25 ವರ್ಷದ ದಲಿತ ಯುವತಿ ಗಾಯಿತ್ರಿ ಕೋಲಾರ ಹೈ ಕೋರ್ಟ್ ನ್ಯಾಯಾಧೀಶೆಯಾಗಿ ಆಯ್ಕೆ…..!
ಕೋಲಾರ ( ಜ.17) :
ಕರ್ನಾಟಕ ಉಚ್ಚ ನ್ಯಾಯಾಲಯವು ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ನೇರ ನೇಮಕಾತಿಗಾಗಿ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ಇದೀಗ ಅದರ ಫಲಿತಾಂಶ ಪ್ರಕಟಗೊಂಡಿದ್ದು ತಳವರ್ಗದ N. ಗಾಯತ್ರಿ ಅವರು ಆಯ್ಕೆಯಾಗಿದ್ದಾರೆ. ಸತತ ಪ್ರಯತ್ನದ ಮೂಲಕ 25ನೇ ವಯಸ್ಸಿಗೆ ಸಿವಿಲ್ ನ್ಯಾಯಾಧೀಶ ಹುದ್ದೆಗೆ ಆಯ್ಕೆಯಾಗಿದ್ದಾರೆ.
ಗಾಯಿತ್ರಿ ಅವರು ಅತ್ಯಂತ ತಳವರ್ಗದ ಮತ್ತು ಬಡತನದ ಹಿನ್ನೆಲೆಯಿಂದ ಬಂದವರಾಗಿದ್ದು, ಬಡತನದಲ್ಲಿ ಹುಟ್ಟಿದವರಿಗೆ ಏನನ್ನಾದರೂ ಸಾಧಿಸಲು ಬಹಳ ಕಷ್ಟದ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ , ಎಲ್ಲವನ್ನೂ ಮೆಟ್ಟಿ ನಿಂತು ಇಂದು ಇಡೀ ತನ್ನ ಸಮುದಾಯದವರಿಗೆ ಹೆಮ್ಮ ಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ , ಅಷ್ಟೇ ಅಲ್ಲದೆ ಗಾಯಿತ್ರಿ ಅವರು ಬಡತನದಲ್ಲಿರುವವರಿಗೆ ಮಾದರಿಯಾಗಿದ್ದಾರೆ. ಸಾಧನೆಗೆ ಯಾವುದೇ ಬಡತನ ಕಾರಣವಲ್ಲ ಎಂದು ತೋರಿಸಿಕೊಟ್ಟಿದ್ದಾರೆ.
ಗಾಯತ್ರಿ ಅವರು KGF ನ ಕೆಂಗಲ್ ಹನುಮಂತಯ್ಯ ಲಾ ಕಾಲೇಜಿನಲ್ಲಿ ಕಾನೂನು ಪದವಿಯನ್ನು ಕರ್ನಾಟಕಕ್ಕೆ 4ನೇ ಸ್ಥಾನದಲ್ಲಿ ಬರುವ ಮೂಲಕ ನ್ಯಾಯಾಧೀಶೆ ಹುದ್ದೆಯನ್ನು ಪಡೆದುಕೊಂಡಿದ್ದಾರೆ.
ಈ ದಿನ.ಕಾಮ್ ಜೊತೆ ಮಾತನಾಡಿದ ಸಿವಿಲ್ ನ್ಯಾಯಾಧೀಶ ಹುದ್ದೆಗೆ ಆಯ್ಕೆಯಾಗಿರುವ ಗಾಯತ್ರಿ ಅವರು, “ಎರಡನೇ ಪ್ರಯತ್ನದಲ್ಲಿ ಸಿವಿಲ್ ನ್ಯಾಯಾಧೀಶ ಹುದ್ದೆಗೆ ಆಯ್ಕೆಯಾಗಿರುವುದು ತುಂಬಾ ಸಂತಸ ತಂದಿದೆ. ನನಗಿಂತ ನಮ್ಮ ಕುಟುಂಬಸ್ಥರು ಖುಷಿಗೊಂಡಿದ್ದಾರೆ’ ಎಂದು ಈ ದಿನ.ಕಾಮ್ ಜೊತೆ ಸಂತಸ ಹಂಚಿಕೊಂಡರು.
“ನಮ್ಮಮನೆಯಲ್ಲಿ ಉನ್ನತ ಶಿಕ್ಷಣ ಪಡೆದ ಮೊದಲ ಮಹಿಳೆ ನಾನು ಸರ್ಕಾರಿ ನೌಕರಿ ಪಡೆದುಕೊಂಡದ್ದು ಅದರಲ್ಲೂ ಸಿವಿಲ್ ನ್ಯಾಯಾಧೀಶ ಹುದ್ದೆಗೆ ಆಯ್ಕೆಯಾಗಿರುವುದರಲ್ಲಿ ಮೊದಲಿಗಳು, ತಳ ಸಮುದಾಯಗಳ ತಲ್ಲಣಗಳಿಗೆ ಮಿಡಿಯಲು ಪ್ರಯತ್ನಿಸುತ್ತೇನೆ. ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ನನ್ನ ಮಿತಿಯಲ್ಲಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವೆ. ನನ್ನೆಲ್ಲ ಸಾಧನೆಗೆ ಅಂಬೇಡ್ಕರ್ ಅವರು ಸ್ಫೂರ್ತಿಯಾಗಿದ್ದು ಅವರು ಹಾಕಿಕೊಟ್ಟ ದಾರಿಯಲ್ಲಿ ನಡೆಯುವೆ” ಎಂದು ತಮ್ಮ ಸಾಧನೆಗೆ ಅಂಬೇಡ್ಕರ್ ಅವರೆ ಸ್ಪೂರ್ತಿ ಎಂದು ಹೇಳಿದರು ಹೇಳಿದರು.