ಕರಕುಚ್ಚಿಯಿಂದ ತರೀಕೆರೆ-ಮಂಗಳೂರು ಸಂಪರ್ಕದ 5 ಕಿ.ಮೀ ಉದ್ದದ ರಸ್ತೆ ಅಭಿವೃದ್ಧಿಗೆ ಕಾಮಗಾರಿಗೆ ಗುದ್ದಲಿ ಪೂಜೆ ಮಾಡಿದ ತರೀಕೆರೆ ತಾಲ್ಲೂಕಿನ ಶಾಸಕರು ಡಿ ಎಸ್ ಸುರೇಶ್……
ಚಿಕ್ಕಮಗಳೂರು ( ತರೀಕೆರೆ ಮಾ. 3) :
ಶಾಸಕ ಡಿ ಎಸ್ ಸುರೇಶ್ ಇಂದು ಕರುಕುಚ್ಚಿ ಗ್ರಾಮದಲ್ಲಿ ಏರ್ಪಡಿಸಿದ್ದ 6.5 ಕೋಟಿ ಅನುದಾನದಲ್ಲಿ ಕರಕುಚ್ಚಿಯಿಂದ ತರೀಕೆರೆ, ಮಂಗಳೂರು ಸಂಪರ್ಕದ 5 ಕಿ.ಮೀ ಉದ್ದದ ರಸ್ತೆ ಅಭಿವೃದ್ಧಿಗೆ ಗುದ್ದಲಿ ಪೂಜೆ ನೆರವೇರಿಸಿ ರಸ್ತೆ ಅಭಿವೃದ್ಧಿ ಕಾಮಗಾರಿಯೂ ಗುಣಮಟ್ಟದಾಗಿರಬೇಕು ಎಂದು ಹೇಳಿದರು.
ಈ ಕಾರ್ಯಕ್ರಮದ ಬಗ್ಗೆ ಮಾತನಾಡಿದ ಅವರು “ಎಂ ಸಿ ಹಳ್ಳಿ ಗೇಟ್ ನಿಂದ ಗೋಪಾಲ ಗ್ರಾಮದವರಿಗೂ 6.5 ಕೋಟಿ ಅನುದಾನದಲ್ಲಿ ರಸ್ತೆ ಅಭಿವೃದ್ಧಿಯಾಗಿದೆ ತಾಂಡ ಹಾಗೂ ಸೋಂಪುರದ ರಸ್ತೆಯನ್ನು ಅಭಿವೃದ್ಧಿಪಡಿಸಲಾಗಿದೆ ಈ ಭಾಗದ ಜನರು ಭದ್ರಾವತಿ ತರೀಕೆರೆಗೆ ಹೋಗುವ ಎಮ್ ಸಿ ಹಳ್ಳಿ ಸಂಪರ್ಕ ರಸ್ತೆ ಹಾಗೂ ಕ್ಷೇತ್ರದ ಎಲ್ಲಾ ಕಡೆ ರಸ್ತೆ ಸೇತುವೆಗಳನ್ನು ಅಭಿವೃದ್ಧಿಪಡಿಸಲಾಗಿದೆ,ಚರಂಡಿ ಸಿಸಿ ರಸ್ತೆ ಮಾಡುವುದು ಗ್ರಾಮ ಪಂಚಾಯಿತಿಯವರು ಎನ್ ಆರ್ ಇ ಜಿ ಯಲ್ಲಿ ಬೇಕಾದಷ್ಟು ಅನುದಾನ ಇದೆ ಆ ಹಣ ಬಳಸಿಕೊಂಡು ಚರಂಡಿ ರಸ್ತೆ ಹಾಗೂ ತೋಟಗಳಿಗೆ ಹೋಗುವ ರಸ್ತೆಗಳನ್ನು ಅಭಿವೃದ್ಧಿಪಡಿಸಿರಿ. ಹಿಂದೆ ಜಿಲ್ಲಾ ಪಂಚಾಯಿತಿ ತಾಲೂಕು ಪಂಚಾಯಿತಿ ಅನುಮೋದನೆಗೊಂಡು ಗ್ರಾಮ ಪಂಚಾಯಿತಿಗೆ ಅನುದಾನ ಬಿಡುಗಡೆ ಯಾಗುತ್ತಿತ್ತು ಆದರೆ ಈಗ ಆ ರೀತಿ ಇಲ್ಲ ಕೇಂದ್ರ ಸರ್ಕಾರದಿಂದ ನೇರವಾಗಿ ಗ್ರಾಮ ಪಂಚಾಯಿತಿಗಳಿಗೆ ಅನುದಾನ ಬಿಡುಗಡೆಯಾಗುತ್ತಿದೆ, ಸರ್ಕಾರವು ವರ್ಗ ಒಂದರಲ್ಲಿ ಸುಮಾರು 10 ಲಕ್ಷ ರೂ. ಅನುದಾನ ಬಜೆಟ್ ನಲ್ಲಿ ಘೋಷಣೆ ಮಾಡಿದೆ. ತರೀಕೆರೆ ಪುರಸಭೆಗೆ ಸ್ವಚ್ಛತೆಯಲ್ಲಿ ರಾಜ್ಯದಲ್ಲಿಯೇ ಮೊದಲನೆ ಸ್ಥಾನ ಪಡೆದಿದೆ ನೀವು ಸಹ ಘನತ್ಯಾಜ್ಯ ವಸ್ತು ವಿಲೇವಾರಿ ಘಟಕಗಳನ್ನು ಮಾಡಿರಿ, ನಿಮ್ಮ ಗ್ರಾಮ ಪಂಚಾಯಿತಿಗಳು ಸಹ ಪ್ರಶಸ್ತಿಗಳನ್ನು ಪಡೆಯಬೇಕು. ಕೂಡ್ಲೂರು, ಕಲ್ಲೇನಹಳ್ಳಿ ಗ್ರಾಮ ಪಂಚಾಯಿತಿಗಳಿಗೆ ಗಾಂಧಿ ಗ್ರಾಮ ಪುರಸ್ಕಾರ ಸಿಕ್ಕಿದೆ ಈ ನಿಟ್ಟಿನಲ್ಲಿ ನೀವು ಪ್ರಯತ್ನಿಸಿರಿ. ಸಿಸಿ ರಸ್ತೆ ಕಾಮಗಾರಿ ಪ್ರಾರಂಭವಾಗಿದೆ, ಗುಣಮಟ್ಟದ ಕಾಮಗಾರಿಗಳನ್ನು ಮಾಡಬೇಕು ನಿಮ್ಮ ಗ್ರಾಮ ಅಭಿವೃದ್ಧಿಗೆ ಯಾರು ಕೆಲಸ ಮಾಡಿದ್ದಾರೆ ಎಂಬುದು ನಿಮ್ಮ ವಿವೇಚನೆಗೆ ಬಿಟ್ಟಿದ್ದು ಅಜ್ಜಂಪುರ ಮತ್ತು ತರೀಕೆರೆ ಎರಡು ತಾಲೂಕಿನ ರೈತರಿಗೆ ವಿ ಎಸ್ ಎಸ್ ಎನ್ ಮುಖಾಂತರ ಕೋಟ್ಯಾಂತರ ರೂಪಾಯಿ ಕೊಟ್ಟಿದ್ದೇವೆ. ಕರಕುಚ್ಚಿ ವಿ ಎಸ್ ಎಸ್ ಎನ್ ಗೆ 12 ಕೋಟಿ 30 ಲಕ್ಷ ಹಣವನ್ನು ಡಿಸಿಸಿ ಬ್ಯಾಂಕ್ ನಿಂದ ಕೊಟ್ಟಿದ್ದೇವೆ” ಎಂದು ಶಾಸಕ ಡಿ ಎಸ್ ಸುರೇಶ್ ಹೇಳಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ರತ್ನಮ್ಮ ಉಪಾಧ್ಯಕ್ಷರಾದ ಮೋಹನ್ ಕುಮಾರ್ ಸದಸ್ಯರಾದ ಪದ್ಮ ಶ್ರೀ ಕೃಷ್ಣಮೂರ್ತಿ ಗೋಪಾಲ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮಮತಾ ಮುಖಂಡರಾದ ಜಯಣ್ಣ, ಪ್ರಸನ್ನ ಕುಮಾರ್,ವೆಂಕಟೇಶ್, ಷಣ್ಮುಖ, ಲೋಕೇಶ್, ವಿ ಎಸ್ ಎಸ್ ಎನ್ ನ ಅಧ್ಯಕ್ಷರಾದ ಶ್ರೀನಿವಾಸ ಮುಂತಾದವರು ಉಪಸ್ಥಿತರಿದ್ದರು.
ವರದಿಗಾರರು : ತರೀಕೆರೆ N. ವೆಂಕಟೇಶ್ …