💐”ಹುಟ್ಟು ಅನಿಶ್ಚಿತ… ಸಾವು ಶಾಶ್ವತ… ಆದರೆ ಪ್ರೀತಿ, ವಿಶ್ವಾಸ ಮತ್ತು ಬಾಂಧವ್ಯಗಳು ಸದಾ ಅಮರ..!”💐

ಹುಟ್ಟು ಅನಿಶ್ಚಿತ, ಸಾವು ಶಾಶ್ವತ. ಆದರೆ ಈ ಹುಟ್ಟು ಮತ್ತು ಸಾವಿನ ನಡುವಿನ ಬದುಕಿನಲ್ಲಿ ಸಾವಿರಾರು ಜನರ ಪ್ರೀತಿ, ವಿಶ್ವಾಸ ಹಾಗೂ ಅಭಿಮಾನವನ್ನು ಗಳಿಸುವುದು ಅಷ್ಟು ಸುಲಭದ ಮಾತಲ್ಲ.



ನಮ್ಮ ಜನಮನ ಧ್ವನಿ ಸುದ್ದಿ ಕನ್ನಡ ವಾಹಿನಿಗೆ ಕೇವಲ ಸುದ್ದಿ ವಾಚಕರಾಗಿ ಪರಿಚಯವಾದ ನೀವು, ಇಂದು ನಮ್ಮ ವಾಹಿನಿಯ ಒಂದು ಅವಿಭಾಜ್ಯ ಅಂಗವಾಗಿ, ಕುಟುಂಬದ ಒಬ್ಬ ಆತ್ಮೀಯ ಸಹೋದರಿಯಂತೆ ಎಲ್ಲರೊಂದಿಗೆ ಪ್ರೀತಿ, ವಿಶ್ವಾಸ ಹಾಗೂ ಆತ್ಮೀಯತೆಯ ಭಾವನೆಗಳನ್ನು ಹಂಚಿಕೊಳ್ಳುತ್ತಿರುವುದು ನಿಮ್ಮ ದೊಡ್ಡ ಗುಣವಾಗಿದೆ.
ನಿಮ್ಮ ಮಾತಿನ ಮಧುರತೆ, ಸರಳ ವ್ಯಕ್ತಿತ್ವ, ಆತ್ಮೀಯ ಒಡನಾಟ ಹಾಗೂ ವೃತ್ತಿಯ ಮೇಲಿನ ನಿಷ್ಠೆ ನಮ್ಮೆಲ್ಲರ ಮನಸ್ಸಿನಲ್ಲಿ ವಿಶೇಷ ಸ್ಥಾನವನ್ನು ಪಡೆದುಕೊಂಡಿದೆ.
ಆದ್ದರಿಂದ ನಮ್ಮ ಜನಮನ ಧ್ವನಿ ಸುದ್ದಿ ಕನ್ನಡ ವಾಹಿನಿಯ ಸಂಪಾದಕರಾದ ಬಸವರಾಜ್ ಪಡಶೆಟ್ಟಿ, ಉಪಸಂಪಾದಕರಾದ ಬಸವರಾಜ್ ಸಜ್ಜನ್, ವರದಿಗಾರರಾದ ಯಶೋಧ ಟಿ. ಮಾಲೂರು, ಪ್ರಮೋದ್ ಮಾನೂರ್, ಭೀಮಪ್ಪ ಹಚ್ಚಾಳ (ದೇವರ ಹಿಪ್ಪರಗಿ), ಸುಧಾಕರ್ ಬಿರಾದಾರ್ ಹಾಗೂ ಜನಮನ ಧ್ವನಿಸುದ್ದಿ ಕನ್ನಡ ವಾಹಿನಿ ಕುಟುಂಬದ ಸಮಸ್ತ ಸದಸ್ಯರ ಪರವಾಗಿ ನಮ್ಮ ಪ್ರೀತಿಯ ಕುಟುಂಬದ ಸಹೋದರಿ ಹಾಗೂ ಸುದ್ದಿ ವಾಚಕರಾದ ಶ್ರುತಿ ಗಿರೀಶ್ ಮೇಡಂ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.
ನಿಮ್ಮ ಜೀವನದಲ್ಲಿ ಸದಾ ಸುಖ, ಶಾಂತಿ, ನೆಮ್ಮದಿ ಮತ್ತು ಸಂತೋಷ ನೆಲೆಸಿರಲಿ. ನಿಮ್ಮ ಪ್ರತಿಯೊಂದು ಕನಸು ನನಸಾಗಲಿ. ಬದುಕಿನ ಪ್ರತಿಯೊಂದು ಹೆಜ್ಜೆಯಲ್ಲೂ ಯಶಸ್ಸು ನಿಮ್ಮದಾಗಲಿ.
ನಿಮ್ಮಲ್ಲಿರುವ ಪ್ರತಿಭೆ ಕೇವಲ ನಮ್ಮ ವಾಹಿನಿಗೆ ಸೀಮಿತವಾಗದೆ, ನಾಡಿನ ನೂರಾರು ವಾಹಿನಿಗಳಿಗೆ ನಿಮ್ಮ ಸುಮಧುರ ಧ್ವನಿಯ ಮೂಲಕ ಬೆಳಕಾಗಲಿ. ನಿಮ್ಮ ಪ್ರತಿಭೆ ರಾಜ್ಯಾದ್ಯಂತ ಪ್ರಸಿದ್ಧಿ ಪಡೆದು, ಇನ್ನೂ ಎತ್ತರದ ಸ್ಥಾನಮಾನಗಳನ್ನು ಅಲಂಕರಿಸುವಂತಾಗಲಿ ಎಂದು ಭಗವಂತನಲ್ಲಿ ಹೃತ್ಪೂರ್ವಕವಾಗಿ ಪ್ರಾರ್ಥಿಸುತ್ತೇವೆ.
ನೀವು ನಮ್ಮ ವಾಹಿನಿಯ ಕೇವಲ ಸುದ್ದಿ ವಾಚಕರಲ್ಲ… ನಮ್ಮ ಕುಟುಂಬದ ಪ್ರೀತಿಯ ಸಹೋದರಿ. ನಿಮ್ಮೊಂದಿಗಿನ ಈ ಆತ್ಮೀಯ ಬಾಂಧವ್ಯ ಸದಾ ಹೀಗೆಯೇ ಮುಂದುವರಿಯಲಿ.
🎂 ಮತ್ತೊಮ್ಮೆ ನಮ್ಮ ಪ್ರೀತಿಯ ಶ್ರುತಿ ಗಿರೀಶ್ ಮೇಡಂ ಅವರಿಗೆ ಜನ್ಮ ದಿನದ ಹಾರ್ದಿಕ ಶುಭಾಶಯಗಳು.💐💐🎂🎂💐💐
ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಗಾಲಿಬಸಾಹೇಬ ನಾಗಾವಿ ದೇವಣಗಾಂವ

