ಕರ ವಸೂಲಿ ನೌಕರ ಶೌಚಾಲಯದಲ್ಲಿ ಹೃದಯ – ಘಾತದಿಂದ ಸಾವು.
ಹೂಡೇಂ ಸ.11

ಖಾನ ಹೊಸಹಳ್ಳಿ ಹೋಬಳಿಯ ಸಮೀಪದ ಹೂಡೇಂ ಗ್ರಾಮ ಪಂಚಾಯಿತಿ ಕರ ವಸೂಲಿ ನೌಕರ ಮಂಜಣ್ಣ ಚೌಟಯ್ಯನಹಟ್ಟಿ 51, ಹೃದಯ ಘಾತದಿಂದ ಸಾವನ್ನಪ್ಪಿರುವ ಘಟನೆ ಕೂಡ್ಲಿಗಿ ತಾಲೂಕಾ ಪಂಚಾಯಿತಿ ಶೌಚಾಲಯದಲ್ಲಿ ನಡೆದಿದೆ. ಮೃತ ಮಂಜಣ್ಣ ಕೂಡ್ಲಿಗಿ ತಾಲೂಕಾಪಂಚಾಯಿತಿಯಲ್ಲಿ ಸೋಮವಾರ ಬಿಲ್ ಕಲೆಕ್ಟರ್ ಮೀಟಿಂಗ್ ಗೆ ಹಾಜರಾಗಿದ್ದು, ಮೀಟಿಂಗ್ ಮುಗಿದ ನಂತರ ಶೌಚಾಲಯಕ್ಕೆ ಹೋಗಿದ್ದು, ಮರಳಿ ವಾಪಸ್ ಮನೆಗೆ ಬಾರದ ಕಾರಣ ಕುಟುಂಬದವರು ಗಾಬರಿಗೊಂಡು ಫೋನ್ ಮಾಡಿದರೂ ಫೋನ್ ಸ್ವಿಚ್ ಆಫ್ ಆದಕಾರಣ ಎಲ್ಲಾ ಕಡೆ ಹುಡುಕಿದರೂ ಸಿಗದ ಕಾರಣ, ಮಂಗಳವಾರ ಬೆಳಿಗ್ಗೆ ತಾಲೂಕಾ ಪಂಚಾಯತಿ ಕಚೇರಿಯ ಸಿಸಿಟಿವಿ ವೀಕ್ಷಿಸುವಾಗ ಶೌಚಾಲಯಕ್ಕೆ ಹೋಗಿ ಮರಳಿ ಹಿಂತಿರುಗದೆ ಶೌಚಾಲಯದಲ್ಲಿ ಹೃದಯ ಘಾತದಿಂದ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಸ್ಥಳದಲ್ಲಿ ಕೂಡ್ಲಿಗಿ ಪಿ.ಎಸ್.ಐ ಪ್ರಕಾಶ್, ತಾಲೂಕ ಪಂಚಾಯತಿ ಇ.ಓ ನರಸಪ್ಪ ಹಾಜರಿದ್ದರು. ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಕೆ.ಎಸ್.ವೀರೇಶ್.ಕೆ.ಹೊಸಹಳ್ಳಿ