ಡಾ. ಗೌತಮ್ ಚೌದರಿ ಅವರ ಕುಟುಂಬದ ಹೆಸರಿನಲ್ಲಿ ದೇವಣಗಾಂವ್ ಮಹಾಲಕ್ಷ್ಮಿ ದೇವಸ್ಥಾನದಲ್ಲಿ – ವಿಶೇಷ ಪೂಜೆ ಹಾಗೂ ಅಭಿಷೇಕ ಕಾರ್ಯಕ್ರಮ ಜರಗಿತು.
ದೇವಣಗಾಂವ ನ.10




ವಿಜಯಪುರ ಜಿಲ್ಲೆಯ ಆಲಮೇಲ ತಾಲೂಕಿನ ದೇವಣಗಾಂವ್ ಗ್ರಾಮದ ಆರಾಧ್ಯ ಗ್ರಾಮ ದೇವತೆಯಾದ ಶ್ರೀ ಮಹಾಲಕ್ಷ್ಮಿ ತಾಯಿಯ ದೇವಸ್ಥಾನದಲ್ಲಿ ಡಾ, ಗೌತಮ್ ಚೌದರಿ ಅವರ ಮಾತಿನಂತೆ ಹಾಗೂ ಅವರ ಕುಟುಂಬದ ಹೆಸರಿನಲ್ಲಿ ವಿಶೇಷ ಲಕ್ಷ್ಮಿ ಪೂಜೆ ಮತ್ತು ಅಭಿಷೇಕವನ್ನು ಭಕ್ತಿ ಭಾವದಿಂದ ನೆರವೇರಿಸಲಾಯಿತು.
ಡಾ, ಗೌತಮ್ ಚೌದರಿ ಅವರು ಈ ಪೂಜೆ ಹಾಗೂ ಅಭಿಷೇಕದ ಸಂದರ್ಭದಲ್ಲಿ ಉಪಸ್ಥಿತರಿರಲು ಸಾಧ್ಯವಾಗದ ಕಾರಣ, ಅವರ ಆಶಯದಂತೆ ನಾವು ಎಲ್ಲರೂ ಸೇರಿ ಅವರ ಕುಟುಂಬದ ಹೆಸರಿನಲ್ಲಿ ಮಹಾಲಕ್ಷ್ಮಿ ತಾಯಿಗೆ ವಿಶೇಷ ಪೂಜೆ ಮತ್ತು ಅಭಿಷೇಕವನ್ನು ನೆರವೇರಿಸಿದೆವು. ಈ ಧಾರ್ಮಿಕ ಕಾರ್ಯಕ್ರಮದಲ್ಲಿ ನಾವೆಲ್ಲರೂ ಭಾಗವಹಿಸಿ ದೇವಿಯ ದರ್ಶನ ಪಡೆದು ಕುಟುಂಬದ ಸುಖ, ಶಾಂತಿ, ಆರೋಗ್ಯ, ಐಶ್ವರ್ಯ ಮತ್ತು ಸಮೃದ್ಧಿಗಾಗಿ ಪ್ರಾರ್ಥಿಸಿದೆವು.
ಡಾ, ಗೌತಮ್ ಚೌದರಿ ಅವರು ತಮ್ಮ ಕುಟುಂಬದ ಮೇಲೆ ಅಪಾರ ಪ್ರೀತಿ, ಅಭಿಮಾನ ಮತ್ತು ಕಾಳಜಿ ಹೊಂದಿದ್ದು, ಕುಟುಂಬದ ಧಾರ್ಮಿಕ ಸಂಪ್ರದಾಯ ಹಾಗೂ ದೇವರ ಮೇಲಿನ ಭಕ್ತಿಯನ್ನು ಮುಂದುವರಿಸುವ ಉದ್ದೇಶದಿಂದ ಈ ಪೂಜೆ ಮತ್ತು ಅಭಿಷೇಕವನ್ನು ನೆರವೇರಿಸುವಂತೆ ಆಶಯ ವ್ಯಕ್ತಪಡಿಸಿದ್ದರು. ಅವರ ಈ ಭಕ್ತಿ ಭಾವ ಮತ್ತು ಕುಟುಂಬದ ಮೇಲಿನ ಕಾಳಜಿ ಮೆಚ್ಚುವಂತಹದ್ದಾಗಿದೆ.
ಚೌದರಿ ಮನೆತನವು ದೊಡ್ಡ ಹಾಗೂ ಗೌರವಾನ್ವಿತ ಕುಟುಂಬವಾಗಿದ್ದು, ಕುಟುಂಬದ ಒಗ್ಗಟ್ಟು, ಪ್ರೀತಿ, ವಿಶ್ವಾಸ ಮತ್ತು ಹಿರಿಯರು ಹಾಕಿ ಕೊಟ್ಟ ಸಂಸ್ಕಾರಗಳು ಮುಂದಿನ ಪೀಳಿಗೆಗೂ ಇದೇ ರೀತಿ ಮುಂದುವರಿಯಲಿ. ಡಾ, ಗೌತಮ್ ಚೌದರಿ ಅವರ ತಂದೆಯವರಾದ ದಿವಂಗತ ರೈಗೊಂಡಪ್ಪ ಚೌದರಿ ಅವರ ಸ್ಮರಣೆ ಸದಾ ಕುಟುಂಬದ ಹೃದಯದಲ್ಲಿ ಉಳಿದಿದೆ. ತಂದೆಯವರು ಇಂದು ನಮ್ಮೊಂದಿಗಿಲ್ಲದಿದ್ದರೂ ಅವರ ಆದರ್ಶ, ಪರಿಶ್ರಮ, ತ್ಯಾಗ ಮತ್ತು ಸಂಸ್ಕಾರಗಳು ಕುಟುಂಬಕ್ಕೆ ಸದಾ ಮಾರ್ಗದರ್ಶನವಾಗಿವೆ.

ಸ್ವರ್ಗಸ್ಥರಾಗಿರುವ ತಂದೆಯವರ ಆತ್ಮಕ್ಕೆ ಶಾಂತಿ ಹಾಗೂ ಸದ್ಗತಿ ದೊರೆಯಲಿ ಎಂದು ಸದಾ ಪ್ರಾರ್ಥಿಸುತ್ತಾರೆ. ತಾಯಿಯವರ ಆಶೀರ್ವಾದವೂ ಡಾ, ಗೌತಮ್ ಚೌದರಿ ಹಾಗೂ ಇಡೀ ಕುಟುಂಬದ ಮೇಲೆ ಸದಾ ಇರಲಿ ಎಂಬುದು ನಮ್ಮ ಹಾರೈಕೆ.
ಈ ಶುಭ ಸಂದರ್ಭದಲ್ಲಿ ಶ್ರೀ ಮಹಾಲಕ್ಷ್ಮಿ ತಾಯಿಯಲ್ಲಿ ನಮ್ಮೆಲ್ಲರ ಪ್ರಾರ್ಥನೆ ಏನೆಂದರೆ, ಡಾ, ಗೌತಮ್ ಚೌದರಿ ಹಾಗೂ ಅವರ ಸಮಸ್ತ ಚೌದರಿ ಕುಟುಂಬಕ್ಕೆ ಉತ್ತಮ ಆರೋಗ್ಯ, ದೀರ್ಘಾಯುಷ್ಯ, ಸುಖ, ಶಾಂತಿ, ನೆಮ್ಮದಿ, ಐಶ್ವರ್ಯ ಮತ್ತು ಸರ್ವಾಂಗೀಣ ಅಭಿವೃದ್ಧಿಯನ್ನು ಕರುಣಿಸಲಿ. ಅವರ ಪ್ರತಿಯೊಂದು ಕಾರ್ಯದಲ್ಲಿಯೂ ಯಶಸ್ಸು ದೊರೆಯಲಿ. ಕುಟುಂಬದ ಕೀರ್ತಿ ಮತ್ತು ಗೌರವ ಇನ್ನಷ್ಟು ಹೆಚ್ಚಾಗಲಿ. ಮುಂದಿನ ದಿನಗಳಲ್ಲಿಯೂ ಇದೇ ರೀತಿ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿ ಕೊಳ್ಳುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದರು.
ಡಾ, ಗೌತಮ್ ಚೌದರಿ ಅವರ ಆಶಯದಂತೆ ಅವರ ಕುಟುಂಬದ ಹೆಸರಿನಲ್ಲಿ ನಡೆದ ಈ ಪವಿತ್ರ ಪೂಜೆ ಹಾಗೂ ಅಭಿಷೇಕದಲ್ಲಿ ನಾವೆಲ್ಲರೂ ಭಾಗವಹಿಸಿದ್ದು ನಮ್ಮ ಪಾಲಿಗೆ ಸಂತೋಷ ಮತ್ತು ಧನ್ಯತೆಯ ಸಂಗತಿಯಾಗಿದೆ. ಮಹಾಲಕ್ಷ್ಮಿ ತಾಯಿಯ ಕೃಪಾಕಟಾಕ್ಷ ಚೌದರಿ ಕುಟುಂಬದ ಮೇಲಷ್ಟೇ ಅಲ್ಲದೆ ಸಮಸ್ತ ದೇವಣಗಾಂವ್ ಗ್ರಾಮದ ಜನರ ಮೇಲೆಯೂ ಸದಾ ಇರಲಿ ಎಂದು ಹಾರೈಸುತ್ತೇವೆ.
ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಗಾಲಿಬಸಾಹೇಬ ನಾಗಾವಿ ದೇವಣಗಾಂವ
