ನ. 8 ರಂದು ಗ್ರಾಮ ದೇವತೆ ಶ್ರೀ ಊರಮ್ಮ ದೇವಿಯ ನೂತನ ದೇವಸ್ಥಾನ ಕಳಸಾರೋಹಣ – ದೇವಸ್ಥಾನ ಲೋಕಾರ್ಪಣೆ ಕಾರ್ಯಕ್ರಮ.
ಕೂಡ್ಲಿಗಿ ನ.02

ಪಟ್ಟಣದ ಅಧಿ ದೇವತೆ ಗ್ರಾಮ ದೇವತೆ, ಶ್ರೀ ಊರಮ್ಮ ದೇವಿಯ ನೂತನ ದೇವಸ್ಥಾನದ ಕಳಸಾರೋಹಣ ಮತ್ತು ದೇವಸ್ಥಾನ ಲೋಕಾರ್ಪಣೆ ಹಾಗೂ ಇತರೆ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಈ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಪಟ್ಟಣದ ಎಲ್ಲಾ ಸಮುದಾಯದ ಹಿರಿಯರು ದೈವಸ್ಥರು, ಹಾಗೂ ಆಯಗಾರರು ಸಮಕ್ಷಮ ಅಕ್ಟೋಬರ್ 25 ರಂದು ದೇವಸ್ಥಾನದ ಆವರಣದಲ್ಲಿ, ಜರುಗಿದ ಪೂರ್ವಭಾವಿ ಸಭೆಯಲ್ಲಿ ನಿರ್ಣಯ ತೆಗೆದು ಕೊಳ್ಳಲಾಗಿದೆ. ನೂತನ ದೇವಸ್ಥಾನ ಕಳಸಾರೋಹಣ ಹಾಗೂ ದೇವಸ್ಥಾನ ಲೋಕಾರ್ಪಣೆ ಹಿನ್ನಲೆಯಲ್ಲಿ, ಸಾಂಪ್ರದಾಯಿಕ ಧಾರ್ಮಿಕ ನಿಯಮಾವಳಿ ಯಂತೆ. ಪೂರ್ವ ಯೋಜಿತ ಧಾರ್ಮಿಕ ಕೈಂಕರ್ಯಗಳು, ದೇವಿಯ ಸಾನಿಧ್ಯದಲ್ಲಿ ನವಂಬರ್ 5 ರಿಂದ ಆರಂಭ ಗೊಳ್ಳುತ್ತವೆ. ನವಂಬರ್ 8 ಶುಕ್ರವಾರ ದಂದು, ಶ್ರೀಜಗದ್ಗುರುಗಳು ಹಾಗೂ ಶ್ರೀಮಹರ್ಷಿ ವಾಲ್ಮೀಕಿ ಪೀಠದ ಶ್ರೀಗಳ ಸಾನಿಧ್ಯದಲ್ಲಿ. ಶ್ರೀ ಊರಮ್ಮ ದೇವಿಯ ನೂತನ ದೇವಸ್ಥಾನಕ್ಕೆ ಕಳಸಾರೋಹಣ, ಮತ್ತು ನೂತನ ದೇವಸ್ಥಾನ ಲೋಕಾರ್ಪಣೆ ಕಾರ್ಯಕ್ರಮಗಳು ಜರುಗಲಿವೆ ಎಂದು ಧರ್ಮಾಧಿಕಾರಿಗಳಾದ ಹಿರೇಮಠದ ಚಿದಾನಂದ ಸ್ವಾಮಿಯವರು ಮಾಹಿತಿ ನೀಡಿದ್ದಾರೆ.

ಕಾರಣ ಪಟ್ಟಣದ ನಾಗರೀಕರು ದೈವಸ್ತರು, ನೆರೆ ಹೊರೆಯ ಗ್ರಾಮಗಳ ದೇವಿಯ ಭಕ್ತರು. ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿ, ಕಾರ್ಯಕ್ರಮ ಯಶಸ್ವಿ ಗೊಳಿಸ ಬೇಕೆಂದು ತಿಳಿಸಲಾಗಿತು. ನ 5-8 ರ ವರೆಗೆ ಧಾರ್ಮಿಕ ಕಾರ್ಯಕ್ರಮಗಳ ವಿವರ – ನವಂಬರ್ 5 ಮಂಗಳವಾರ ಬೆಳಿಗ್ಗೆ 8 ಗಂಟೆಯಿಂದ ಕಂಕಣ ಧಾರಣೆ, ನಂತರ ಗಂಗೆ ಪೂಜೆ ಹಾಗೂ ಗೋ ಪೂಜೆ. ಮಂಗಳವಾರ ಸಂಜೆ 7 ಗಂಟೆ ಯಿಂದ ದೇವಿಯನ್ನು ಹೊಳೆಗೆ ಹೊರಡಿಸಿ, ಹುಡಿ ತುಂಬಿಸಿ ಕೊಳ್ಳುವುದು. ನವಂಬರ್ 6 ಬುಧವಾರ ಸಂಜೆ ಪುಣ್ಯಹ: ನಂದಿ, ಗಣಪತಿ ಹೋಮ ಇತರೆ ಆರಾಧನೆಯ ದೇವರುಗಳ ಪ್ರತಿಷ್ಠಾಪನೆ. ನವಂಬರ್ 7 ಗುರುವಾರ ಗಣ ಹೋಮ, ಸುದರ್ಶನ ಹೋಮ, ಚಂಡಿಕಾ ಹೋಮ, ಕರಗಲ್ಲು ಮತ್ತು ನೂತನ ಕಳಸದ ದೀಕ್ಷಾ ಸಂಸ್ಕಾರ ಪೂಜೆ. ನವಂಬರ್ 8 ರ ಶುಕ್ರವಾರ ಸೂರ್ಯೋದಯ ಸಮಯದಲ್ಲಿ, ಕರಗಲ್ಲು ಪ್ರತಿಷ್ಠಾಪನೆ, ನಂತರ ಉಜ್ಜಿನಿ ಶ್ರೀಜಗದ್ಗುರುಗಳು ಹಾಗೂ ಮಹರ್ಷಿ ಶ್ರೀವಾಲ್ಮೀಕಿ ಪೀಠದ ಶ್ರೀಗಳ ಸಾನಿಧ್ಯದಲ್ಲಿ. ನೂತನ ದೇವಸ್ಥಾನಕ್ಕೆ ಕಳಸಾರೋಹಣ, ನೂತನ ದೇವಸ್ಥಾನ ಲೋಕಾರ್ಪಣೆ ಕಾರ್ಯಕ್ರಮ.

ಮಹಾ ಮಂಗಳಾರತಿ. ಪ್ರಸಾದ ಸೇವೆ ಜರುಗಲಿದೆ. ಕಾರಣ ಕೂಡ್ಲಿಗಿ ಪಟ್ಟಣದ ಸಮಸ್ತ ದೇವಸ್ತರು, ನಾಗರೀಕರು ಹಾಗೂ ದೇವಿಯ ಭಕ್ತರು ಸೇರಿದಂತೆ. ನೆರೆ ಹೊರೆ ಗ್ರಾಮಗಳ ಹಾಗೂ ನಾಡಿನ ನೆಲ್ಲೆಡೆಗಳಲ್ಲಿ ನೆಲೆಸಿರುವ, ಶ್ರೀಊರಮ್ಮ ದೇವಿಯ ಭಕ್ತರು ಕಾರ್ಯಕ್ರಮದಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳ ಬೇಕಿದೆ. ಮತ್ತು ಶ್ರೀ ಊರಮ್ಮ ದೇವಿಯ ಸನ್ನಿದಿಗೆ ತನು ಮನ ಧನಾಧಿಗಳನ್ನು ಅರ್ಪಿಸಿ ಸೇವೆ ಗೈದು. ಶ್ರೀ ಊರಮ್ಮದೇವಿಯ ಕೃಪೆಗೆ ಪಾತ್ರರಾಗ ಬೇಕೆಂದು, ದೇವಸ್ಥಾನದ ಭಕ್ತ ಮಂಡಳಿ ಹಾಗೂ ಆಯಗಾರರು ಪಟ್ಟಣದ ಪ್ರಮುಖ ಮುಖಂಡರು ಈ ಮೂಲಕ ಕೋರಿದ್ದಾರೆ.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರಾಘವೇಂದ್ರ.ಬಿ.ಸಾಲುಮನಿ.ಕೂಡ್ಲಿಗಿ.ವಿಜಯನಗರ