ಮೂರನೇ ಮದುವೆಯ ಸುಳಿವು ನೀಡಿದ ಚಿರಂಜೀವಿ ಕೊನೆಯ ಪುತ್ರಿ ಶ್ರೀ ಜಾ….!
ಮೆಗಾಸ್ಟಾರ್ ಚಿರಂಜೀವಿ ಪುತ್ರಿ ಶ್ರೀಜಾ ಮತ್ತೇ ಭಾರಿ ಸುದ್ದಿಯಲ್ಲಿದ್ದಾರೆ. ಎರಡು ಮದ್ವೆ ಆಗಿ ಇಬ್ಬರಿಂದಲೂ ದೂರವಾಗಿರುವ ಶ್ರೀಜಾ ಈಗ ಮೂರನೆಯ ಮದುವೆಯ ಸಿದ್ಧತೆಯಲ್ಲಿದ್ದಾರೆ ಎಂಬ ಸುದ್ದಿಗಳು ಎಲ್ಲೆಡೆ ಹರಿದಾಡುತ್ತಿದೆ.
“ಡಿಯರ್ 2022, ನೀನು ನನಗೆ ಬಹಳ ಮುಖ್ಯವಾದ ವ್ಯಕ್ತಿಯನ್ನು ಭೇಟಿ ಮಾಡಿಸಿರುವೆ. ನನ್ನ ಬಗ್ಗೆ ಚೆನ್ನಾಗಿ ಅರಿತಿರುವ, ನನ್ನನ್ನು ಬಹಳ ಪ್ರೀತಿಸುವ, ತುಂಬಾ ಕೇರ್ ಮಾಡುವ, ಕಷ್ಟ- ಸುಖದಲ್ಲಿ ನನಗೆ ಸಾಥ್ ನೀಡುತ್ತಿರುವ, ಯಾವಾಗಲೂ ನನಗೆ ಬೆಂಬಲವಾಗಿ ನಿಲ್ಲುವ ವ್ಯಕ್ತಿಯನ್ನು ನೀನು ಭೇಟಿ ಮಾಡಿಸಿರುವೆ. ನನ್ನ- ಅವನ ಭೇಟಿ ನಿಜಕ್ಕೂ ಬಹುದೊಡ್ಡ ಅದ್ಭುತ. ಹೊಸ ಪಯಣ ಶುರುವಾಗುತ್ತಿದೆ” ಎಂದು ತಮ್ಮ ಶ್ರೀಜಾ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸುಳಿವು ನೀಡಿದ್ದಾರೆ.
ಶ್ರೀ ಜಾ 2007 ರಲ್ಲಿ ಶಿರಿಶ್ ಭಾರದ್ವಾಜ್ ಅವರೊಂದಿಗೆ ಮದುವೆಯಾಗಿದ್ದರು. ಬಳಿಕ 2011 ರಲ್ಲಿ ಶಿರಿಶ್ ಅವರಿಗೆ ವಿಚ್ಛೇದನ ನೀಡಿದ್ದರು. ಇವರ ವಿಹಾಹ ಸಂಬಂಧದಲ್ಲಿ ಸಾಕಷ್ಟು ಬಿರುಕು ಮೂಡಿತ್ತು. ಇದು ಮೆಗಾಸ್ಟಾರ್ ಕುಟುಂಬದಲ್ಲಿ ಬಿರುಗಾಳಿ ಸೃಷ್ಟಿಸಿತ್ತು.
ನಂತರ 2016ರಲ್ಲಿ ಶ್ರೀಜಾ ಅವರು ಉದ್ಯಮಿ ಕಲ್ಯಾಣ್ ದೇವ್ ಅವರನ್ನು ಮದುವೆಯಾಗಿದ್ದರು. ಸದ್ಯ ಬಂದಿರುವ ವರದಿಗಳ ಪ್ರಕಾರ ಎಕ್ಸ್ ಕಲ್ಯಾಣ್ ದೇವ್ ಜೊತೆ ಸಂಬಂಧವನ್ನು ಕಳೆದುಕೊಳ್ಳಲು ಶ್ರೀಜಾ ಮುಂದಾಗಿದ್ದಾರೆ. ಎಲ್ಲವೂ ಅಂತಿಮಗೊಂಡಿದ್ದು, ಕಾನೂನು ಪ್ರಕಾರ ವಿಚ್ಛೇದನ ಬಾಕಿ ಇದೆ ಎಂದು ತಿಳಿದು ಬಂದಿದೆ.
ಅತ್ತ ಕಲ್ಯಾಣ್ ದೇವ್ ಕೂಡ ಇದೇ ರೀತಿ ಪೋಸ್ಟ್ ಹಾಕಿಕೊಂಡಿದ್ದಾರೆ. ಇದರಿಂದ ಸೋಶಿಯಲ್ ಮೀಡಿಯಾದಲ್ಲೂ ಶ್ರೀಜಾ ಮೂರನೇ ಮದುವೆಯಾಗಲಿದ್ದಾರೆ ಎಂಬ ಅಭಿಪ್ರಾಯಗಳು ಕೇಳಿ ಬಂದಿವೆ. 34 ವರ್ಷದ ಶ್ರೀಜಾ ಕೋನಿಡೇಲಾ ಅವರಿಗೆ ಮೊದಲ ಗಂಡನಿಂದ ಒಂದು ಮಗು ಹಾಗೂ ಎರಡನೇ ಗಂಡನಿಂದ ಒಂದು ಮಗು ಇದೆ.