SAVT ಕಾಲೇಜ್ ವಿದ್ಯಾರ್ಥಿಗಳಿಗೆ ಶಾಸಕರು ಭರವಸೆಯ ಮಾತಿನಂತೆ 25 ಲಕ್ಷ ರೂಪಾಯಿಗಳ ಅನುದಾನದಲ್ಲಿ ಸುಸಜ್ಜಿತವಾದ ಹೈಟೆಕ್ ಶೌಚಾಲಯ – ನಿರ್ಮಿಸಿ ವಿದ್ಯಾರ್ಥಿಗಳಿಂದ ಉದ್ಘಾಟನೆ ನೆರವೇರಿಸಿದರು.
ಕೂಡ್ಲಿಗಿ ನ.18




ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕೂಡ್ಲಿಗಿ ಪಟ್ಟಣದ ಕೂಡ್ಲಿಗಿದಲ್ಲಿ ಮಾನ್ಯ ಶಾಸಕರಾದ ಎನ್.ಟಿ. ಶ್ರೀನಿವಾಸ್ ಅವರು ಎಸ್.ಎ.ವಿ.ಟಿ (SAVT) ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ನೀಡಿದ ಭರವಸೆಯಂತೆ ₹25 ಲಕ್ಷ ಅನುದಾನದಲ್ಲಿ ನೂತನ ಶೌಚಾಲಯವನ್ನು ನಿರ್ಮಿಸಿ ಕೊಟ್ಟಿರುವುದಕ್ಕೆ ಕಾಲೇಜಿನ ವಿದ್ಯಾರ್ಥಿನಿ ಹಾಗೂ ವಿದ್ಯಾರ್ಥಿಗಳಿಂದ ರಿಬ್ಬನ್ ಕಟ್ ಮಾಡುವುದರ ಮೂಲಕ ಶಾಸಕರು ಹಾಗೂ ಕಾಲೇಜಿನ ಪ್ರಾಚಾರ್ಯರು, ಉದ್ಘಾಟನೆ ಮಾಡಿದರು.
ವಿದ್ಯಾರ್ಥಿಗಳ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ವಿಶೇಷ ಕಾಳಜಿ ವಹಿಸಿ, ತಾವು ನೀಡಿದ್ದ ಭರವಸೆಯಂತೆ 25 ಲಕ್ಷ ರೂಪಾಯಿಗಳ ಅನುದಾನದಲ್ಲಿ ಸುಸಜ್ಜಿತ ಶೌಚಾಲಯವನ್ನು ಮಹಿಳೆಯರಿಗೆ, ವಿಕಲ ಚೇತನರಿಗೆ ಪುರುಷರಿಗೆ ಸುಸಜ್ಜಿತವಾದ ಹೈಟೆಕ್ ಶೌಚಾಲಯವನ್ನು ನಿರ್ಮಿಸಿ ಕೊಟ್ಟಿದ್ದಾರೆ.

ವಿದ್ಯಾರ್ಥಿಗಳ ಬಹುದಿನಗಳ ಬೇಡಿಕೆಯನ್ನು ಈಡೇರಿಸಿ, ಕಾಲೇಜಿನ ಶೈಕ್ಷಣಿಕ ಹಾಗೂ ಸ್ವಚ್ಛತಾ ಪರಿಸರಕ್ಕೆ ನೆರವಾದ ಮಾನ್ಯ ಶಾಸಕರಿಗೆ ಕಾಲೇಜಿನ ಪ್ರಾಚಾರ್ಯರು, ಬೋಧಕ ಬೋಧಕೇತರ ಸಿಬ್ಬಂದಿ ಹಾಗೂ ಸಮಸ್ತ ವಿದ್ಯಾರ್ಥಿ ವೃಂದದ ಪರವಾಗಿ ತುಂಬು ಹೃದಯದ ಕೃತಜ್ಞತೆಗಳನ್ನು ಸಲ್ಲಿದರು.
ಇದೇ ಸಂದರ್ಭದಲ್ಲಿ ಈ ಹಿಂದೆ ಕಾಲೇಜಿನ ಉಪನ್ಯಾಸಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಶಾಸಕರು ಸ್ಮಾರ್ಟ್ ಬೋರ್ಡ್ ನೀಡುವುದಾಗಿ ಭರವಸೆ ನೀಡಿದ ಕಾರಣ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗಾಗಿ ಶಾಸಕರ ತಂದೆಯವರಾದ ದಿವಂಗತ ಎನ್ ಟಿ ಬೊಮ್ಮಣ್ಣ ನವರ ಸ್ಮರಣಾರ್ಥಕವಾಗಿ ಸ್ಮಾರ್ಟ್ ಬೋರ್ಡ್ ಸಹ ನೀಡಿರುವುದಕ್ಕೆ ಉಪನ್ಯಾಸಕರಿಂದ ಶಾಸಕರಿಗೆ ಶಾಲ್ ಹಾಗೂ ಆಹಾರವನ್ನು ಹಾಕುವುದರೊಂದಿಗೆ ಸನ್ಮಾನಿಸಿ, ವಿದ್ಯಾರ್ಥಿಗಳಿಂದ ಧನ್ಯವಾದಗಳು ತಿಳಿಸಿದರು.
ಜಿಲ್ಲಾ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರಾಘವೇಂದ್ರ ಬಿ.ಸಾಲುಮನೆ ಕೂಡ್ಲಿಗಿ
