ಭಯೋತ್ಪಾದಕ ಹಫೀಜ್ ಸಯೀದ್ ನ ಭಾವ ಅಬ್ದುಲ್ ರೆಹಮಾನ್ ಮಕ್ಕಿಗೆ “ಜಾಗತಿಕ ಭಯೋತ್ಪಾದಕ”ನ ಹಣೆಪಟ್ಟಿ ಕಟ್ಟಿದ ವಿಶ್ವ ಸಂಸ್ಥೆಯ ಭದ್ರತಾ ಮಂಡಳಿ….!

 

ವಾಷಿಂಗ್ಟನ್ ( ಜನವರಿ 17):‌‌

ಭಯೋತ್ಪಾದನೆ ಎಂದರೆ ನಮ್ಮ ಯೋಚನೆಗೆ ಮೊದಲು ಬರುವುದೆಂದರೆ ಪಾಕಿಸ್ತಾನ ಈಗ, ಈ ಪಾಕ್‌ ಮೂಲದ ಅಬ್ದುಲ್ ರೆಹಮಾನ್ ಮಕ್ಕಿ ,ಹಲವು ಉಗ್ರ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಅಬ್ದುಲ್ ರೆಹಮಾನ್ ಮಕ್ಕಿಯನ್ನು ವಿಶ್ವ ಸಂಸ್ಥೆಯ ಭದ್ರತಾ ಮಂಡಳಿ ಸೋಮವಾರ ( ಜ.16 ರಂದು) ʼಜಾಗತಿಕ ಭಯೋತ್ಪಾದಕʼ ಪಟ್ಟಿಗೆ ಸೇರಿಸಿ “ಯೂನಿವರ್ಸಲ್ ಟೆರರಿಸ್ಟ್” ಎಂಬ ಪಟ್ಟ ಕಟ್ಟಿದ.

2020 ರಲ್ಲಿ ಭಾರತ ಅಬ್ದುಲ್ ರೆಹಮಾನ್ ಮಕ್ಕಿಯನ್ನು ನಿರ್ಬಂಧಗಳ ಸಮಿತಿಯ ಅಡಿಯಲ್ಲಿ ಜಾಗತಿಕ ಭಯೋತ್ಪಾದಕ ಪಟ್ಟಿಗೆ ಸೇರಿಸಬೇಕೆಂದು ವಿಶ್ವ ಸಂಸ್ಥೆಯಲ್ಲಿ ಪ್ರಸ್ತಾಪ ಮಾಡಿತ್ತು. ಆ ವೇಳೆಯಲ್ಲಿ ಚೀನಾ ಪಾಕಿಸ್ತಾನದ ಮಕ್ಕಿ ಪರವಾಗಿ ನಿಂತಿತ್ತು. 2022 ರ ಜೂನ್‌ ನಲ್ಲಿ ಈ ಕುರಿತು ಚೀನಾವನ್ನು ಭಾರತ ತರಾಟೆಗೆ ತೆಗೆದುಕೊಂಡಿತ್ತು.

“16 ಜನವರಿ 2023 ರಂದು, ಭದ್ರತಾ ಮಂಡಳಿಯ ಸಮಿತಿಯು 1267 (1999), 1989 (2011) ಮತ್ತು 2253 (2015), ISIL (ದಯೆಶ್), ಅಲ್-ಖೈದಾ ಮತ್ತು ಸಂಬಂಧಿತ ವ್ಯಕ್ತಿಗಳು, ಉದ್ಯಮಗಳು ಮತ್ತು ಘಟಕಗಳಿಗೆ ಸಂಬಂಧಿಸಿದಂತೆ ನಿರ್ಣಯಗಳನ್ನು ಅನುಮೋದಿಸಿತು. ಈ ನಿರ್ಣಯದಲ್ಲಿ ವ್ಯಕ್ತಿಯ ಸ್ವತ್ತುಗಳ ಮುಟ್ಟಗೋಲು ನಿಷೇಧ ಮತ್ತು ಶಸ್ತ್ರಾಸ್ತ್ರ ನಿರ್ಬಂಧಕ್ಕೆ ಸೂಚಿಸಲಾಗಿದೆ ಎಂದು ಭದ್ರತಾ ಮಂಡಳಿ ಹೇಳಿದೆ.

ಭಾರತಕ್ಕೆ ಬೇಕಾಗಿದ್ದ ಮೋಸ್ಟ್‌ ವಾಂಟೆಡ್‌ ಟೆರರಿಸ್ಟ್ ಈ ಅಬ್ದುಲ್ ರೆಹಮಾನ್ ಮಕ್ಕಿ:

LET/JUD ಕಾರ್ಯಕರ್ತರೊಂದಿಗೆ ಸೇರಿಕೊಂಡು ಹಣವನ್ನು ಸಂಗ್ರಹ ಮಾಡುವುದರಲ್ಲಿ, ಯುವಕ,ಯುವತಿಯರನ್ನು ಹಿಂಸಾಚಾರಕ್ಕೆ ನೇಮಿಸಿಕೊಳ್ಳುವುದು ಮತ್ತು ಅವರನ್ನು ಉಗ್ರ ಚಟುವಟಿಕೆಗೆ ಪ್ರೇರೆಪಿಸಿ,ಜಮ್ಮು ಕಾಶ್ಮೀರದಲ್ಲಿ ದಾಳಿಗೆ ಯೋಜನೆ ಹಾಕುವುದರಲ್ಲಿ ಅಬ್ದುಲ್ ರೆಹಮಾನ್ ಮಕ್ಕಿ ಹೆಸರು ಬಹಳ ದೊಡ್ದ ಕೇಳಿ ಬಂದಿತ್ತು.

ಭಾರತ ಮತ್ತು ಅಮೆರಿಕಾ ಈಗಾಗಲೇ ಮಕ್ಕಿಯನ್ನು ತಮ್ಮ ದೇಶೀಯ ಕಾನೂನಿನ ಅಡಿಯಲ್ಲಿ ಭಯೋತ್ಪಾದಕ ಎಂದು ಹಣೆ ಪಟ್ಟಿ ಕಟ್ಟಿದೆ. 26/11 ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್ ನ ಭಾವ ಈ ಮಕ್ಕಿ ಎಂದು ತಿಳಿದು ಬಂದಿದೆ.

LET ಮತ್ತು JUD ಯಲ್ಲಿ ನಾಯಕತ್ವದ ಸ್ಥಾನವನ್ನು ಹೊಂದಿದ್ದ ಮಕ್ಕಿ ಈ ಕೆಳಕಂಡ ದಾಳಿಗಳ ಹಿಂದಿನ ರೂವಾರಿಯಾಗಿದ್ದನು ಎಂದು ವಿಶ್ವ ಸಂಸ್ಥೆ ಹೇಳಿದೆ.

ಕೆಂಪು ಕೋಟೆ ದಾಳಿ :

ಡಿಸೆಂಬರ್ 22, 2000 ರಂದು ಆರು LET ಭಯೋತ್ಪಾದಕರು ಕೆಂಪು ಕೋಟೆಗೆ ನುಗ್ಗಿ ಮತ್ತು ಕೋಟೆಯನ್ನು ಕಾವಲು ಕಾಯುತ್ತಿದ್ದ ಭದ್ರತಾ ಪಡೆಗಳ ಮೇಲೆ ಮನಬಂದಂತೆ ಗುಂಡಿನ ದಾಳಿ ನಡೆಸಿದರು. ಈ ದಾಳಿಯ ಹಿಂದೆ ಮಕ್ಕಿ ಇದ್ದ.

ರಾಂಪುರ ದಾಳಿ :

ಐವರು LET ಭಯೋತ್ಪಾದಕರು ಜನವರಿ 1, 2008 ರಂದು ರಾಂಪುರದ ಕೇಂದ್ರೀಯ ಮೀಸಲು ಪೊಲೀಸ್ ಪಡೆ (CRPF) ಶಿಬಿರದ ಮೇಲೆ ದಾಳಿ ಮಾಡಿದರು, ಇದರಲ್ಲಿ ಏಳು ಸಿಬ್ಬಂದಿ ಮತ್ತು ರಿಕ್ಷಾ ಚಾಲಕರು ಕೊಲ್ಲಲ್ಪಟ್ಟಿದ್ದರು.

26/11 ಮುಂಬೈ ದಾಳಿ :

ಭಾರತದಲ್ಲಿ LET ನಡೆಸಿದ ಭೀಕರ ದಾಳಿಯಲ್ಲಿ ಮುಂಬೈ ದಾಳಿ ಒಂದು. ಪಾಕಿಸ್ತಾನದಿಂದ 10 ಭಯೋತ್ಪಾದಕರು ಅರಬ್ಬಿ ಸಮುದ್ರದ ಮೂಲಕ ಮುಂಬೈಗೆ ಪ್ರವೇಶಿಸಿ ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಅಮೀರ್ ಅಜ್ಮಲ್ ಕಸಬ್ ಜೀವಂತವಾಗಿ ಸಿಕ್ಕಿಬಿದ್ದಿದ್ದ. ಉಳಿದವರು ಕೊಲ್ಲಲ್ಪಟ್ಟಿದ್ದರು.

ಇದಲ್ಲದೇ 2018 ರ 12 ಮತ್ತು 13 ನೇ ಫೆಬ್ರವರಿಯಲ್ಲಿ ನಡೆದ ಕರಣ್ ನಗರ, ಶ್ರೀನಗರ ದಾಳಿ,
30 ಮೇ 2018 ರಲ್ಲಿ ನಡೆದ ಖಾನ್ಪೋರಾ, ಬಾರಾಮುಲ್ಲಾ ದಾಳಿ,
14 ಜೂನ್ 2018 ರಲ್ಲಿ ನಡೆದ ಶ್ರೀನಗರ ದಾಳಿ ಹೀಗೆ ಹತ್ತಾರು LET ಹೊಣೆಯ ಕೃತ್ಯದ ಹಿಂದೆ ಮಾಸ್ಟರ್‌ ಮೈಂಡ್‌ ಈ ಮಕ್ಕಿ ಆಗಿದ್ದನು .

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button