಶ್ರೀಮತಿ ವಿಜಯಾಗುರು ಅವರ ದೈವ ಸಂಕಲ್ಪ ನಿವಾಸದಲ್ಲಿ ತ್ಯಾಗರಾಜನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಾರದ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು “ಶ್ರೀಮದ್ ಭಗವದ್ಗೀತೆಯಲ್ಲಿ ಭಕ್ತಿಯೋಗದ ಮಹತ್ವ” ಎಂಬ ವಿಷಯವಾಗಿ ವಿಶೇಷ ಉಪನ್ಯಾಸ ನೀಡುತ್ತಾ ಮಾತನಾಡುತ್ತಿದ್ದರು.

ನಾವು ಏನೇ ಕೆಲಸ ಮಾಡುತ್ತಿದ್ದರೂ ಶ್ರದ್ಧೆಯಿಂದ ಭಗವಂತನ ಸ್ಮರಣೆಯೊಂದಿಗೆ ಮಾಡಬೇಕು. ಕಲಿಯುಗದಲ್ಲಿ ಭಕ್ತಿಮಾರ್ಗದ ಮೂಲಕ ದೇವರನ್ನು ಸುಲಭವಾಗಿ ನೋಡಬಹುದು ಎಂದರು.

ಸತ್ಸಂಗದ ಪ್ರಯುಕ್ತ ಸತ್ಸಂಗ ಕೇಂದ್ರದ ಸದ್ಭಕ್ತರಿಂದ ಸಾಮೂಹಿಕ ಶ್ರೀರಾಮರಕ್ಷಾ ಸ್ತೋತ್ರ ಪಠಣ, ಶ್ರೀರಾಮಕೃಷ್ಣರ ನಾಮಸ್ಮರಣೆ,ಎಂ ಗೀತಾ ನಾಗರಾಜ್, ಗೀತಾ ಪ್ರಕಾಶ್, ಯಶೋಧಾ ದೇವರಾಜ್, ಗೀತಾ ಸುಂದರೇಶ್ ದೀಕ್ಷಿತ್,ಪ್ರೇಮಾಲೀಲಾ ಅವರಿಂದ ವಿಶೇಷ ಭಜನೆ, ಆರತಿ ಮತ್ತು ಪ್ರಸಾದ ವಿನಿಯೋಗ ನಡೆಯಿತು.

ಸತ್ಸಂಗದಲ್ಲಿ ವಿಜಯಾಗುರು, ಶಿಶಿರ, ಮಾನ್ಯ, ಮಂಜುಳಾ, ಹೆಚ್ ಲಕ್ಷ್ಮೀದೇವಮ್ಮ, ರಂಗಮ್ಮ,ಎಂ ದಾಕ್ಷಾಯಣಿ, ನಳಿನಿ, ಪುಷ್ಪಲತಾ, ಸರಸ್ವತಮ್ಮ, ಪ್ರಮೋದಾ, ಜಿ.ಶರ್ಮಿಳಾ, ಸೌಮ್ಯ,ಶಿಲ್ಪಾ, ಸಮಾಜ ಸೇವಕ ಯತೀಶ್ ಎಂ ಸಿದ್ದಾಪುರ, ಶಾರದಮ್ಮ, ಮೀನಾಕ್ಷಮ್ಮ,ಶೋಭಾ, ಅಂಬಿಕಾ, ವಿಶಾಲಾಕ್ಷಿ, ಗಿರಿಜಾಮ್ಮ, ಜಯಮ್ಮ, ಸಿ.ಎಸ್ ಭಾರತಿ, ಪ್ರೇಮಾ, ಪ್ರಮೀಳಾ, ಲತಾ ಸೇರಿದಂತೆ ಸದ್ಭಕ್ತರು ಭಾಗವಹಿಸಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.ಹಿಸಿದ್ದರು.

