🚨ಬ್ರೇಕಿಂಗ್ ನ್ಯೂಸ್ | BREAKING NEWS🚨💥ಹಂದಾಡಿ ಪಿಡಿಓ ವಿರುದ್ಧ ಸುಳ್ಳು ಪೋಸ್ಟರ್ ಮತ್ತು ಕರೆ ಮೂಲಕ ಬೆದರಿಕೆ ಆರೋಪ – ಕಾನೂನು ಕ್ರಮಕ್ಕೆ ಅಧಿಕಾರಿ ಸಜ್ಜು.💥

ಬ್ರಹ್ಮಾವರ/ಉಡುಪಿ ನ.27

ಹಂದಾಡಿ ಗ್ರಾಮ ಪಂಚಾಯತ್‌ನ ಅಭಿವೃದ್ಧಿ ಅಧಿಕಾರಿ (ಪಿಡಿಓ) ಅವರ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಮತ್ತು ಸಾರ್ವಜನಿಕರಲ್ಲಿ ಗೊಂದಲ ಮೂಡಿಸುವ ದುರುದ್ದೇಶದಿಂದ ಕಿಡಿಗೇಡಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಹಾಗೂ ಅವಹೇಳನಕಾರಿ ಪೋಸ್ಟರ್‌ವೊಂದನ್ನು ಹರಿಬಿಟ್ಟಿದ್ದು, ಈ ಕೃತ್ಯಕ್ಕೆ ತೀವ್ರ ಖಂಡನೆ ವ್ಯಕ್ತವಾಗಿದೆ. ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತಿರುವ ಸರ್ಕಾರಿ ಅಧಿಕಾರಿಯ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳಿಲ್ಲದೆ ‘ಭ್ರಷ್ಟಾಚಾರ’ ಮತ್ತು ‘ಉಡಾಫೆ ವರ್ತನೆ’ಯಂತಹ ಗಂಭೀರ ಆರೋಪಗಳನ್ನು ಹೊರಿಸಿರುವ ಕಿಡಿಗೇಡಿಗಳ ವಿರುದ್ಧ ಕಾನೂನು ಹೋರಾಟ ನಡೆಸಿ ಪ್ರಕರಣ ದಾಖಲಿಸಲಾಗುವುದು ಎಂದು ಅಭಿವೃದ್ಧಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

🔴ಅಸಲಿ ವಿಷಯವೇನು? ಗಾಂಧಿ ಮೈದಾನದ ವಿಚಾರ ಮತ್ತು ಪೋಸ್ಟರ್ ಹಾವಳಿ🔴

ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ “ಹಂದಾಡಿ ಗ್ರಾಮ ಪಂಚಾಯತ್ ಪಿಡಿಓ ವರ್ಗಾವಣೆಗೆ ಜನಾಗ್ರಹ” ಎಂಬ ತಲೆಬರಹದಡಿ AI (ಕೃತಕ ಬುದ್ಧಿಮತ್ತೆ) ಅಥವಾ ಗ್ರಾಫಿಕ್ಸ್ ಬಳಸಿ ಸಿದ್ಧಪಡಿಸಲಾದ ವ್ಯಂಗ್ಯ ಚಿತ್ರದ ಪೋಸ್ಟರ್ ವೈರಲ್ ಆಗುತ್ತಿದೆ. ಇದರಲ್ಲಿ “ಮಿತಿ ಮೀರಿದ ಭ್ರಷ್ಟಾಚಾರ”, “ಕಾಸಿಲ್ಲದೇ ಇಲ್ಲಿ ಕೆಲಸ ನಡೆಯಲ್ಲ” ಎಂದು ಬರೆಯುವ ಮೂಲಕ ಪಂಚಾಯತ್ ಆಡಳಿತ ವ್ಯವಸ್ಥೆಗೆ ಧಕ್ಕೆ ತರುವ ಪ್ರಯತ್ನ ನಡೆದಿದೆ.

ಘಟನೆಯ ಹಿನ್ನೆಲೆಯಲ್ಲಿ, ವ್ಯಕ್ತಿಯೊಬ್ಬ “ಉಡುಪಿ ಪವರ್ ಟಿವಿ” ಯಿಂದ ಮಾತನಾಡುತ್ತಿರುವುದಾಗಿ ಹೇಳಿಕೊಂಡು ಪಿಡಿಓ ಅವರಿಗೆ ಕರೆ ಮಾಡಿ, “ಗಾಂಧಿ ಮೈದಾನದ ವಿಷಯ ಏನಾಯ್ತು?” ಎಂದು ಪ್ರಶ್ನಿಸಿದ್ದಾನೆ. ಇದಕ್ಕೆ ಪ್ರತಿಕ್ರಿಯಿಸಿದ ಪಿಡಿಓ ಅವರು, “ನೀವು ಕಚೇರಿಗೆ ಬನ್ನಿ, ದಾಖಲೆ ಕೊಡುತ್ತೇನೆ; ಎಲ್ಲಾ ರೀತಿಯ ಮಾಹಿತಿಯನ್ನೂ ನೀಡುತ್ತೇನೆ” ಎಂದು ತಿಳಿಸಿದ್ದಾರೆ. ಅದಾದ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಪಿಡಿಓ ಅವರ ವಿರುದ್ಧ ಅವಹೇಳನಕಾರಿ ಪೋಸ್ಟರ್ ಹರಿದಾಡಿದೆ.

⚠️ನಕಲಿ ಯೂಟ್ಯೂಬರ್‌ಗಳು, ನಕಲಿ ಪತ್ರಕರ್ತರ ಹಾವಳಿ, ಅಧಿಕಾರಿ ಗಂಭೀರ ಆರೋಪ⚠️

ತಮ್ಮ ಅಕ್ರಮ ಉದ್ದೇಶಗಳಿಗೆ ಅಥವಾ ಬೆದರಿಕೆ ತಂತ್ರಕ್ಕೆ ಮಣಿಯದ ಕಾರಣಕ್ಕೆ ಇಂತಹ ಸುಳ್ಳು ಪ್ರಚಾರ ಮಾಡಲಾಗಿದೆ ಎಂದು ಆರೋಪಿಸಿರುವ ಅಭಿವೃದ್ಧಿ ಅಧಿಕಾರಿಗಳು, ಕೆಲವು ಕಿಡಿಗೇಡಿಗಳು ಯೂಟ್ಯೂಬ್ ಚಾನೆಲ್‌ಗಳನ್ನು ಸೃಷ್ಟಿಸಿ ಕೊಂಡು ಅಧಿಕಾರಿಗಳನ್ನು ಹೆದರಿಸುವ ಕೆಲಸ ನಡೆಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಲ್ಲದೆ, ನಕಲಿ ಪತ್ರಕರ್ತರ ಹಾವಳಿಯಿಂದಾಗಿ ಸರ್ಕಾರಿ ಕಚೇರಿಗಳಲ್ಲಿ ಕರ್ತವ್ಯ ನಿರ್ವಹಿಸಲು ತೊಂದರೆಯಾಗುತ್ತಿದೆ ಎಂದು ಅಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಾನೂನಾತ್ಮಕವಾಗಿ RNI (ಆರ್‌ಎನ್‌ಐ) ಮಾನ್ಯತೆ ಹೊಂದಿರುವ ಪತ್ರಿಕೆಗಳು ಯಾವುವು ಮತ್ತು ಪತ್ರಕರ್ತ ಅಲ್ಲದವರು ಯಾರು ಎಂಬುದು ಸ್ಪಷ್ಟವಾಗಿ ಗೋಚರಿಸುತ್ತಿದ್ದು, ಕರೆ ಮಾಡಿ ತೊಂದರೆ ನೀಡಿರುವ ಹಾಗೂ ಸುಳ್ಳು ಪೋಸ್ಟರ್ ಹರಿ ಬಿಟ್ಟಿರುವ ಕಿಡಿಗೇಡಿಗಳ ವಿರುದ್ಧ ಕಾನೂನು ಮುಖಾಂತರ ಪ್ರಕರಣ ದಾಖಲಿಸಿ ತಕ್ಕ ಉತ್ತರ ನೀಡಲಾಗುವುದು ಎಂದು ಅಭಿವೃದ್ಧಿ ಅಧಿಕಾರಿಗಳು ಖಡಕ್ ಎಚ್ಚರಿಕೆ ನೀಡಿದ್ದಾರೆ.

🚨ಕಾನೂನು ಕ್ರಮಕ್ಕೆ ಸಜ್ಜು🚨

ಯಾವುದೇ ಒಬ್ಬ ಸರ್ಕಾರಿ ಅಧಿಕಾರಿಯ ವಿರುದ್ಧ ಆರೋಪಗಳಿದ್ದರೆ ಅದಕ್ಕೆ ಸಂಬಂಧಿಸಿದ ಮೇಲಾಧಿಕಾರಿಗಳಿಗೆ ಅಥವಾ ಸಂಬಂಧಪಟ್ಟ ಕಾನೂನು ಬದ್ಧ ವೇದಿಕೆಗಳಿಗೆ ದಾಖಲೆ ಸಹಿತ ದೂರು ನೀಡಲು ಅವಕಾಶವಿದೆ. ಅದನ್ನು ಬಿಟ್ಟು, ಅನಾಮಧೇಯವಾಗಿ ಅವಹೇಳನಕಾರಿ ಪೋಸ್ಟರ್ ಸೃಷ್ಟಿಸಿ ವೈರಲ್ ಮಾಡುವುದು ಮತ್ತು ಕರೆ ಮಾಡಿ ತೊಂದರೆ ನೀಡುವುದು ಸೈಬರ್ ಹಾಗೂ ಕಾನೂನು ಅಪರಾಧವಾಗುತ್ತದೆ. ಪಾರದರ್ಶಕವಾಗಿ ಕರ್ತವ್ಯ ನಿರ್ವಹಿಸುತ್ತಿರುವ ಪಿಡಿಓ ಅವರ ಮಾನಹಾನಿ ಮಾಡಿದ ಕಿಡಿಗೇಡಿಗಳ ವಿರುದ್ಧ ಕಾನೂನು ಹೋರಾಟ ನಡೆಸಿ ಪ್ರಕರಣ ದಾಖಲಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವರದಿ:ಆರತಿ.ಗಿಳಿಯಾರು.ಉಡುಪಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button