ಕ.ಸಾ.ಪ ನಾಲವಾರ ಹೋಬಳಿ – ಪದಾಧಿಕಾರಿಗಳ ಪದಗ್ರಹಣ.

ಚಿತ್ತಾಪುರ ಫೆ.02

ಚಿತ್ತಾಪುರ ತಾಲ್ಲೂಕಿನ (ನಾಲವಾರ ) ಕನ್ನಡ ಸಾಹಿತ್ಯ ಪರಿಷತ್ತಿನ ಹೋಬಳಿ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ತಾಲ್ಲೂಕಿನ ನಾಲವಾರ ಶ್ರೀ ಸಿದ್ಧಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ನಡೆಯಿತು. ದಿವ್ಯ ಸಾನಿಧ್ಯ ನಾಲವಾರ ಶ್ರೀ ಕೋರಿಸಿದ್ದೇಶ್ವರ ಮಠದ ಪೀಠಾದಿಪತಿಗಳಾದ ಪರಮ ಪೂಜ್ಯ.ಷ.ಬ್ರ.ಶ್ರೀ ಡಾ, ಸಿದ್ಧ ತೋಟೇಂದ್ರ ಶಿವಾಚಾರ್ಯ ಮಹಾ ಸ್ವಾಮಿಗಳು ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಕಟ್ಟುವ ಕೆಲಸದ ಜೊತೆಗೆ ಕನ್ನಡಿಗರ ಸಮಸ್ಯೆಗಳಿಗೆ ಸ್ಪಂದಿಸುತ್ತಿದೆ.

ಕನ್ನಡ ಶ್ರೀಮಂತ ಭಾಷೆ. ಅದಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ ಎಂದರು. ಪ್ರಸ್ತುತ ದಿನಗಳಲ್ಲಿ ಕನ್ನಡ ಭಾಷೆಗೆ ಹಲವಾರು ಸವಾಲುಗಳಿವೆ. ಸ್ಥಳೀಯ ಪ್ರಜ್ಞಾವಂತರು ಜಾಗೃತರಾಗಿ ಕನ್ನಡದ ಸೇವಕರಾಗಿ ಕಾರ್ಯ ನಿರ್ವಹಿಸುವುದು ಅಗತ್ಯವಿದೆ ಎಂದು ಪೂಜ್ಯರು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ನೂತನವಾಗಿ ಆಯ್ಕೆಯಾದ ಅಧ್ಯಕ್ಷರ ಹಾಗೂ ಪದಾಧಿಕಾರಿಗಳ ಪದಗ್ರಹಣ ಹಾಗೂ ಕಾರ್ಯಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮ ನಡೆಯಿತು ಇದರ ಅಧ್ಯಕ್ಷತೆ ಶ್ರೀ ಲಿಂಗಾರೆಡ್ಡಿ ಗೌಡ ಬಾಸರೆಡ್ಡಿ ನಾಲವಾರ ರಾಜ್ಯ ದ್ವಿದಳ ಧಾನ್ಯ ತೊಗರಿ ಮಂಡಳಿ ಮಾಜಿ ಅಧ್ಯಕ್ಷರು ಹಾಗೂ ಬಿಜೆಪಿಯ ಹಿರಿಯರು. ಉದ್ಯಮಿಗಳು ಕನ್ನಡ ಭಾಷೆ, ಸಾಹಿತ್ಯ, ನೆಲ, ಜಲ, ಸಂಸ್ಕೃತಿ ನಮ್ಮ ನಿಮ್ಮೆಲ್ಲರ ಬದುಕಿನ ಭಾಗವಾಗಬೇಕು. ಆ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ನ ಕೆಲಸ ಮತ್ತು ಕನ್ನಡಿಗರಲ್ಲಿ ಜಾಗೃತಿ ಮೂಡಿಸುವ ಕೆಲಸ ಆಗಬೇಕಿದೆ ತಿಳಿಸಿದರು.

ಕಾರ್ಯಕ್ರಮದ ಉದ್ಘಾಟಕರು ಪರಿಷತ್ತಿನ ತಾಲೂಕಾಧ್ಯಕ್ಷ ವೀರಭದ್ರಪ್ಪ ಗುರುಮಿಠಕಲ್ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತು ಕನ್ನಡದ ಉತ್ತಮ ಕೆಲಸಗಳನ್ನು ಮಾಡುವುದ ರೊಂದಿಗೆ ಕೇಂದ್ರ ಸ್ಥಾನಕ್ಕೆ ಸೀಮಿತವಾಗಿತ್ತು. ಆದರೆ, ಇಂದು ಹೋಬಳಿ ಮಟ್ಟಕ್ಕೆ ಅದರ ಕಾರ್ಯಕ್ಷೇತ್ರ ವಿಸ್ತರಿಸಿದೆ ಎಂದರು.

ಕನ್ನಡವು ಕೇವಲ ಭಾಷೆ ಮಾತ್ರವಲ್ಲ.ಅದು ಬದುಕನ್ನು ಕಟ್ಟಿಕೊಳ್ಳುವ ಮಾಧ್ಯಮ. ನಮ್ಮಯ ಉಸಿರು. ಜಗತ್ತಿನೊಂದಿಗೆ ನಮ್ಮನ್ನು ಇದು ಬೆಸೆಯುತ್ತದೆ. ಹಾಗಾಗಿ ಕನ್ನಡ ಭಾಷೆಯ ಉಳಿವು ಬೆಳವಣಿಗೆಯೊಂದಿಗೆ ಕನ್ನಡಿಗರಾದ ನಮ್ಮ ಬದುಕು ಕೂಡ ಹಸನಾಗಲಿದೆ ಎಂದು ಹೇಳಿದರು.

ಕ.ಸಾ.ಪ ನಿಕಟ ಪೂರ್ವ ತಾಲೂಕಾಧ್ಯಕ್ಷ ವೀರೇಂದ್ರ ಕೊಲ್ಲೂರು ಅವರು ಮಾತನಾಡಿ ಕನ್ನಡವು ಕೇವಲ ಭಾಷೆ ಮಾತ್ರವಲ್ಲ. ಅದು ಬದುಕನ್ನು ಕಟ್ಟಿ ಕೊಳ್ಳುವ ಮಾಧ್ಯಮ. ನಮ್ಮಯ ಉಸಿರು. ಜಗತ್ತಿನೊಂದಿಗೆ ನಮ್ಮನ್ನು ಇದು ಬೆಸೆಯುತ್ತದೆ. ಹಾಗಾಗಿ ಕನ್ನಡ ಭಾಷೆಯ ಉಳಿವು ಬೆಳವಣಿಗೆ ಯೊಂದಿಗೆ ಕನ್ನಡಿಗರಾದ ನಮ್ಮ ಬದುಕು ಕೂಡ ಹಸನಾಗಲಿದೆ ಎಂದು ಹೇಳಿದರು.

ಕನ್ನಡಾಂಭೆ ತಾಯಿಯ ಭಾವಚಿತ್ರ ಕ್ಕೆ ಪೂಜೆ ಸಲ್ಲಿಸಿ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಶ್ರೀ ವೀರಣ್ಣ ಗೌಡ ಪರಸರೆಡ್ಡಿ ನಾಲವಾರ ಅವರು ಕನ್ನಡ ಸಾಹಿತ್ಯ ಪರಿಷತ್ ನಿರಂತರವಾಗಿ ಕಾರ್ಯಕ್ರಮಗಳನ್ನು ರೂಪಿಸುವ ಕೆಲಸ ಮಾಡಬೇಕು. ನಮ್ಮ ಭಾಗದಲ್ಲಿ ಹೆಚ್ಚೆಚ್ಚು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಅಲ್ಲಿ ಕನ್ನಡ ಭಾಷೆಯನ್ನು ಹೆಚ್ಚು ಕಲಿಯುವಂತಾಗ ಬೇಕು, ಜಾಗೃತಿ ಮೂಡ ಬೇಕೆಂದರು.

ಪ್ರಾಸ್ತಾವಿಕ ನುಡಿ ನಾಲವಾರ ವಲಯ ಘಟಕ ಅಧ್ಯಕ್ಷ ಅಂಜುನಾಥ ಎಸ್ ನಾಯ್ಕಲ್ ಅವರು ಮಾತನಾಡಿ ವಲಯ ಘಟಕ ಕನ್ನಡ ಸಾಹಿತ್ಯ ಪರಿಷತ್‌ ನ ಎಲ್ಲಾ ಚಟುವಟಿಕೆಗಳಿಗೂ ನನ್ನ ಬೆಂಬಲ ನೆರವು ಇರಲಿದೆ. ನನಗೆ ಈ ಹೋಬಳಿ ಜನರು ಆಶೀರ್ವದಿಸಿದ್ದು ಸಿಕ್ಕ ಅಧಿಕಾರವನ್ನು ನಮ್ಮ ಹೋಬಳಿ ವ್ಯಾಪ್ತಿಯಲ್ಲಿ ಸೇವೆ ಮಾಡುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ನುಡಿದರು.

ಹಾಗೇ ಶಿವಕುಮಾರ್ ಸುಣಗಾರ ನಾಲವಾರ ಯುವ ಮುಖಂಡರು ಮಾತನಾಡಿ ನಾಲವಾರ ವಲಯ ಘಟಕ ಕಸಾಪ ಕಾರ್ಯ ಚಟುವಟಿಕೆಗಳಿಗೆ ಯಾವುದೇ ಸಂಧರ್ಭದಲ್ಲಿ ನಿಮ್ಮ ಜೊತೆಯಲ್ಲಿ ಕನ್ನಡ ತಾಯಿಯ ಸೇವೆ ಮಾಡಲು ಸದಾ ಕಂಕಣ ಬದ್ದನಾಗಿರುತ್ತೇನೆ ಎಂದರು ಇದೇ ಸಂದರ್ಭದಲ್ಲಿ ವಲಯ ಘಟಕ ಕನ್ನಡ ಸಾಹಿತ್ಯ ಪರಿಷತ್ತಿನ ನೂತನವಾಗಿ ಆಯ್ಕೆಯಾದ ಎಲ್ಲಾ ಪದಾಧಿಕಾರಿಗಳಿಗೆ ಆದೇಶ ಪತ್ರವನ್ನು ನೀಡಲಾಯಿತು.

ವೇದಿಕೆಯ ಮೇಲೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತ ಸದಸ್ಯರು ಈ ಸಂಧರ್ಭದಲ್ಲಿ ವಾಡಿ ವಲಯ ಘಟಕ ಕಸಾಪ ಅಧ್ಯಕ್ಷರು ಸಿದ್ದಯ್ಯ ಸ್ವಾಮಿಗಳು, ಮತ್ತು ನಾಲವಾರ ಗ್ರಾಮ ಪಂಚಾಯತಿ ಸದಸ್ಯರು ಮೈಲಾರಿ ಮಳಬಾ, ಅರುಣಕುಮಾರ ಸುಣಗಾರ, ಸಧ್ಮ ತೇಲಿ ನಾಲವಾರ, ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್. ಶರಣಗೌಡ ಕರಡಿ ಕೊಲ್ಲೂರು. ಸಿದ್ದು ಮಳಬಾ, ರಾಜೇಂದ್ರ ಕೊಲ್ಲೂರು. ಮಲ್ಲಿಕಾರ್ಜುನ ತಳವಾರ ಸುಗೂರ, ದೇವು ಪೂಜಾರಿ, ಸೋಮನಾಥ ಕೊಚ್ಚೂರು, ಶಿವಲೀಲಾ ತುನ್ನೂರು. ವಿಶೇಷ ಸನ್ಮಾನಿತರು ಲಿಂಗನ್ನ ಮಲ್ಕನ್, ಡಾ, ಸತೀಶ್ ಸುಗ್ಗಾ. ಆಂಜನೇಯ ಸುಗ್ಗಾ. ಮಲ್ಲೇಶಿ ಸೊಂಟೇನರ್. ವಿಜಯ ಕೊಲ್ಲೂರು. ಚಂದಾಸ್ ಸನ್ನತಿ. ಹಣಮಂತ ಪಟ್ಟೇದಾರ.ರಾಜು ಮಲ್ಲೇದ್. ಲಕ್ಷೀಕಾಂತ ಮಳಬಾ.ಸುರೇಶ್ ಮಳಬಾ ಸ್ವಾಗತ ಭಾಷಣ , ಹಿರಿಯ ಪರ್ತಕರ್ತರಾದ ಶ್ರೀ ರಮೇಶ್ ಭಟ್ ಅವರು ಮಾತನಾಡಿ ಈ ಕನ್ನಡ ನಾಡಿನ ಬಗ್ಗೆ ಮಾತನಾಡಿ- ಕನ್ನಡ ನೆಲ, ಜಲ ಮತ್ತು ಭಾಷೆಯು ಕರ್ನಾಟಕದ ಅಸ್ಮಿತೆ, ಸಾಂಸ್ಕೃತಿಕ ಪರಂಪರೆ ಮತ್ತು ಅಭಿಮಾನದ ಸಂಕೇತಗಳಾಗಿವೆ.

ಇವುಗಳನ್ನು ರಕ್ಷಿಸುವುದು, ಗೌರವಿಸುವುದು ಮತ್ತು ಉಳಿಸಿ ಬೆಳೆಸುವುದು ಪ್ರತಿಯೊಬ್ಬ ಕನ್ನಡಿಗನ ಜವಾಬ್ದಾರಿ ಯಾಗಿದೆ ಎಂದರು, ಪ್ರಖ್ಯಾತ ಪತ್ರಕರ್ತರಾದ ಮಡಿವಾಳಪ್ಪ ಏವೂರ ವಾಡಿ, ಹಾಗೂ ಹರಿಶ್ಚಂದ್ರ ಕರಣಿಕ, ಈ ನಾಲವಾರ ವಲಯ ಘಟಕ ಕನ್ನಡ ಸಾಹಿತ್ಯ ಪರಿಷತ್ತ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಮತ್ತು ಕವಿಗೋಷ್ಠಿಯ ಕಾರ್ಯಕ್ರಮ ಕ್ಕೆ ನೂರಾರು ಕನ್ನಡ ಅಭಿಮಾನಿಗಳು ಭಾಗವಹಿಸಿದರು ಎಂದು ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್ ನಾಲವಾರ ವಲಯ ಘಟಕ ಕನ್ನಡ ಸಾಹಿತ್ಯ ಪರಿಷತ್ತ ಸಂಘಟನಾ ಕಾರ್ಯದರ್ಶಿ ತಿಳಿಸಿದರು ಎಂದು ವರದಿಯಾಗಿದೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button