ಬೊಮ್ಮಾಯಿ,ಪ್ರಧಾನಿ ಮೋದಿ ಹೇಳಿದಂತೆ ಕೇಳುವ ನಾಯಿಮರಿ,ಪ್ರಧಾನಿಯ ಮುಂದೆ ಗಡ ಗಡ ನಡುಗುವ ನಾಯಿಮರಿ – ಎಂದ ಕಾಂಗ್ರೇಸ್ ಹಿರಿಯ ನಾಯಕ ಸಿದ್ರಾಮಯ್ಯ…..!
ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬುಧವಾರ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದು, ವಿಧಾನಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರಿಗೆ ಕರ್ನಾಟಕದ ಜನತೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ಹೇಳಿದ್ದಾರೆ .
ಪ್ರಧಾನಿ ನರೇಂದ್ರ ಮೋದಿ ಅವರ ಮುಂದೆ ಸಿಎಂ ಬೊಮ್ಮಾಯಿ ಮತ್ತು ಬಿಜೆಪಿ ನಾಯಕರು ನಾಯಿಮರಿಯಂತೆ ನಡುಗುತ್ತಾರೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಸಿದ್ದರಾಮಯ್ಯ ಅವರು ಹೇಳುವ ಮುಲಕ ವಿವಾದಕ್ಕೆ ಕಾರಣರಾಗಿದ್ದಾರೆ ಹಿ
ಪಿಎಂ ಅವರನ್ನು ನಾಯಿಮರಿಗೆ ಹೋಲಿಸಿ ಹೇಳಿಕೆ ನೀಡಿರುವುದು ಕಾಂಗ್ರೆಸ್ ನಾಯಕರ ವ್ಯಕ್ತಿತ್ವವನ್ನು ತೋರಿಸುತ್ತದೆ ಎಂದು ಬೊಮ್ಮಾಯಿ ಬುಧವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು. ಸಿದ್ದರಾಮಯ್ಯನವರಂತೆ ನಾನು ಸಮಾಜವನ್ನು ಒಡೆದಿಲ್ಲ, ನಾವು ಸಂತೋಷ ಕೊಟ್ಟಿದ್ದೇವೆಯೇ ಹೊರತು ಅವರು ಕೊಟ್ಟ ದೌರ್ಭಾಗ್ಯವನ್ನಲ್ಲ, ಈ ರೀತಿಯ ಕೆಲಸ ನಮ್ಮಿಂದ ಆಗಿಲ್ಲ. ಎಂದು ಅವರು ತಿರುಗೇಟು ನೀಡಿದ್ದಾರೆ.
ಸಿದ್ದರಾಮಯ್ಯ ಅವರನ್ನು ಬಹಿರಂಗ ಚರ್ಚೆಗೆ ಆಹ್ವಾನಿಸಿದ ಬಗ್ಗೆ ಬೊಮ್ಮಾಯಿ ಅವರು, ವಡಿಯಾಹನ ಸೌಧಕ್ಕಿಂತ ದೊಡ್ಡ ವೇದಿಕೆ ಇನ್ನೊಂದಿಲ್ಲ. ಎಂದು ಬೊಮ್ಮಾಯಿ ಹೇಳಿದರು