ದುಷ್ಟರ ನಾಶ ಶಿಷ್ಟರ ವಿಜಯ ನವರಾತ್ರಿ- ವಿಜಯ ದಶಮಿಯ ವಿಶೇಷತೆ – ಗೀತಾ.ಪ್ರಕಾಶ್.
ಚಳ್ಳಕೆರೆ ಅ.20




ನವರಾತ್ರಿ ಮತ್ತು ವಿಜಯದಶಮಿಯು ಕೆಟ್ಟವರ ಮೇಲೆ ಒಳ್ಳೆಯವರ ವಿಜಯ,ಅಜ್ಞಾನದ ಮೇಲೆ ಜ್ಞಾನದ ಜಯವನ್ನು ಸಂಕೇತಿಸುತ್ತವೆ ಎಂದು ಚಳ್ಳಕೆರೆಯ ತ್ಯಾಗರಾಜ ನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದ ಸದಸ್ಯೆ ಹಾಗೂ ಆಧ್ಯಾತ್ಮಿಕ ಚಿಂತಕಿ ಶ್ರೀಮತಿ ಗೀತಾ ಪ್ರಕಾಶ್ ಅಭಿಪ್ರಾಯಪಟ್ಟರು.

ತ್ಯಾಗರಾಜ ನಗರದ ಸದ್ಭಕ್ತರಾದ ಶ್ರೀಮತಿ ನಂಜಮ್ಮ ಕೆಂಚಪ್ಪ ಶಿಕ್ಷಕರ ಸವಿತಾ ನಿವಾಸದಲ್ಲಿ ಆಯೋಜಿಸಿದ್ದ ವಾರದ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಅವರು ಶ್ರೀ ಶಂಕರಾಚಾರ್ಯ ವಿರಚಿತ ಶ್ರೀ ಸೌಂದರ್ಯ ಲಹರಿಯ ಮೊದಲ ಐದು ಶ್ಲೋಕಗಳ ಪಠಣವನ್ನು ನಡೆಸಿ ಕೊಟ್ಟ ಅವರು “ನವರಾತ್ರಿಯ ಹಿರಿಮೆ-ವಿಜಯದಶಮಿಯ ಮಹಿಮೆ” ಎಂಬ ವಿಷಯವಾಗಿ ವಿಶೇಷ ಉಪನ್ಯಾಸ ನೀಡುತ್ತಾ ಮಾತನಾಡುತ್ತಿದ್ದರು.

ನವರಾತ್ರಿಯಲ್ಲಿ ತಾಯಿಯನ್ನು ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟಾ ದೇವಿ, ಕೂಷ್ಮಾಂಡಾ ದೇವಿ,ಸ್ಕಂದ ಮಾತೆ, ಕಾತ್ಯಾಯಿನಿ ದೇವಿ,ಕಾಲರಾತ್ರಿ ದೇವಿ, ಮಹಾಗೌರಿ, ಸಿದ್ಧಿದಾತ್ರಿ ದೇವಿಯಾಗಿ ಆರಾಧಿಸಲಾಗುತ್ತದೆ. ವಿಜಯದಶಮಿಯು ದುರ್ಗಾದೇವಿಯು ಮಹಿಷಾಸುರನನ್ನು ಸಂಹರಿಸಿದ, ಶ್ರೀರಾಮ ರಾವಣನನ್ನು ವಧೆ ಮಾಡಿದ, ಪಾಂಡವರು ಅಜ್ಞಾತವಾಸವನ್ನು ಮುಗಿಸಿದ ಸುದಿನ ಎಂದು ಅವರು ವಿವರಿಸಿದರು.
ಸತ್ಸಂಗದ ಪ್ರಯುಕ್ತ ಸತ್ಸಂಗ ಕೇಂದ್ರದ ಸದ್ಭಕ್ತರಿಂದ ಸಾಮೂಹಿಕ ಶ್ರೀರಾಮರಕ್ಷಾ ಸ್ತೋತ್ರ ಪಠಣ, ಶ್ರೀರಾಮಕೃಷ್ಣರ ಜಗನ್ಮಾತೆಯ ನಾಮಸ್ಮರಣೆ,ಎಂ ಗೀತಾ ನಾಗರಾಜ್, ನಾಗರತ್ನಮ್ಮ ಅವರಿಂದ ಭಜನೆ,ಜಿ ಯಶೋಧಾ ಪ್ರಕಾಶ್ ಅವರಿಂದ ಭಜನೆ ಹಾಗೂ ಚಂದ್ರಘಂಟಾ ದೇವಿಯ ಬಗ್ಗೆ ಉಪನ್ಯಾಸ, ಯತೀಶ್ ಎಂ ಸಿದ್ದಾಪುರ ಅವರಿಂದ “ಶ್ರೀಶಾರದಾದೇವಿ ಜೀವನಗಂಗಾ” ಗ್ರಂಥ ಪಾರಾಯಣ, ಆರತಿ ಹಾಗೂ ಪ್ರಸಾದ ವಿನಿಯೋಗ ನಡೆಯಿತು.
ವಿಶೇಷ ಸತ್ಸಂಗದಲ್ಲಿ ಹೆಚ್ ಲಕ್ಷ್ಮೀದೇವಮ್ಮ, ರಂಗಮ್ಮ, ಎಂ ಲಕ್ಷ್ಮೀದೇವಮ್ಮ, ಸರಸ್ವತಿ, ಪ್ರೇಮಾ, ಸೌಮ್ಯ ಪ್ರಸಾದ್, ರಾಘವೇಂದ್ರ, ದಾಕ್ಷಾಯಣಿ ಭಾಗವಹಿಸಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

