ಸರ್ವರಿಗೂ ಸಮಾನತೆ ನೀಡಿದೆ ನಮ್ಮ ಸಂವಿಧಾನ – ತರೀಕೆರೆ.ಎನ್ ವೆಂಕಟೇಶ್.
ತರೀಕೆರೆ ನ.26




ಪ್ರಪಂಚದಲ್ಲಿ ಅತಿ ಶ್ರೇಷ್ಠವಾದ ಸಂವಿಧಾನ ನಮ್ಮದು ಎಂದು ಮಹಾತ್ಮ ಪ್ರೊ, ಬಿ.ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕರಾದ ತರೀಕೆರೆ ಎನ್ ವೆಂಕಟೇಶ್ ಹೇಳಿದರು.
ಅವರು ಇಂದು ಪಟ್ಟಣದ ಪುರ ಸಭೆಯಲ್ಲಿ ಏರ್ಪಡಿಸಿದ್ದ ಸಂವಿದಾನ ದಿನಾಚರಣೆಯ ಮುಖ್ಯ ಅತಿಥಿಯಾಗಿ ಅಂಬೇಡ್ಕರ್ ಅವರ ಭಾವ ಚಿತ್ರಕ್ಕೆ ಪುಷ್ಪ ಅರ್ಚನೆ ಮಾಡಿ ಮಾತನಾಡಿದರು.
ವಿವಿಧ ಜಾತಿ, ಧರ್ಮ, ಭಾಷೆಗಳನ್ನು ಹೊಂದಿರುವ ನಮ್ಮ ದೇಶದ ಸಂಸ್ಕೃತಿಯನ್ನು ಎತ್ತಿ ಹಿಡಿದು ಸರ್ವರಿಗೂ ಸಮಾನತೆಯ ಹಕ್ಕುಗಳನ್ನು, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ನಮ್ಮ ಸಂವಿಧಾನ ನೀಡಿದೆ.
ಪ್ರಪಂಚದಲ್ಲಿಯೇ ಪ್ರತಿ ದಿನ ಕ್ಷಣ ಸ್ಮರಣೆಗೆ ಕಾರಣರಾದ ವ್ಯಕ್ತಿ ಎಂದರೆ ಸಂವಿಧಾನ ಶಿಲ್ಪಿ ಡಾ, ಬಿ.ಆರ್ ಅಂಬೇಡ್ಕರ್ ರವರು ಎಂದು ಹೇಳಿದರು.
ದೇಶದ ಎಲ್ಲಾ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಪೌರ ಕಾರ್ಮಿಕರ ಜೀವನ ಮಟ್ಟ ಸುಧಾರಿಸಿದೆ, ಸರ್ಕಾರ ಎಲ್ಲಾ ಸವಲತ್ತುಗಳನ್ನು ಒದಗಿಸಿದೆ ಎಂದು ಹೇಳಿದರು.
ಪುರ ಸಭಾ ಮುಖ್ಯ ಅಧಿಕಾರಿಯಾದ ಹರೀಶ್ ಎಂ ಎನ್ ರವರು ಮಾತನಾಡಿ ನಮ್ಮ ಸಂವಿಧಾನದಿಂದ ಆಡಳಿತ ವ್ಯವಸ್ಥೆ ಅಂದರೆ ಶಾಸಕಾಂಗ ಕಾರ್ಯಾಂಗ ನ್ಯಾಯಾಂಗಗಳು ನಡೆಯುತ್ತಿವೆ.
ಸಂವಿಧಾನದಿಂದ ಕಾನೂನು ವ್ಯವಸ್ಥೆಯು ಜಾರಿಯಲ್ಲಿದೆ ಇದರಿಂದಲೇ ನಮ್ಮ ಕೆಲಸ ಕಾರ್ಯಗಳು ನಡೆಯುತ್ತಿವೆ. ಸಂವಿಧಾನವನ್ನು ಅರ್ಪಿಸಿದ ಭಾರತ ರತ್ನ ಡಾ, ಬಿ.ಆರ್ ಅಂಬೇಡ್ಕರ್ ರವರನ್ನು ಸ್ಮರಿಸಬೇಕು ಎಂದು ಹೇಳಿದರು.
ಪರಿಸರ ಅಭಿಯಂತರರಾದ ತಹೇರಾ ತಸ್ನಿಮ್, ಕಚೇರಿ ವ್ಯವಸ್ಥಾಪಕರಾದ ಪರಶುರಾಮಪ್ಪ ಎಚ್, ಸಮುದಾಯ ಸಂಘಟಕ ಅಧಿಕಾರಿ ಪ್ರಸನ್ನ ಕುಮಾರ್, ಕಂದಾಯ ಅಧಿಕಾರಿ ಯೋಗೀಶ್ ಡಿ ಎಲ್, ಹಿರಿಯ ಆರೋಗ್ಯ ನಿರೀಕ್ಷಕರಾದ ಪರಮೇಶ್, ಸಂಪತ್, ಲಿಂಗರಾಜು ಕೆ, ಅಂತೋನಿ ಕ್ರೂಸ್, ಪ್ರಕಾಶ, ಅನಿತಾ, ಕಣ್ಣನ್, ಕಿರಣ್ ಹಾಗೂ ಪುರಸಭಾ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎನ್.ವೆಂಕಟೇಶ್ ತರೀಕೆರೆ ಚಿಕ್ಕಮಗಳೂರು

