ನವೆಂಬರ್ 27 ಕ್ಕೆ ಮಿತ್ರ ರಕ್ಷಕ ಚಿತ್ರ – ರಾಜ್ಯಾದ್ಯಂತ ಬಿಡುಗಡೆ ಯಾಗುತ್ತಿದೆ.
ಬೆಂಗಳೂರು ನ.03




ನೀತು ಫಿಲಂ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಮಿತ್ರರಕ್ಷಕ ನವೆಂಬರ್ 27 ಕ್ಕೆ ಚಿತ್ರ ಮಂದಿರಗಳಲ್ಲಿ ಬಿಡುಗಡೆ ಯಾಗುತ್ತಿದೆ. ಓಂ ಪ್ರಕಾಶ್ ನಾಯಕ್ ಕಥೆ ಚಿತ್ರಕಥೆ ಸಂಭಾಷಣೆ ಬರೆದು, ನಿರ್ದೇಶನ ಮಾಡಿರುವ ಮಿತ್ರ ರಕ್ಷಕ. ಸಿನಿಮಾದ ಹಾಡು ರಾ ರಾ.. ಸರಸ ಕುರಾರಾ ನೆನೆರ ನಾಗವಲ್ಲಿ ಹಾಡುಗಳು ಸೂಪರ್ ಡೂಪರ್ ಹಿಟ್ ಸಾಂಗ್ಸ್ ಆಗಿದೆ.
ಚಿತ್ರದಲ್ಲಿ ಮೂರು ಹಾಡುಗಳಿವೆ. ಹಾರರ್ ಮತ್ತು ಥ್ರಿಲ್ಲರ್ ಚಿತ್ರ ಮಿತ್ರರಕ್ಷಕ ವರ್ಷಾಂತ್ಯದಲ್ಲಿ ಬಿಡುಗಡೆ ಯಾಗುತ್ತಿದೆ.

ಎರಡು ಗಂಟೆ ಇಪ್ಪತ್ತು ನಿಮಿಷದ ಈ ಸಿನಿಮಾ ಎಲ್ಲೂ ಒಂದು ನಿಮಿಷವೂ ಬೋರ್ ಹೊಡೆಸದೆ ಸಾಗುವುದೇ ಚಿತ್ರದ ಪ್ಲಸ್ ಪಾಯಿಂಟ್ ಹೀಗಾಗಿ ಪ್ರೇಕ್ಷಕರು ಈ ಸಿನಿಮಾವನ್ನು ಖಂಡಿತ ಗೆಲ್ಲಿಸುತ್ತಾರೆ ಎನ್ನುವ ಆಸೆ ಚಿತ್ರ ತಂಡದವರಿಗಿದೆ.
ಈ ಚಿತ್ರಕ್ಕೆ ಛಾಯಾಗ್ರಹಣ ಕಿರಣ್, ಮೇಕಪ್ ರುದ್ರೇಶ್, ಸಂಗೀತ ದೇವದಾಸ್, ಓಂ, ಸಹ ನಿರ್ದೇಶನ ಮೋಹಿತ್, ಶಂಕರ್ಬಾಬು, ಸಂಕಲನ ಶಿವಕುಮಾರ್, ಪತ್ರಿಕಾ ಸಂಪರ್ಕ ವಿ.ಎಂ.ಎಸ್.ಗೋಪಿ ಮಾಡಿದ್ದಾರೆ.

ತಾರಾಗಣದಲ್ಲಿ ಸಿಂಪಲ್ ಸ್ಟಾರ್ ಓಂಪ್ರಕಾಶ್ ನಾಯಕ್, ಶ್ರೀಧರ್, ಸ್ಮೈಲ್ ಶಿವು, ಸ್ವಪ್ನಶ್ರೀ, ಕಾವ್ಯ, ರುದ್ರೇಶ್, ಅವಿನಾಶ್ ಭರದ್ವಾಜ್, ಶಂಕರ್ಬಾಬು, ಪ್ರತಾಪ್ ಸಿರಿಗಣೆ, ಅನಿಲ್ ಹೆಗ್ಗಾರ್ ಕೊಡಿಗೆ, ವಿನಯ್ ಮಲೆನಾಡು, ಬಾಬು, ಪ್ರಸನ್ನ ಮುಂತಾದವರು ಅಭಿನಯಿಸಿದ್ದಾರೆ.
– ವಿ.ಎಂ.ಎಸ್.ಗೋಪಿ ✍️
ಬೆಂಗಳೂರು.
