ಬೈಲಹೊಂಗಲ “ಪ್ರಜಾಪ್ರಭುತ್ವದ ಹಬ್ಬ” ಕ್ಕೆ ಚಾಲನೆ ನೀಡಿದ – ಶ್ರೀ ಸತೀಶಕುಮಾರ ರವರು.

ಬೈಲಹೊಂಗಲ ಏಪ್ರಿಲ್.29

ಪ್ರಜಾಪ್ರಭುತ್ವದ ಹಬ್ಬದ ಪ್ರಯುಕ್ತ ನಮ್ಮ ನಡೆ ಮತಗಟ್ಟೆಯ ಕಡೆ ಎಂಬ ಧ್ವಜಾರೋಹಣ ಕಾರ್ಯಕ್ರಮವನ್ನು ಇಂದು ತಾಲೂಕ ಆಡಳಿತ ಹಾಗೂ ಸ್ವೀಪ್‌ ಸಮೀತಿ ಬೈಲಹೊಂಗಲ ವತಿಯಿಂದ ಸಹಾಯ ಚುನಾವಣಾಧಿಕಾರಿ ಶ್ರೀ ಸತೀಶಕುಮಾರ ರವರು ಧ್ವಜಾರೋಹಣವನ್ನು ನೇರವೆರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಿವಿಧ ಇಲಾಖೆಯ ಅಧಿಕಾರಿ ವರ್ಗ ಮತ್ತು ಸಿಬ್ಬಂದಿಗಳು ಹಾಜರಿದ್ದು ಪ್ರಜಾಪ್ರಭುತ್ವದ ಹಬ್ಬ ಕಾರ್ಯಕ್ರಮದ ಜಾಗೃತಿ ಜಾಥಾವನ್ನು ಬೈಲಹೊಂಗಲ ನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳು ಕಾರ್ಯಾಲಯದ “ಸಖಿ ಮತಗಟ್ಟೆ” ಯ ಮೂಲಕ ಹರಳಯ್ಯಾ ಸಭಾಂಗಣದ ವರೆಗೆ ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಂಡು ವಿವಿಧ ರೀತಿಯ ಚುನಾವಣಾ ಘೋಷ ವಾಕ್ಯಗಳನ್ನು ಹೇಳುತ್ತಾ ನಗರದಲ್ಲಿ ಮತದಾನ ಜಾಗೃತಿ ಮಾಡಿದರು. ಅದೇ ರೀತಿ ಸಭಾಂಗಣದಲ್ಲಿ ಶಾಲಾ ಮುದ್ದು ವಿದ್ಯಾರ್ಥಿಗಳಿಂದ ವಿವಿಧ ಬಂಗಿಯ ಭರತ ನಾಟ್ಯವನ್ನು ಏರ್ಪಡಿಸಲಾಗಿತ್ತು,

ಸಂಗೀತ ಗೀತೆ, ರೈತ ಗೀತೆಗಳು ಹಾಗೂ ಚುನಾವಣಾ ಗೀತೆಗಳ ಮೂಲಕ ಸಾರ್ವಜನಿಕರಿಗೆ ಮತದಾನದ ಕುರಿತು ಜಾಗೃತಿಗಳನ್ನು ಏರ್ಪಡಿಸಲಾಯಿತು. ನಂತರ ಎಲ್ಲಾ ಚುವಟಿಕೆಗಳಲ್ಲಿ ಪಾಲ್ಗೊಂಡಿರುವವರಿಗೆ ಸ್ವೀಪ್‌ ಸಮೀತಿ ವತಿಯಿಂದ ಸನ್ಮಾನ ಮತ್ತು ಪ್ರಶಸ್ತಿ ವಿತರಣೆ ಮಾಡುವ ಮೂಲಕ ಅವರಿಗೆ ಪ್ರೋತ್ಸಾಹಿಸಿ ಗೌರವಿಸಲಾಯಿತು. ಸೀಪ್‌ ಸಮೀತಿ ಅಧ್ಯಕ್ಷರು ಮಾತನಾಡಿ, ಬರುವ ಮೇ-07 ರಂದು ತಪ್ಪದೇ ಎಲ್ಲರೂ ಮತಗಳನ್ನು ಹಾಕಿ ಮತ್ತು ಸಹದ್ಯೋಗಿ, ಕುಟುಂಬಸ್ಥರನ್ನು ಕರೆ ತನ್ನಿ ಅವರಿಂದಲೂ ಕೂಡಾ ಮತದಾನವನ್ನು ಮಾಡಿಸುಂತಹ ಕೆಲಸವನ್ನು ಎಲ್ಲರೂ ಮಾಡಬೇಕು ಎಂದು ಕರೆ ನೀಡಿದರು.

ಉಪಸ್ಥೀತಿ, ತಹಶೀಲ್ದಾರರು ಬೈಲಹೊಂಗಲ ಹಣಮಂತ ಶಿರಹಟ್ಟಿ ಆರೋಗ್ಯ ಇಲಾಖೆಯ ಹಿರಿಯ ವೈದ್ಯಾಧಿಕಾರಿಗಳು ಡಾ. ಎಸ್‌ ಎಸ್‌ ಸಿದ್ದಣ್ಣವರ, ಪುರಸಭೆಯ ಮುಖ್ಯಾಧಿಕಾರಿಗಳು ವಿರೇಶ ಹಸಬಿ, ಶಿಶು ಅಭಿವೃದ್ಧಿ ಅಧಿಕಾರಿ ಅರಣುಕುಮಾರ ತಾಪಂ ಯೋಜನಾಧಿಕಾರಿ ರಾಜಶೇಖರ ಕಡೆಮನಿ, ಎಸ್‌ ಬಿ ಸಂಗನಗೌಡರ, ಎಸ್‌ ವ್ಹಿ ಹಿರೇಮಠ, ಬಸವರಾಜ್‌ ಮುನವಳ್ಳಿ, ರೈತ ಗೀತೆ ಹಾಡಿದವರು ಕಡಮನಿ ಶಿಕ್ಷಕರು ಹಾಜರಿದ್ದರು ಎಲ್ಲಾ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಹಾಜರಿದ್ದು. ಪ್ರಜಾಪ್ರಭುತ್ವದ ಹಬ್ಬವನ್ನು ಯಶಸ್ವಿ ಗೊಳಿಸಲಾಯಿತು.

ಜಿಲ್ಲಾ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಂ.ಎಂ. ಶರ್ಮಾ ಬೆಳಗಾವಿ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button