ಕಾಂತಾರ ಆಸ್ಕರ್ ಪ್ರಶಸ್ತಿ : ಕಾಂತರಕ್ಕೆ ಒಂದಲ್ಲ , ಎರಡು ಆಸ್ಕರ್ ಪ್ರಶಸ್ತಿ…!
ರಿಷಬ್ ಶೆಟ್ಟಿ ಅಭಿನಯದ ಹಾಗೂ ನಿರ್ದೇಶಿಸಿರುವ ಕಾಂತಾರ ಸಿನಿಮಾ ಹೊಸ ಹೊಸ ದಾಖಲೆಯ ಮೇಲೆ ದಾಖಲೆ ಬರೆದಿದೆ. ಈಗ ಸಿನಿಮಾಗೆ ಸಂಬಂಧಿಸಿದಂತೆ ಹೊಂಬಾಳೆ ಫಿಲ್ಮ್ ಮಹತ್ವದ ಹಾಗೂ ಕರ್ನಾಟಕವೇ ಖುಷಿ ಪಡುವ ವಿಚಾರವೊಂದನ್ನು ಹಂಚಿಕೊಂಡಿದ್ದಾರೆ . RRR ನಂತಹ ದೊಡ್ದ ಬಜೆಟ್ ಫಿಲ್ಮ್ ಗಳನ್ನೂ ಹಿಂದಿಕ್ಕಿ ಕನ್ನಡದ ಕಾಂತಾರ ಸಿನಿಮಾವು ಒಟ್ಟು 2 ಆಸ್ಕರ್ ಪ್ರಶಸ್ತಿಗಳಿಗೆ ಅರ್ಹತೆ ಪಡೆದುಗೊಂಡಿದೆ ಎಂದು ಹೊಂಬಾಳೆ ಪಿಲ್ಮ್ ಹಂಚಿಕೊಂಡಿದೆ, ಒಂದು ಉತ್ತಮ ಚಿತ್ರ ಮತ್ತು ಇನ್ನೊಂದು ಉತ್ತಮ ನಟ ವಿಭಾಗಕ್ಕೂ ಅರ್ಹತೆ ಪಡೆದಿದೆ ಎಂದು ಟ್ವಿಟ್ ಮಾಡಿದೆ.
ಬೆಂಗಳೂರು :
ಭಾರತದಲ್ಲಿ ಸಿನೆಮಾ ರಂಗದಲ್ಲಿ ನಡೆದ ಆಸ್ಕರ್ ರೇಸ್‍ನಲ್ಲಿ ಒಟ್ಟು 301 ಸಿನಿಮಾಗಳು ಅರ್ಹತಾ ಸುತ್ತನ್ನು ಪಾಸ್ ಮಾಡಿವೆ ಅದರಲ್ಲಿ ನಮ್ಮ ಕನ್ನಡದ ಕಾಂತಾರ ಕೂಡಾ ಒಂದು.ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ಸೂಪರ್ ಹಿಟ್ ‘ಕಾಂತಾರ’ ಮತ್ತೊಂದು ಮೈಲಿಗಲ್ಲು ನಿರ್ಮಿಸಲು ಸಜ್ಜಾಗಿದೆ. ಈ ಮೊದಲೂ ಸಿನಿಮಾ ಆಸ್ಕರ್ ಪ್ರಶಸ್ತಿ ಗೆಲ್ಲುವ ಸುದ್ದಿ ಹಬ್ಬಿದ್ದು ಈಗ ಉತ್ತಮ ನಟ ಪ್ರಶಸ್ತಿಗೂ ನಾಮಿನೇಟ್ ಆಗಿದೆ. ಇನ್ನೂ ಆಸ್ಕರ್ ಸದಸ್ಯರು ಮತ ಚಲಾಯಿಸಿದರೆ ‘ಕಾಂತಾರ’ ಸಿನಿಮಾ ಮುಖ್ಯ ನಾಮಿನೇಷನ್ಗೆ ಎಂಟ್ರಿ ಕೊಡಲಿದೆ.
ಬಾಕ್ಸ್ ಆಫೀಸ್‍ನಲ್ಲಿ ಧೂಳಿಪಟ ಮಾಡಿ ಹೊಸ ಹೊಸ ದಾಖಲೆಗಳನ್ನು ಸೃಷ್ಟಿಸಿರುವ ‘ಕಾಂತಾರ’ ಇದೀಗ ಆಸ್ಕರ್ ಪ್ರಶಸ್ತಿಗೆ ಮತ್ತಷ್ಟು ಹತ್ತಿರವಾಗಿದೆ.
ಹೌದು, ಕೇವಲ 18 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಕನ್ನಡದ ಹೆಮ್ಮೆಯ ‘ಕಾಂತಾರ’ ಆಸ್ಕರ್ ರೇಸ್‍ಗೆ ಎಂಟ್ರಿ ಕೊಟ್ಟಿದ್ದು, 2 ವಿಭಾಗಗಳಲ್ಲಿ ಅರ್ಹತೆ ಪಡೆದುಕೊಂಡಿದೆ. ಅತ್ಯುತ್ತಮ ಚಿತ್ರ ಹಾಗೂ ಅತ್ಯುತ್ತಮ ನಟ ವಿಭಾಗದಲ್ಲಿ ‘ಕಾಂತಾರಾ’ ಅರ್ಹತಾ ಸುತ್ತು ಪಾಸ್ ಮಾಡಿದ್ದು, ಕನ್ನಡಿಗರ ಖುಷಿಯನ್ನು ಹೆಚ್ಚಿಸಿದೆ. ಈ ವಿಷಯವಾಗಿ ಹೊಂಬಾಳೆ ಫಿಲ್ಮ್ಸ್ , “ಈ ವಿಚಾರವನ್ನು ಹಂಚಿಕೊಳ್ಳಲು ನಮಗೆ ಅತೀವ ಸಂತಸವಾಗುತ್ತಿದೆ! ನಮ್ಮನ್ನು ಬೆಂಬಲಿಸಿದ ಎಲ್ಲರಿಗೂ ಹೃತ್ತೂರ್ವಕ ಧನ್ಯವಾದ. ನಿಮ್ಮೆಲ್ಲರ ಬೆಂಬಲದೊಂದಿಗೆ ಮುಂದಿನ ಪ್ರಯಾಣ’ ಎಂದು ಹೊಂಬಾಳೆ ಹೇಳಿದೆ.
ಕೇವಲ 18 ಕೋಟಿ ರೂ.ನಲ್ಲಿ ನಿರ್ಮಿಸಿದ ‘ಕಾಂತಾರ’ ಸಿನಿಮಾ ಬಾಕ್ಸ್ ಆಫೀಸ್‍ನಲ್ಲಿ ಬರೋಬ್ಬರಿ 400 ಕೋಟಿ ರೂ.ಗೂ ಹೆಚ್ಚಿ ಗಳಿಕೆ ಮಾಡಿದೆ. ಅಮೆಜಾನ್ ಪ್ರೈಮ್‍ನಲ್ಲಿ ಕನ್ನಡ, ತೆಲುಗ ತಮಿಳು ಮತ್ತು ಮಲಯಾಳಂ ಭಾಷೆಯಲ್ಲಿ ರಿಲೀಸ್ ಆದರೆ, ಇತ್ತೀಚಿಗೆ ನೆಟ್‍ಫ್ಲಿಕ್ಸ್‍ನಲ್ಲಿ ಹಿಂದಿ ಭಾಷೆಯಲ್ಲಿ ಬಿಡುಗಡೆಯಾಗಿದೆ. ಜೊತೆಗೆ ಸಂಕ್ರಾಂತಿ ಹಬ್ಬದ ಪ್ರಯುಕ್ತ ‘ಸ್ಟಾರ್ ಸುವರ್ಣ’ದಲ್ಲಿ ‘ಕಾಂತಾರ’ ಬಿಡುಗಡೆಯಾಗುತ್ತಿದೆ.