ರಾಷ್ಟ್ರೀಯ ಸಂವಿಧಾನ ದಿನವನ್ನು ಭಾರತದ ಸಂವಿಧಾನದ ಪೀಠಿಕೆಯನ್ನು ಓದುವ ಮೂಲಕ – ದಾಂಪತ್ಯ ಜೀವನಕ್ಕೆ ಕಾಲಿಟ್ಟ ನವ ದಂಪತಿಗಳು.
ಕೂಡ್ಲಿಗಿ ನ.27




ವಿಜಯನಗರ ಜಿಲ್ಲೆಯ ಕೂಡ್ಲಿಗಿಯ ಸಮಾಜ ಕಲ್ಯಾಣ ಇಲಾಖೆಯಲ್ಲಿ ಸರಳವಾಗಿ ಸಂವಿಧಾನದ ದಿನಾಚರಣೆಯನ್ನು ಅಂಬೇಡ್ಕರ್ ರವರ ಹಾಗೂ ಸಂವಿಧಾನದ ಪೀಠಿಕೆಯ ಭಾವ ಚಿತ್ರವನ್ನು ಇಟ್ಟು ಇಲಾಖೆಯ ಮ್ಯಾನೇಜರಾದ ಫಕೀರಪ್ಪ ಹಾಗೂ ಸಿಬ್ಬಂದಿ ವರ್ಗದವರೊಂದಿಗೆ ಸಂವಿಧಾನದ ಪೀಠಿಕೆ ಓದುವುದರೊಂದಿಗೆ ಪಟ್ಟಣದ ಪ್ರಮುಖ ದಲಿತ ಮುಖಂಡರುಗಳಾದ ಹೆಚ್. ಪರಶುರಾಮ್, ಬಿ.ಶಿವರಾಜ್, ರಾಘವೇಂದ್ರ ಸಾಲಮನೆ, ಡಿ.ಎಚ್ ದುರ್ಗೇಶ್ ವಕೀಲರು ಈ ಸಂದರ್ಭದಲ್ಲಿ ಬಂಡೆ ರಾಘವೇಂದ್ರ ಹಾಗೂ ಬಿ.ಮಹೇಶ್, ಸಂವಿಧಾನದ ಕುರಿತು ಮಾತನಾಡಿರು,

ಸಾಸಲವಾಡ ಶಿವಣ್ಣ, ಕಚೇರಿಯಲ್ಲಿ ಭಾವ ಚಿತ್ರಕ್ಕೆ ಪುಷ್ಪ ನಮನಗಳು ಸಲ್ಲಿಸಿ ಕಾರ್ಯಕ್ರಮವನ್ನು ಮುಗಿಸಿ ಕೊಂಡು ನೇರವಾಗಿ ಎಲ್ಲರೂ ಡಾ, ಬಿ.ಆರ್ ಅಂಬೇಡ್ಕರ್ ಭವನದಲ್ಲಿ ನಡೆಯುತ್ತಿದ್ದಂತಹ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಾದ ಫಕೀರಪ್ಪ ಹಾಗೂ ಮುಖಂಡರುಗಳು ವಿವಾಹ ನೆರವೇರಿಸಿದಂತ ಪರಶುರಾಮ್ ಪೀಟರ್ ಹಾಗೂ ಮಾರೇಶ್ ಪೀಟರ್ ರವರ ಸಮ್ಮುಖದಲ್ಲಿ ಸಾಲುಮನೆ ಕುಟುಂಬ ವಂಶಸ್ಥರಿಂದ ನಡೆದಂತಹ ವಿವಾಹದಲ್ಲಿ ಎಸ್ ಗಣೇಶ ಜೊತೆ ಉಮಾ ಇವರ ಮಾಂಗಲ್ಯ ಧಾರಣೆಯ ನಂತರ ನವ ದಂಪತಿಗಳು ನವಂಬರ್ 26 ಭಾರತ ದೇಶಕ್ಕೆ ಸಂವಿಧಾನವು ರಾಷ್ಟ್ರೀಯ ಸಂವಿಧಾನ ದಿನವನ್ನು ಭಾರತದ ಸಂವಿಧಾನದ ಪೀಠಿಕೆಯನ್ನು (ಪ್ರಸ್ತಾವನೆ) ಓದುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವುದು ಅತ್ಯಂತ ಅರ್ಥಪೂರ್ಣ ಮತ್ತು ಮಾದರಿಯಾದ ನಡೆಯಾಗಿದೆ.

ಈ ಸಂದರ್ಭದಲ್ಲಿ ವಿವಾಹಕ್ಕೆ ನೆರೆದಂತ ಸಾವಿರಾರು ಮಂದಿ ಸಂವಿಧಾನದ ಪೀಠಿಕೆಯನ್ನು ಕೈಗಳನ್ನು ಚಾಚಿ, ಓದಿರುವುದು ವಿಶೇಷವಾಗಿತ್ತು.
ಇತ್ತೀಚಿನ ದಿನಗಳಲ್ಲಿ ಅನೇಕ ಯುವ ಜನರು ಮದುವೆಗಳನ್ನು ಕೇವಲ ಸಾಂಪ್ರದಾಯಿಕ ಆಚರಣೆಗಳಿಗೆ ಸೀಮಿತ ಗೊಳಿಸದೆ, ಸಂವಿಧಾನದ ಮೌಲ್ಯಗಳು, ಸಮಾನತೆ ಮತ್ತು ವೈಚಾರಿಕತೆಯ ಅಡಿಯಲ್ಲಿ ನಡೆಸಲು ಮುಂದಾಗುತ್ತಿದ್ದಾರೆ.
ಇದನ್ನು ಸಾಮಾನ್ಯವಾಗಿ ‘ಸಂವಿಧಾನ ಬದ್ಧ ವಿವಾಹ’ ಅಥವಾ ‘ಮಂತ್ರ ಮಾಂಗಲ್ಯ’ ಮಾದರಿಯ ಸರಳ ಹಾಗೂ ವೈಚಾರಿಕ ವಿವಾಹ ಎಂದು ಕರೆಯಲಾಗುತ್ತದೆ.
ಈ ಕ್ಷಣದ ವಿಶೇಷತೆ ಯಾಗಿತ್ತು ಸಮಾನತೆಯ ಸಂಕೇತ:-

ಸಂವಿಧಾನದ ಪೀಠಿಕೆಯು ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ಮೌಲ್ಯಗಳನ್ನು ಸಾರುತ್ತದೆ. ದಾಂಪತ್ಯ ಜೀವನದಲ್ಲೂ ಪರಸ್ಪರ ಗೌರವ ಮತ್ತು ಸಮಾನತೆಯನ್ನು ಕಾಪಾಡಿ ಕೊಳ್ಳುವ ಪ್ರತಿಜ್ಞೆಯಾಗಿ ಈ ಕ್ಷಣ ಗುರುತಿಸಿ ಕೊಳ್ಳುತ್ತದೆ.
ಸಾಮಾಜಿಕ ಸಂದೇಶ:-
ಅಂಬೇಡ್ಕರ್ ಭವನದಂತಹ ಸಾರ್ವಜನಿಕ ಮತ್ತು ಐತಿಹಾಸಿಕ ಮಹತ್ವದ ಸ್ಥಳದಲ್ಲಿ ಸಂವಿಧಾನದ ಆಶಯಗಳಿಗೆ ಸಾಕ್ಷಿಯಾಗಿ ಮದುವೆಯಾಗುವ ಮೂಲಕ, ಜಾತಿ-ಮತಗಳ ಭೇದವಿಲ್ಲದೆ ಪ್ರಗತಿಪರ ಚಿಂತನೆಗಳನ್ನು ಸಮಾಜಕ್ಕೆ ತಲುಪಿಸುವ ಪ್ರಯತ್ನ ಇದಾಗಿದೆ.
ಈ ಒಂದು ಮಾದರಿ ನಡೆ:-
ದುಂದುವೆಚ್ಚ ಮತ್ತು ಮೂಢ ನಂಬಿಕೆಗಳನ್ನು ಬದಿಗಿಟ್ಟು, ದೇಶದ ಸರ್ವೋಚ್ಚ ಗ್ರಂಥವಾದ ಸಂವಿಧಾನಕ್ಕೆ ಗೌರವ ಸಲ್ಲಿಸುತ್ತಾ ಹೊಸ ಬದುಕು ಆರಂಭಿಸುವುದು ಇಂದಿನ ಪೀಳಿಗೆಗೆ ಸ್ಫೂರ್ತಿ ದಾಯಕವಾಗಿದೆ.
ಜಿಲ್ಲಾ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರಾಘವೇಂದ್ರ ಬಿ ಸಾಲುಮನೆ ಕೂಡ್ಲಿಗಿ
