ಶಾಲಾ ಕೊಠಡಿ, ಅಂಗನವಾಡಿ, ರಸ್ತೆ ನಿರ್ಮಾಣಕ್ಕೆ ಭೂಮಿ ಪೂಜೆಗೆ – ಶಾಸಕ ಡಾ, ಎನ್.ಟಿ ಶ್ರೀನಿವಾಸ್ ಚಾಲನೆ.
ಹುಲಿಕೆರೆ ಜೂ.14

ಕೂಡ್ಲಿಗಿ ತಾಲೂಕಿನ ಹುಲಿಕೆರೆ ಗ್ರಾಮದ ಜನತಾ ಕಾಲೋನಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕೆ.ಎಸ್.ಎಚ್.ಸಿ ಯೋಜನೆ ಅಡಿಯಲ್ಲಿ 40.00 ಲಕ್ಷಗಳ ಮೊತ್ತದ 2 ಕೊಠಡಿಗಳ ನಿರ್ಮಾಣ ಹಾಗೂ ಸಿ.ಕೆ ಗುಂಟೆ ಗೊಲ್ಲರಹಟ್ಟಿ ಸ.ಹಿ.ಪ್ರಾ.ಶಾಲೆ ಕೊಠಡಿಗಳ ನಿರ್ಮಾಣ ಪಿ.ಡಬ್ಲ್ಯೂ.ಡಿ 33.06 ಲಕ್ಷ, ಸಿ.ಕೆ ಗುಂಟೆ ಅಂಗನವಾಡಿ ಕೇಂದ್ರದ ಕಾಮಗಾರಿ ಕೆ.ಎಸ್.ಎಚ್.ಸಿ ಅನುದಾನದಲ್ಲಿ 12.50 ಲಕ್ಷ, ಹಿರೇಕುಂಬಳಗುಂಟೆ-ಬಿ ಕೇಂದ್ರ ನೂತನ ಕೊಠಡಿ ನಿರ್ಮಾಣ ಕೆ.ಎಸ್.ಎಚ್.ಸಿ ಯೋಜನೆಯೆಲ್ಲಿ 25 ಲಕ್ಷ, ಟಿ.ಸೂರವ್ವನಹಳ್ಳಿ ಸಿಸಿ ರಸ್ತೆ ನಿರ್ಮಾಣ ಕೆ.ಆರ್.ಐ.ಡಿ ಎಲ್ ಯೋಜನೆ ಅಡಿಯಲ್ಲಿ 80 ಲಕ್ಷ, ಶಾಂತನಹಳ್ಳಿ ಸ.ಹಿ.ಪ್ರಾ.ಶಾಲೆ ಕೊಠಡಿ 20 ಲಕ್ಷ, ಗುಣಸಾಗರ ಸ.ಹಿ.ಪ್ರಾ.ಶಾಲೆ 20 ಲಕ್ಷ ರೂ ಯೋಜನೆಗಳಿಗೆ ಶುಕ್ರವಾರ ಶಾಸಕ ಡಾ, ಶ್ರೀನಿವಾಸ್ ಎನ್.ಟಿ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಕ್ಷೇತ್ರದ ಶೈಕ್ಷಣಿಕ, ಆರೋಗ್ಯ, ಮೂಲಭೂತ ಸೌಲಭ್ಯಗಳ ಅಭಿವೃದ್ಧಿಗೆ ನಿರಂತರ ಆದ್ಯತೆ ನೀಡಲಾಗುತ್ತಿದ್ದು, ಮಕ್ಕಳ ಶಿಕ್ಷಣಕ್ಕೆ ಪಾಲಕರು, ಶಿಕ್ಷಕರು ಮುತುವರ್ಜಿ ವಹಿಸಬೇಕು. ಗ್ರಾಮೀಣ ಮಕ್ಕಳು ಶಾಲೆಯಲ್ಲಿ ಮೂಲ ಸೌಕರ್ಯಗಳಿಂದ ವಂಚಿತರಾಗದಂತೆ ಸಮರ್ಪಕ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ ನೂತನ ಕೊಠಡಿಗಳ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ್ದೇವೆ.

ಇತ್ತೀಚಿನ ಬೆಳವಣಿಗೆಯಲ್ಲಿ ಗ್ರಾಮೀಣ ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸುವುದು ತೀವ್ರ ವಿರಳವಾಗಿದೆ. ಹೀಗಾಗಿ ಸರ್ಕಾರಿ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಗ್ರಾಮದಲ್ಲಿ ಸುಸಜ್ಜಿತ ಕೊಠಡಿಗಳ ನಿರ್ಮಾಣಕ್ಕೆ ಮುಂದಾಗಿದ್ದೇವೆ. ಕ್ಷೇತ್ರದಲ್ಲಿ ವಿಶೇಷವಾಗಿ ಸುಮಾರು 20 ಹೊಸ ಶಾಲಾ ಕಟ್ಟಡಗಳು ಹಾಗೂ 20 ಶಾಲೆಗಳ ಕೊಠಡಿ ರಿಪೇರಿ, 6 ಪ್ರೌಢ ಶಾಲೆ ಉನ್ನತಿಕರಣ, 25 ಪ್ರಾಥಮಿಕ ಶಾಲೆ ಉನ್ನತಿಕರಣ, 12 ಅಂಗನವಾಡಿ ಕಟ್ಟಡಗಳು, 3 ಅಂಗನವಾಡಿ ಮರು ನಿರ್ಮಾಣಕ್ಕೆ ಭೂಮಿ ಪೂಜೆ ನಿರ್ವಹಿಸುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಕ್ಷೇತ್ರದಲ್ಲಿ 278 ಶಾಲೆಗಳಿಗೆ ಮುಂದಿನ ದಿನಗಳಲ್ಲಿ ಮೂಲ ಸೌಕರ್ಯಗಳನ್ನು ಒದಗಿಸುವೆ, ಎಲ್ಲಾ ಹಳ್ಳಿಗಳಲ್ಲಿ ಸಿ.ಸಿ ರಸ್ತೆ, ಚರಂಡಿಗಳು, ಆರೋಗ್ಯ, ಶಿಕ್ಷಣ, ಅಂಗನವಾಡಿ ಕೇಂದ್ರಗಳಿಗೆ ಹಾಗೂ ಕುಡಿಯುವ ನೀರಿಗೆ, ರೈತರಿಗೆ ವಿದ್ಯುತ್ ಸಂಪರ್ಕ ಒದಗಿಸಲು ಹೆಚ್ಚಿನ ಆದ್ಯತೆ ನೀಡಲಾಗುವುದು. ಹುಲಿಕೆರೆ ಗ್ರಾಮದ ಬಹು ದಿನಗಳ ಬೇಡಿಕೆಯಾದ ಕೆಪಿಟಿಸಿಎಲ್ ಸಬ್ ಟೇಷನ್ ಅನುಮೋದನೆ ಆಗಿದೆ ಇನ್ನೇನು ಕೆಲವೇ ದಿನಗಳಲ್ಲಿ ಟೆಂಡರ್ ಕರೆಯಲಾಗುವುದು ಎಂದುರು.ಈ ಸಂದರ್ಭದಲ್ಲಿ ಜಗದೀಶ್ ಸ್ವಾಮಿ ನಿವೃತ್ತಿ ಶಿಕ್ಷಕ, ಜಿಲ್ಲನ್ ಬಾಷಾ ನಿವೃತ್ತಿ ಶಿಕ್ಷಕ, ಮುಖಂಡರಾದ ಮಾರಪ್ಪ, ಕರಿಯಪ್ಪ, ಮಾರಣ್ಣ, ಶರಣಪ್ಪ, ವೀರಭದ್ರಪ್ಪ, ಹರೀಶ್ ಸಕಲಪುರದ ಹಟ್ಟಿ, ಮಂಜುನಾಥ, ಶಫಿ ಉಲ್ಲಾ, ದುರ್ಗಪ್ಪ, ಮುಖ್ಯ ಶಿಕ್ಷಕಿ ವಾಣಿ, ಹಿರೇ ಕುಂಬಳಗುಂಟೆ ಗ್ರಾ.ಪಂ ಮಾಜಿ ಉಪಾಧ್ಯಕ್ಷ ದುರುಗಪ್ಪ, ಜುಟ್ಟ ಲಿಂಗನಹಟ್ಟಿ ಬಸವರಾಜ್, ಓಂಕಾರಪ್ಪ ವಕೀಲರು, ವಿ.ಎಸ್.ಎಸ್.ಎಲ್ ಅಧ್ಯಕ್ಷ ಜಗದೀಶ್, ರಮೇಶ್ ಗೌಡ , ಹಿರೇ ಕಂಬಳಗುಂಟೆ, ಬಿ.ಟಿ ಗುದ್ದಿ ದುರ್ಗೇಶ್, ಹಿರೇ ಕುಂಬಳಗುಂಟೆ ಮನೋಜ್ ಕುಮಾರ್, ಭದ್ರಪ್ಪ, ಸಿ.ಕೆ ಕುಂಟೆ ಅಂಜಿನಪ್ಪ, ಹೊಸಹಳ್ಳಿ, ನಾಗರಾಜ್, ವೆಂಕಟೇಶ್ ಯಂಬಳಿ ವಡ್ಡರಟ್ಟಿ, ಕೆಂಚಮ್ಮನಹಳ್ಳಿ ಓಬಳೇಶ್, ಸೇರಿದಂತೆ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸರ್ವ ಸದಸ್ಯರು, ಮುಖಂಡರು ಉಪಸ್ಥಿತರಿದ್ದರು.
ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಕೆ.ಎಸ್ ವೀರೇಶ್.ಕೆ.ಹೊಸಹಳ್ಳಿ

