ದೊಡ್ಡಬಳ್ಳಾಪುರದಲ್ಲಿ ‘ಗುಲಾಬಿ’ ಚಲನ ಚಿತ್ರದ – ಪೋಸ್ಟರ ಬಿಡುಗಡೆ.

ದೊಡ್ಡಬಳ್ಳಾಪುರ ನ.04

ದೊಡ್ಡಬಳ್ಳಾಪುರದಲ್ಲಿ ಮಲ್ಲೇಶ್ ಮತ್ತು ಸೆಲ್ವಮ್ ತಂಡ ನಡೆಸಿ ಕೊಡುವ, ನಿತ್ಯ ಅನ್ನ ದಾಸೋಹ ಕಾರ್ಯಕ್ರಮದ 2411 ನೇ.ದಿನ ದಂದು ನಡೆದ ಸಮಾರಂಭದಲ್ಲಿ ಅಡ್ವೋಕೇಟ್, ನಟ, ನಿರ್ದೇಶಕ ಡಾ, ಆರ್. ವಿಜಯಕುಮಾರ್ ನಿರ್ದೇಶಿಸಿ ನಾಯಕರಾಗಿ ಅಭಿನಯಿಸಿರುವ ಪ್ಯಾನ್ ಇಂಡಿಯಾ ಸಿನೇಮಾ ‘ಗುಲಾಬಿ’ ಪೋಸ್ಟರನ್ನು ಸಾರ್ವಜನಿಕರ ಸಮ್ಮುಖದಲ್ಲಿ ಅನಾವರಣ ಗೊಳಿಸಲಾಯ್ತು.

ಈ ಸಂದರ್ಭದಲ್ಲಿ ಶಾಲಾ ಮಕ್ಕಳಿಗೆ ಉಚಿತವಾಗಿ ಪುಸ್ತಕ, ಜಾಮೆಟ್ರಿ ಬಾಕ್ಸ್ ಮತ್ತು ಬಡ ಹೆಣ್ಣುಮಕ್ಕಳಿಗೆ ಸೀರೆಗಳನ್ನು ವಿತರಿಸಿ ಅನ್ನ ದಾಸೋಹ ಮಾಡಲಾಯ್ತು. ನಟಿ ಅನಿತಾಶ್ರೀ, ಡಾ, ಅಂಜನಪ್ಪ, ಕೆಟಿವಿಎ ಅಧ್ಯಕ್ಷರು.

ಚಲನ ಚಿತ್ರ ನಟ ಗಣೇಶ್‌ರಾವ್ ಕೇಸರಕರ್, ನಾಗರಾಜ್, ವಾಸುದೇವಶೆಟ್ಟಿ, ರವಿ ವಕೀಲರು ಮತ್ತಿತರರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.

ಹ್ಯಾಟ್ರಿಕ್ ನಿರ್ದೇಶಕ, ನಿರ್ಮಾಪಕ, ನಟ ಡಾ, ಆರ್ ವಿಜಯಕುಮಾರ್, ಮಾತನಾಡಿ ಕಳೆದ ವಾರ ಚೆನೈನ ಟಿ ನಗರದಲ್ಲಿ ತಮಿಳಿನ ಪೋಸ್ಟರ್ ಬಿಡುಗಡೆ ಮಾಡಲಾಗಿದೆ.

ಶೀಘ್ರದಲ್ಲೇ ಕನ್ನಡ ಮತ್ತು ತಮಿಳಿನಲ್ಲಿ ಚಿತ್ರ ಬಿಡುಗಡೆ ಆಗಲಿದೆ ಎಂದರು. ‘ಗುಲಾಬಿ’ ಸಿನೆಮಾ ತಂಡದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

’ಗುಲಾಬಿ’ ಚಿತ್ರದ ಚಿತ್ರೀಕರಣವನ್ನು ಬೆಂಗಳೂರು ಸುತ್ತಮುತ್ತ, ತಾತಗುಣಿ, ಭೂಮಿಕಾ ಸ್ಟುಡಿಯೋ, ಕನಕಪುರ ಸುತ್ತಮುತ್ತ ನಡೆಸಲಾಗಿದ್ದು, ಆರು ಹಾಡುಗಳು, ಆರು ಸಾಹಸ ದೃಶ್ಯಗಳಿವೆ.

ಚಿತ್ರದಲ್ಲಿ ನಾಯಕರಾಗಿ ಡಾ, ವಿಜಯಕುಮಾರ್, ರಾಧಿಕಾ, ಚಂದನಾ, ಅನಿತಾಶ್ರೀ, ನಾಗೇಂದ್ರ ಅರಸ್, ಲಯಕೋಕಿಲ, ಉಗ್ರಂ ರವಿ, ಬಿಗ್‌ಬಾಸ್ ಮಲ್ಲಮ್ಮ, ಸುರೇಂದ್ರ ಕುಮಾರ್, ಅಜಿತ್‌ಜೈನ್, ಲೋಕೇಶ್ ಮೊದಲಾದವರಿದ್ದಾರೆ.

ತಾಂತ್ರಿಕ ವರ್ಗದಲ್ಲಿ ಛಾಯಾಗ್ರಹಣ ವೀರೇಶ, ಸಂಗೀತ ಸಂತೋಷ ಜೋಶ್ವ, ಪ್ರಸಾಧನ ನಾಗೇಶ, ಕೊರಿಯೋಗ್ರಫಿ ಬಾಲಕೃಷ್ಣ, ಸಾಹಸ ಗುಲಾಬಿ ಚಿನ್ನಯ್ಯ, ಸಂಕಲನ ನಿಸಿತ್, ಪಿ.ಆರ್‌.ಓ ಡಾ, ಪ್ರಭು ಗಂಜಿಹಾಳ, ಡಾ, ವೀರೇಶ ಹಂಡಿಗಿ, ಸಹಾಯಕ ನಿರ್ದೇಶನ ವಾಸುದೇವ ಶೆಟ್ಟಿ ಎಚ್.ಎಸ್, ಸಹ ನಿರ್ದೇಶನ ಎಸ್.ಮೇಘರಾಜ ಗೌಡ, ನಿರ್ಮಾಣ ಉಸ್ತುವಾರಿ, ವಸ್ತ್ರ ವಿನ್ಯಾಸ ಅನಿತಾಶ್ರೀ, ಕಥೆ ಚಿತ್ರಕಥೆ ಸಂಭಾಷಣೆ ಜೊತೆಗೆ ನಿರ್ದೇಶನ ಮತ್ತು ನಿರ್ಮಾಣದ ಹೊಣೆ ಡಾ, ವಿಜಯಕುಮಾರ್ ಅವರದಿದೆ.

ರಾಜ್ಯ ಮಟ್ಟದ ವಿಶೇಷ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನೆಲ್:ಡಾ, ಪ್ರಭು ಗಂಜಿಹಾಳ ಗದಗ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button