ಪ್ರಜಾಪ್ರಭುತ್ವದ ಅಂತಾರಾಷ್ಟ್ರೀಯ ಮಾನವ ಸರಪಳಿ ಒಟ್ಟಾಗಿ ಆಚರಿಸೋಣ- ಎಂದ ಶಾಸಕರು.
ರಾಂಪುರ ಸ.14

ಇಂದು ರಾಂಪುರ ಗ್ರಾಮ ಪಂಚಾಯತ ಆವರಣದಲ್ಲಿ ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರದ ಜನತೆಯ ಶಾಸಕರಾದ ಸನ್ಮಾನ್ಯ ಶ್ರೀ ಎನ್ ವೈ ಗೋಪಾಲಕೃಷ್ಣ ಅವರ ಅಧ್ಯಕ್ಷತೆಯಲ್ಲಿ ನಾಳೆ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ. ಈ ದಿನದಂದು ಮೇಲಿನ ಕಣಿವೆ ನಿಂದ 55 ಕಿಲೋ ಮೀಟರ್ ವರೆಗೆ ಅತಿ ಉದ್ದದ ಮಾನವ ಸರಪಳಿ ನಿರ್ಮಿಸುವ ಮೂಲಕ ಪ್ರಜಾಪ್ರಭುತ್ವದ ಆಶಯಗಳನ್ನು ಪಸರಿಸುವ ಕಾರ್ಯಕ್ಕೆ ನಾವು ಅಣಿಯಾಗಿದ್ದೇವೆ. ನೀವೂ ನಮ್ಮ ಜೊತೆ ಕೈಜೋಡಿಸಿ, ಎಲ್ಲರೂ ಒಟ್ಟಾಗಿ ಪ್ರಜಾಪ್ರಭುತ್ವವನ್ನು ಉಳಿಸೋಣ, ಭಾರತವನ್ನು ಗೆಲ್ಲಿಸೋಣ ಎಂದು ತಿಳಿಸಿದರು.

ಈ ಸಂದರ್ಭದಲ್ಲಿಜಿಲ್ಲಾಧಿಕಾರಿಗಳಾದ ಟಿ.ವೆಂಕಟೇಶ್, ಜಿಲ್ಲಾ.ಪಂ ಸಿ.ಇ.ಓ ಸೋಮಶೇಖರ್, ಅಪಾರ ಜಿಲ್ಲಾಧಿಕಾರಿಗಳ ಕುಮಾರಸ್ವಾಮಿ, ಉಪ ವಿಭಾಗ ಅಧಿಕಾರಿ ಕಾರ್ತಿಕ್, ಜಿಲ್ಲಾ ಹಾಗೂ ತಾಲೂಕು ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಮೊದಲಾದವರು ಉಪಸ್ಥಿತರಿದ್ದರು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ತಿಪ್ಪೇಸ್ವಾಮಿ.ಹೊಂಬಾಳೆ.ಮೊಳಕಾಲ್ಮುರು