ನಾಗ ಮಹಾಶಯರ ಸರಳ ಭಕ್ತಿ ಅಸಾಧಾರಣವಾದದ್ದು – ಜಿ.ಯಶೋಧಾ ಪ್ರಕಾಶ್.

ಚಳ್ಳಕೆರೆ ನ.19

ಆದರ್ಶ ಗೃಹಸ್ಥ ಭಕ್ತರಾದ ನಾಗ ಮಹಾಶಯರು ಶ್ರೀಮಾತೆ ಶಾರದಾದೇವಿಯವರ ಮೇಲೆ ಇಟ್ಟಿದ್ದ ಸರಳ ಮುಗ್ಧ ಭಕ್ತಿಯು ಅಸಾಧಾರಣವಾದದ್ದು ಎಂದು ಚಳ್ಳಕೆರೆಯ ಶಿವ ನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದ ಮುಖ್ಯಸ್ಥರಾದ ಶ್ರೀಮತಿ ಜಿ ಯಶೋಧಾ ಪ್ರಕಾಶ್ ತಿಳಿಸಿದರು.

ಶಿವ ನಗರದ ತಮ್ಮ ಜಿ.ವಿ.ಎಸ್ ನಿವಾಸದಲ್ಲಿ ಆಯೋಜಿಸಿದ್ದ ವಾರದ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು “ಶ್ರೀಶಾರದಾದೇವಿ ಜೀವನಗಂಗಾ” ಗ್ರಂಥ ಪಾರಾಯಣ ಮಾಡುತ್ತ “ಮಾತೆಯ ಮಡಿಲು” ಎಂಬ ಅಧ್ಯಾಯವನ್ನು ಓದುತ್ತಾ ಮಾತನಾಡಿದರು.

ಸತ್ಸಂಗದ ಆರಂಭದಲ್ಲಿ “ಕಾರ್ತಿಕ ಮಾಸ” ದ ಪ್ರಯುಕ್ತ ಯತೀಶ್ ಎಂ ಸಿದ್ದಾಪುರ ನೇತೃತ್ವದಲ್ಲಿ ಶಿವನ ಭಜನೆ, ಶ್ರೀಮದ್ ಭಗವದ್ಗೀತೆಯ ಜ್ಞಾನ ಯೋಗದ ಶ್ಲೋಕಗಳ ಕಲಿಕಾ ತರಗತಿ ಮತ್ತು ಪ್ರಸಾದ ವಿನಿಯೋಗ ನಡೆಯಿತು.‌‌

ಸತ್ಸಂಗ ಸಭೆಯಲ್ಲಿ ಜಯಶೀಲಮ್ಮ, ಭಾಗ್ಯಲಕ್ಷ್ಮೀ, ದಾಕ್ಷಾಯಣಿ, ನಾಗರತ್ನಮ್ಮ, ವಿಜಯಲಕ್ಷ್ಮೀ, ಜಯಮ್ಮ, ಭ್ರಮರಂಬಾ, ಶೈಲಜಾ, ರಶ್ಮಿ, ಪಿ.ಎಸ್ ಮಾಣಿಕ್ಯ ಸತ್ಯನಾರಾಯಣ ಭಾಗವಹಿಸಿದ್ದರು .

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button