ಕೋಲ್ಕತಾ : ಮಧ್ಯಾನದ ಬಿಸಿಯೂಟದಲ್ಲಿ ಹಾವು,30 ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲು…!
ಕೋಲ್ಕತ್ತಾ (ಜನವರಿ 10) :
ಮಧ್ಯಾಹ್ನದ ಬಿಸಿಯೂಟ ತಿಂದು 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥರಾದ ಘಟನೆ ಪಶ್ಚಿಮ ಬಂಗಾಳದ ಬಿರ್ಬುಮ್ ಜಿಲ್ಲೆಯಲ್ಲಿ ನಡೆದಿದೆ. ಬಿಸಿಯೂಟದ ಪಾತ್ರೆಗೆ ಹಾವು ಬಿದ್ದಿದ್ದು, ಈ ಆಹಾರ ಸೇವಿಸಿದ ಮಕ್ಕಳು ಅಸ್ವಸ್ಥರಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.
ಮಧ್ಯಾಹ್ನದ ಬಿಸಿಯೂಟ ಸೇವಿಸಿ ಮಕ್ಕಳು ಅಸ್ವಸ್ಥರಾಗುತ್ತಿರುವ ಹಲವು ಘಟನೆಗಳು ಇತ್ತೀಚೆಗೆ ವರದಿಯಾಗಿದೆ. ಅದರಂತೆಯೇ ಇಂದು ಕೋಲ್ಕತಾದಲ್ಲಿ ಮಧ್ಯಾಹ್ನದ ಬಿಸಿಯೂಟ ತಿಂದು 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥರಾದ ಘಟನೆ ಪಶ್ಚಿಮ ಬಂಗಾಳದ ಬಿರ್ಬುಮ್ ಜಿಲ್ಲೆಯಲ್ಲಿ ನಡೆದಿದೆ. ಬಿಸಿಯೂಟದ ಪಾತ್ರೆಗೆ ಹಾವು ಬಿದ್ದಿದ್ದು, ಈ ಆಹಾರ ಸೇವಿಸಿದ ಮಕ್ಕಳು ಅಸ್ವಸ್ಥರಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.
ಆಹಾರ ಸೇವಿಸಿ ಅಸ್ವಸ್ಥಗೊಂಡ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಿರ್ಬುಮ್ ಜಿಲ್ಲೆಯ ಮಯೂರೇಶ್ವರ ಬ್ಲಾಕ್‌ನ ಪ್ರಾಥಮಿಕ ಶಾಲೆಯ ಸುಮಾರು 30 ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಕ್ಕಳು ಅಸ್ವಸ್ಥರಾಗಲು ಹಾವು ಕಾರಣವೇ ಎಂದು ತನಿಖೆ ನಡೆಸಲಾಗುತ್ತದೆ. ಹಾವು ಪಾತ್ರೆಗೆ ಬಿದ್ದಿತ್ತೇ? ಇತ್ಯಾದಿ ವಿಷಯಗಳನ್ನು ತನಿಖೆ ಮಾಡುತ್ತಿದ್ದಾರೆ. “ಬೇಳೆ ತುಂಬಿದ ಕಂಟೈನರ್‌ನಲ್ಲಿ ಒಂದು ಹಾವು ಇತ್ತುʼʼ ಎಂದು ಶಾಲಾ ಅಡುಗೆ ಸಿಬ್ಬಂದಿಯೊಬ್ಬರು ಹೇಳಿದ್ದಾರೆ.
“ಆಹಾರ ಸೇವಿಸಿದ ಮಕ್ಕಳು ವಾಂತಿ ಮಾಡಲು ಆರಂಭಿಸಿದರು. ತಕ್ಷಣ ನಾವು ಅವರನ್ನು ರಾಂಪುರಹತ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಕರೆದೊಯ್ದೆವುʼʼ ಎಂದು ಶಾಲಾ ಅಡುಗೆ ಸಿಬ್ಬಂದಿಯೊಬ್ಬರು ಮಾಹಿತಿ ನೀಡಿದ್ದಾರೆ.
ಓರ್ವ ಬಾಲಕನನ್ನು ಹೊರತುಪಡಿಸಿ ಉಳಿದವರನ್ನು ಡಿಸ್‌ಚಾರ್ಜ್ ಮಾಡಲಾಗಿದೆ ಎಂದು ಬ್ಲಾಕ್ ಅಭಿವೃದ್ಧಿ ಅಧಿಕಾರಿ ದೀಪಾಂಜನ್ ಜನಾ ಮಾಹಿತಿ ನೀಡಿದ್ದಾರೆ.