ಕರ್ನಾಟಕ ದಲಿತ ರಕ್ಷಣಾ ವೇದಿಕೆ ವತಿಯಿಂದ ಡ್ಯಾಮಿನ ತಜ್ಞರಾದ ಕನ್ಹಯ್ಯಾ ನಾಯ್ಡುಗೆ ಅಭಿನಂದನೆಗಳು.
ಬಳ್ಳಾರಿ ಆ.18

ಕರ್ನಾಟಕ ದಲಿತ ರಕ್ಷಣಾ ವೇದಿಕೆ ಜಿಲ್ಲಾ ಸಮಿತಿ ಬಳ್ಳಾರಿ ವತಿಯಿಂದ ಅಗಸ್ಟ್ 18 ರಂದು ತುಂಗಭದ್ರ ಡ್ಯಾಂಮಿನ 19 ನೇ. ಕ್ರಸ್ಟ್ ಗೇಟ್ ಮುರಿದು ತುಂಡಾಗಿ ನೀರು ಪಾಲಾಗಿ ಹೋಗಿದ್ದರಿಂದ ಲಕ್ಷಾಂತರ ಕ್ಯೂಸೆಕ್ಸ್ ನೀರು ಹರಿದು ಪೋಲಾಗುತ್ತಿದ್ದರಿಂದ ಆಂಧ್ರ ಪ್ರದೇಶ್ ತೆಲಂಗಾಣ ಕರ್ನಾಟಕದ ರಾಯಚೂರು ಬಳ್ಳಾರಿ ವಿಜಯನಗರ ಕೊಪ್ಪಳ ರೈತರು ಮತ್ತು ನಾಗರೀಕರು ಬಹಳಷ್ಟು ಅತಂತ್ರಕ್ಕೆ ಒಳಗಾಗಿದ್ದರಿಂದ ಈ ಡ್ಯಾಮಿನ ಈ ಅಪಾರ ಪ್ರಮಾಣದ ನೀರನ್ನು ಹೇಗಾದರೂ ಮಾಡಿ ತಡೆಯಲೇ ಬೇಕೆಂದು ಚಾಲೆಂಜಿಂಗ್ ತೆಗೆದು ಕೊಂಡಂತ ಡ್ಯಾಮಿನ ತಜ್ಞರಾದ ಕನ್ಹಯ್ಯ ನಾಯ್ಡು ಇವರು ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ನೂರಾರು ಸಿಬ್ಬಂದಿ ಪ್ರಾಣವನ್ನೇ ಪಣಕ್ಕಿಟ್ಟು ಈ ಕಾರ್ಯ ಕೆಲಸದಲ್ಲಿ ಶ್ರಮಿಸಿ ಅಳವಡಿಸಿ ಈ ಮೂಲಕ ಹರಿಯುವ ನೀರನ್ನು ತಡೆ ಹಿಡಿಯುವಲ್ಲಿ ಯಶಸ್ವಿಯಾಗಿ ಮಾಡಿದ್ದಾರೆ ರಭಸವಾಗಿ ಹರಿಯುತ್ತಿರುವ ತುಂಗಭದ್ರ ನದಿ ನೀರಿನಲ್ಲಿ ಎಲಿಮೆಂಟ್ ಗೇಟುಗಳನ್ನು ಅಳವಡಿಸಿ ಲಕ್ಷಾಂತರ ರೈತರು ವಿವಿಧ ರೀತಿಯ ಬೆಳೆಗಳನ್ನು ಬೆಳೆಯಲಿಕ್ಕೆ ಅನುಕೂಲ ಮಾಡಿ ಕೊಟ್ಟಿದ್ದು ಹಾಗೂ ಕರ್ನಾಟಕ ತೆಲಂಗಾಣ ಆಂಧ್ರಪ್ರದೇಶದ ಜನರಿಗೆ ಕುಡಿಯಲಿಕ್ಕೆ ನೀರಿನ ತೊಂದರೆ ಆಗಲಾರದಂತೆ ಡ್ಯಾಮಿನ ತಜ್ಞರಾದ ಕನ್ಹಯ್ಯ ನಾಯ್ಡು ಇವರಿಗೆ ಹಾಗೂ ಕಾರ್ಯ ನಿರ್ವಹಿಸಿದಂತ ಕಾರ್ಮಿಕ ಸಿಬ್ಬಂದಿಗಳಿಗೆ ಕರ್ನಾಟಕ ದಲಿತ ರಕ್ಷಣಾ ವೇದಿಕೆ ಜಿಲ್ಲಾ ಸಮಿತಿ ಬಳ್ಳಾರಿ ವತಿಯಿಂದ ಅಭಿನಂದನೆಗಳನ್ನು ಸಲ್ಲಿಸಿತ್ತಾ ಪತ್ರಿಕಾ ಮುಖಾಂತರ ವಂದನೆಗಳು ಸಲ್ಲಿಸುತ್ತಿರುವ ಕೆ.ಶಂಕರ್ ನಂದಿಹಾಳ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ತಿಳಿಸಿದ್ದಾರೆ.