ಶಾಲಾ ವಿದ್ಯಾರ್ಥಿಗಳಿಗೆ ಆರೋಗ್ಯ – ಅರಿವು ಜಾಗೃತಿ ಕಾರ್ಯಕ್ರಮ.

ಬೆಣ್ಣೂರ ನ.19

ಜಿಲ್ಲಾ ಆರೊಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಾಗಲಕೋಟ, ತಾಲೂಕಾ ಆರೋಗ್ಯ ಅಧಿಕಾರಿಗಳು, ಪ್ರಾಥಮಿಕ ಆರೋಗ್ಯ ಕೇಂದ್ರ ಬೆಣ್ಣೂರ ಶ್ರೀ ಮಲ್ಲಿಕಾರ್ಜುನ ಪ್ರೌಢ ಶಾಲೆ ಬೆಣ್ಣೂರ ಸಹಯೋಗದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಆರೋಗ್ಯ ಅರಿವು ಜಾಗೃತಿ ಆಯೋಜಿಸಲಾಗಿತ್ತು. ಶ್ರೀ ಮಲ್ಲಿಕಾರ್ಜುನ ಪ್ರೌಢ ಶಾಲಾ ಮುಖ್ಯ ಗುರುಗಳಾದ ಎಚ್ ಜಿ ಹುಲ್ಲಿಕೇರಿ ಅಧ್ಯಕ್ಷತೆ ವಹಿಸಿದ್ದರು.

ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಶ್ರೀ ಎಸ್ ಎಸ್ ಅಂಗಡಿಯವರು ಪ್ರಾಸ್ತಾವಿಕವಾಗಿ ಕಡಿತ ಚಿಕ್ಕದು ಹಾನಿ ದೊಡ್ಡದು ಶುದ್ಧ ನೀರು ಆಹಾರ ಸೇವನೆ ವೈಯಕ್ತಿಕ ಸ್ವಚ್ಛತೆ ಆರೋಗ್ಯಕರ ಜೀವನಕ್ಕೆ ಅಡಿಪಾಯ ಎಂಬ ಘೋಷ ವಾಖ್ಯೆಯೊಂದಿಗೆ ಆರೋಗ್ಯವೇ ಭಾಗ್ಯ ಶಿಕ್ಷಣವೇ ಶಕ್ತಿ ದಿನಪ್ರತಿ ವಯಕ್ತಿಕ ಸ್ವಚ್ಛತೆಗೆ ಆದ್ಯತೆ ಶುದ್ಧ ನೀರು ಸೇವನೆ ಆಹಾರ ಸೇವನೆ ಮುಂಚೆ ಕೈಗಳನ್ನು ಸ್ವಚ್ಛವಾಗಿ ತೊಳೆಯಿರಿ ಬಹಳ ದಿನ ಶೇಖರಿಸಿದ ಆಹಾರ ಸೇವನೆ ಬೇಡ ವೈಯಕ್ತಿಕ ಸ್ವಚ್ಛತೆ ಶುದ್ಧ ನೀರು ಆಹಾರ ಸೇವನೆ ಮಾಡಬೇಕು ಹಾಗೂ ಸೊಳ್ಳೆಗಳು ಕಚ್ಚುವಿಕೆಯಿಂದ ಬರುವ ಡೆಂಗ್ಯೂರೋಗ, ಚಿಕೂನ ಗುನ್ಯಾ, ಮಲೇರಿಯಾ ಆನೇಕಾಲು ಮೆದಳು ಜ್ವರ ನಿಯಂತ್ರಣ ಮುಂಜಾಗೃತಿ ನೀರಿನ ಸಂಗ್ರಹ ಪರಿಕರಗಳ ಸ್ವಚ್ಛತೆ ನೀರಿನ ಸಂಗ್ರಹಗಳ ಮೇಲೆ ತಪ್ಪದೇ ಮುಚ್ಚಳಿಕೆ ಹಾಕಬೇಕು ಟೆಂಗಿನ ಚಿಪ್ಪು ಒಡೆದ ಬಾಟಲ್ ಟಾಯರ್ ಟ್ಯೂಬ್ ಕಸ ವಿಲೇವಾರಿ ಮಾಡಿ ವಾರಕ್ಕೊಮ್ಮೆ ಮನೆ ಸುತ್ತ ಮುತ್ತ ಪರಿಸರ ಸ್ವಚ್ಛತೆ ಕಾಪಾಡಬೇಕು.

ಸ್ವಯಂ ರಕ್ಷಣಾ ಕ್ರಮಗಳಾದ ಸೊಳ್ಳೆ ಬತ್ತಿ ಪರದೆ ಮೈತುಂಬಾ ಬಟ್ಟೆ ಧರಿಸಬೇಕು ಮನೆ ಕಿಟಕಿ ಜಾಲರಿ ಹಾಕಿಸ ಬೇಕು ಕೀಟಜನ್ಯ ರೋಗಗಳ ತಡೆಗೆ ವಿದ್ಯಾರ್ಥಿಗಳು ಸಹಕಾರ ಮುಖ್ಯವಾಗಿದೆ ಎಂದು ಮಾಹಿತಿ ಆರೋಗ್ಯ ಶಿಕ್ಷಣ ನೀಡಲಾಯಿತು.

ಪ್ರೌಢ ಶಾಲಾ ಸಹ ಶಿಕ್ಷಕರಾದ ಸಿ ಎಸ್ ಹುಲಿಕಂತಿಮಠ, ವಾಯ್ ಆರ್ ಭರಮಣ್ಣವರ, ಎಲ್ ಎ ಬಡೇಖಾನ, ಜಿ ಎಸ್ ಚೌದ್ರಿ ಆರ್ ಎಸ್ ಬುದಿಹಾಳ, ಎಲ್ ಎನ್ ಭಜೆಂತ್ರಿ, ಗುರು ವೃಂದವರು ಆರೋಗ್ಯ ಇಲಾಖೆ ಅಧಿಕಾರಿಗಳು ಪ್ರೌಢ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button