🚨BREAKING NEWS🚨🔴ಬೈಲೂರು ವಾರ್ಡ್ ರಸ್ತೆ ಡಾಮರೀಕರಣಕ್ಕೆ – ಪೌರಾಯುಕ್ತರಿಗೆ ಮನವಿ ಸಲ್ಲಿಕೆ..!
ಉಡುಪಿ ನ.04




31 ನೇ. ಬೈಲೂರು ವಾರ್ಡಿನ ಶ್ರೀನಿವಾಸ ದೇವಸ್ಥಾನದ ಮುಖ್ಯ ರಸ್ತೆಯಿಂದ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾ ಭವನದ ವರೆಗಿನ ರಸ್ತೆಯನ್ನು ಸಂಪೂರ್ಣ ಡಾಮರೀಕರಣ ಗೊಳಿಸುವಂತೆ ಒತ್ತಾಯಿಸಿ, ಮಾಜಿ ನಗರ ಸಭಾ ಸದಸ್ಯರಾದ ರಮೇಶ್ ಕಾಂಚನ್ ಅವರ ನೇತೃತ್ವದಲ್ಲಿ ಉಡುಪಿ ನಗರ ಸಭೆಯ ಪೌರಾಯುಕ್ತರಾದ ಮಹಾಂತೇಶ್ ಹಂಗರಗಿ ಅವರಿಗೆ ಮನವಿ ಸಲ್ಲಿಸಲಾಯಿತು.
⚡ 13 ವರ್ಷಗಳ ಸಮಸ್ಯೆಗೆ ಮುಕ್ತಿ ನೀಡಿದ್ದ ರೂ. 97 ಲಕ್ಷ ಅನುದಾನ:-
31 ನೇ. ಬೈಲೂರು ವಾರ್ಡಿನ ಶ್ರೀನಿವಾಸ ದೇವಸ್ಥಾನದಿಂದ ಪಿ.ಪಿ.ಸಿ ಕಾಲೇಜು ಕಡೆಗೆ ಸಾಗುವ ಮುಖ್ಯ ರಸ್ತೆಯಲ್ಲಿ ಒಳ ಚರಂಡಿ ಪೈಪ್‌ಲೈನ್ ಸಣ್ಣದಾಗಿದ್ದ ಕಾರಣ, ಕಳೆದ 13 ವರ್ಷಗಳಿಂದ ಕೊಳಚೆ ನೀರು ರಸ್ತೆಯಲ್ಲೇ ಹರಿಯುತ್ತಿತ್ತು. ಇದರಿಂದ ಸಾರ್ವಜನಿಕರು ಹಾಗೂ ವಾಹನ ಸವಾರರು ತೀವ್ರ ಸಂಕಷ್ಟ ಎದುರಿಸುತ್ತಿದ್ದರು. ಈ ಸಮಸ್ಯೆಯನ್ನು ಪರಿಹರಿಸಲು ನಗರ ಸಭೆಯಿಂದ ರೂ. 97 ಲಕ್ಷ ಅನುದಾನ ಮೀಸಲಿಟ್ಟು, ದೊಡ್ಡ ಗಾತ್ರದ ಒಳ ಚರಂಡಿ ಪೈಪ್ ಲೈನ್ ಹಾಗೂ ಪೆವರ್ ಫಿನಿಷ್ ಮಾದರಿಯಲ್ಲಿ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಗಿತ್ತು.
⚡ ವಿಳಂಬಕ್ಕೆ ಕಾರಣವೇನು..?

ಪಿ.ಪಿ.ಸಿ ಕಾಲೇಜು ರಸ್ತೆಯಲ್ಲಿ ಒಳ ಚರಂಡಿ ಕಾಮಗಾರಿ ನಡೆಯುತ್ತಿದ್ದ ಸಂದರ್ಭದಲ್ಲಿ ದೊಡ್ಡ ಬಂಡೆಗಳು ಸಿಕ್ಕಿದ್ದವು. ಸುತ್ತಲೂ ವಸತಿ ಪ್ರದೇಶಗಳಿದ್ದಿದ್ದರಿಂದ ಬ್ಲಾಸ್ಟಿಂಗ್ ಮಾಡಲು ಸಾಧ್ಯವಾಗದೆ, ಮಳೆಗಾಲದಲ್ಲಿ ಮೆಷಿನ್ ಕಟ್ಟಿಂಗ್ ಮೂಲಕ ಬಂಡೆ ಕೊರೆಯ ಬೇಕಾಗಿ ಬಂದಿದ್ದರಿಂದ ಕಾಮಗಾರಿ ವಿಳಂಬವಾಗಿತ್ತು.
⚡ ತಕ್ಷಣವೇ ಡಾಮರೀಕರಣ ಪೂರ್ಣ ಗೊಳಿಸಲು ಆಗ್ರಹ:-

ಪ್ರಸ್ತುತ ಒಳ ಚರಂಡಿ ಕಾಮಗಾರಿ ಸಂಪೂರ್ಣ ಪೂರ್ಣ ಗೊಂಡಿದೆ. “ಡಾಮರ್ ಪ್ಲಾಂಟ್ ತೆರೆದ ತಕ್ಷಣವೇ ಡಾಮರೀಕರಣ ಪೂರ್ಣ ಗೊಳಿಸಲಾಗುವುದು” ಎಂದು ಪೌರಾಯುಕ್ತರು ಈ ಹಿಂದೆ ಭರವಸೆ ನೀಡಿದ್ದರು.
ಇದೀಗ ಡಾಮರ್ ಪ್ಲಾಂಟ್‌ಗಳು ಪುನಾರಂಭ ಗೊಂಡಿರುವುದರಿಂದ, ಸಾರ್ವಜನಿಕರ ಹಿತದೃಷ್ಟಿಯಿಂದ ಪೌರಾಯುಕ್ತರು ತಕ್ಷಣವೇ ಮುತುವರ್ಜಿ ವಹಿಸಿ ಡಾಮರೀಕರಣ ಕಾಮಗಾರಿ ಮುಗಿಸಿ, ಸಾರ್ವಜನಿಕ ಸಂಚಾರಕ್ಕೆ ಮುಕ್ತ ಗೊಳಿಸ ಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
📌 ಉಪಸ್ಥಿತರಿದ್ದ ಪ್ರಮುಖರು:-
ಈ ಸಂದರ್ಭದಲ್ಲಿ ಉಡುಪಿ ನಗರ ಸಭೆಯ ಮಾಜಿ ಸದಸ್ಯ ವಿಜಯ ಪೂಜಾರಿ, ನಾಮನಿರ್ದೇಶಿತ ಸದಸ್ಯ ಮೊಹಮ್ಮದ್, ಪ್ರಮುಖರಾದ ಗಣೇಶ್ ನೆರ್ಗಿ, ಚಂದ್ರಮೋಹನ್ ಚಿಟ್ಪಾಡಿ, ಸತೀಶ್ ಕುಮಾರ್ ಮಂಚಿ, ಸತೀಶ್ ಕೊಡವೂರು, ಮೊಹಮ್ಮದ್ ಶೀಶ್, ಸ್ಥಳೀಯರಾದ ಮ್ಯಾಕ್ಸಿಮ್ ಡಿ’ಸೋಜಾ, ಅನಂತಕೃಷ್ಣ ಪ್ರಭು, ಕೃಷ್ಣಾನಂದ ಪೈ, ಪ್ರೀತಿ ಸಾಲಿನ್ಸ್, ಶಹನವಾಜ್, ಕ್ರಿಸ್ಟಿನಾ ಬಂಗೇರ, ಗೀತಾ ರವಿ, ಶೋಭಾ ಭಂಡಾರಿ, ಯಶಸ್ವಿನಿ, ಸಂಜಯ್ ಆಚಾರ್ಯ, ಪ್ರಜ್ವಲ್ ಹಾಗೂ ಸ್ಥಳೀಯ ಸಾರ್ವಜನಿಕರು ಉಪಸ್ಥಿತರಿದ್ದರು.
ವರದಿ:ಆರತಿ.ಗಿಳಿಯಾರು.ಉಡುಪಿ
