ಪೌರ ಕಾರ್ಮಿಕರಿಗೆ ಗೃಹ ಭಾಗ್ಯ ಯೋಜನೆಯಲ್ಲಿ ವಸತಿ ವ್ಯವಸ್ಥೆ.
ತರೀಕೆರೆ ಡಿಸೆಂಬರ್.22

ಸರ್ಕಾರದ ಯೋಜನೆಯಂತೆ ಪೌರ ಕಾರ್ಮಿಕರಿಗೆ ಗೃಹ ಭಾಗ್ಯ ಯೋಜನೆಯಡಿ ವಸತಿ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಪುರಸಭಾ ಮುಖ್ಯ ಅಧಿಕಾರಿ ಹೆಚ್ ಪ್ರಶಾಂತ್ ರವರು ಹೇಳಿದರು. ಅವರು ಇಂದು ಪಟ್ಟಣದ ಬಾಪೂಜಿ ಕಾಲೋನಿಯಲ್ಲಿ ನಿರ್ಮಾಣ ವಾಗುತ್ತಿರುವ ವಸತಿ ಸಂಕೀರ್ಣದ ಕಾಮಗಾರಿ ಪರಿಶೀಲನೆ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿದರು. ವಸತಿ ಕಾಮಗಾರಿ ತಡ ವಾಗಿದ್ದರಿಂದ ಗುತ್ತಿಗೆದಾರರಿಗೆ ನೋಟಿಸು ನೀಡಿ ಕಾಮಗಾರಿ ಅತಿ ಶೀಘ್ರದಲ್ಲಿ ಮುಗಿಸಿ ಕೊಡಲು ತಿಳಿಸಿದರು. ಇನ್ನೂ ಒಂದು ತಿಂಗಳೊಳಗೆ ಪೌರ ಕಾರ್ಮಿಕರಿಗೆ ಮನೆಗಳನ್ನು ವಿತರಿಸಲಾಗುವುದು ಎಂದು ಹೇಳಿದರು. ಈ ಸಂದರ್ಭದಲ್ಲಿ ಸಫಾಯಿ ಕರ್ಮಚಾರಿಗಳ ಜಿಲ್ಲಾ ಜಾಗೃತಿ ಸಮಿತಿ ಸದಸ್ಯರಾದ ತರೀಕೆರೆ ಎನ್ ವೆಂಕಟೇಶ್ ಮಾತನಾಡಿ ಗುತ್ತಿಗೆದಾರರು ಉತ್ತಮ ಗುಣಮಟ್ಟದ ಕಾಮಗಾರಿ ಮಾಡಬೇಕು ಎಂದು ಹೇಳಿದರು. ಹಿರಿಯ ಆರೋಗ್ಯ ನಿರೀಕ್ಷಕರಾದ ಮಹೇಶ್ ಗುತ್ತಿಗೆದಾರರಾದ ಲೋಕೇಶ್ ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು:ಎನ್.ವೆಂಖಟೇಶ್.ತರೀಕೆರೆ