ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ನರಸಿಂಹಗಿರಿ ಗ್ರಾಮದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು…….
ವಿಜಯನಗರ (ಮಾರ್ಚ್.9) :
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಗುಡಕೋಟೆ ಹೋಬಳಿಯಲ್ಲಿ ಬರುವಂತ ನರಸಿಂಹ ಗಿರಿ ಗ್ರಾಮದ ಮಾಜಿ ಶಾಸಕರಾದ ದಿ. ಎನ್. ಟಿ ಬೊಮ್ಮಣ್ಣ ನವರ ಧರ್ಮಪತ್ನಿ ಶ್ರೀಮತಿ ಓಬಮ್ಮ ಮಕ್ಕಳಾದ ಎನ್. ಟಿ ತಮ್ಮಣ್ಣ, ಡಾ|| ಎನ್. ಟಿ ಶ್ರೀನಿವಾಸ್ ಹಾಗೂ ದೊಡ್ಡ ಮನೆ ಕುಟುಂಬದವರ ಸಮ್ಮುಖದಲ್ಲಿ “ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು “ತಮ್ಮ ಸ್ವಂತ ಊರಾದ ನರಸಿಂಹಗಿರಿ ಗ್ರಾಮದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಈ ಸಮಾರಂಭಕ್ಕೆ ಐವತ್ತೊಂದು ಜನ ಗರ್ಭಿಣಿಯ ಮಹಿಳೆಯರು ಸೀಮಂತ ಕಾರ್ಯಕ್ರಮದಲ್ಲಿ ಭಾಗಿಯಾಗಿ ಉಡಿತುಂಬುವ ಕಾರ್ಯಕ್ರಮದಲ್ಲಿ ಪಾತ್ರರಾದರು. ಈ ಅಭೂತ ಪೂರ್ವ ಕಾರ್ಯಕ್ರಮಕ್ಕೆ ಊರಿನ ಜನರೊಟ್ಟಿಗೆ ಸುತ್ತಮುತ್ತಲಿನ ಗ್ರಾಮಗಳ ಜನರೆಲ್ಲಾ ಸೇರಿದ್ದೂ ತುಂಬಾ ಸಂತೋಷದಿಂದ ಡಾ. ಶ್ರೀನಿವಾಸ್ ಇವರ ಕುಟುಂಬವನ್ನು ಅರಸಿ ಹಾರೈಸಿದರು . ಹಾಗೂ ಪೂಜಾ ಮತ್ತು ಪ್ರಸಾದ ವಿನಿಯೋಗ ಕಾರ್ಯಕ್ರಮದಲ್ಲಿ ಡಾ||ಎನ್. ಟಿ ಶ್ರೀನಿವಾಸ್ ಅವರು ಭಾಗವಹಿಸಿ ಮಹಿಳೆಯರ ಮಹತ್ವದ ಬಗ್ಗೆ ಮಾತನಾಡಿದರು ಅವರು ಆರೋಗ್ಯ ಹಾಗೂ ರಕ್ತ ಹೀನತೆಯ ಸಮಸ್ಯೆಯ ಬಗ್ಗೆ ಅರಿವನ್ನು ಮೂಡಿಸಿದರು. ಹಾಗೆಯೇ ರಕ್ತವೃದ್ಧಿಸುವ ಟಾನಿಕನ್ನು ವಿತರಿಸಿದರು ಗರ್ಭಿಣಿ ಸಮಯದಲ್ಲಿ ತೆಗೆದುಕೊಳ್ಳಬೇಕಾದ ಮುಂಜಾಗ್ರತೆ ಕ್ರಮಗಳ ಬಗ್ಗೆ ಮಾಹಿತಿಯನ್ನ ತಿಳಿಸಿಕೊಟ್ಟರು.
ಈ ಕಾರ್ಯಕ್ರಮದ ಬಗ್ಗೆ ಬಂದಂತಹ ಮಹಿಳೆಯರು ಮಾತನಾಡಿ ಈ ಕಾರ್ಯಕ್ರಮ ನಮ್ಮನ್ನ ಮೂಕ ವಿಸ್ಮಿತಗೊಳಿಸಿದೆ ಎಂದರು. ಒಡಹುಟ್ಟಿದ ಅಣ್ಣನಂತೆ ನಮ್ಮನ್ನ ಮನೆಗೆ ಸ್ವಾಗತಿಸಿ ಮಹಿಳಾ ದಿನಾಚರಣೆಯ ನಿಮಿತ್ತವಾಗಿ ಶುಭ ಹಾರೈಸಿ ಗರ್ಭಿಣಿಯರಾದ ನಮಗೆ ಸೀಮಂತ ಕಾರ್ಯಕ್ರಮ ಮಾಡಿಸಿ ಉಡುಗೊರೆ ನೀಡಿ ಹಾರೈಸಿದ ಕ್ಷಣ ನಮ್ಮಲ್ಲಿ ಆನಂದ ಭಾಷ್ಪ ಬರುವಂತೆ ಮಾಡಿದೆ ಎಂದು ಹತ್ತಾರು ಮಹಿಳೆಯರು ತಿಳಿಸಿದರು.
ವರದಿ: ರಾಘವೇಂದ್ರ ಸಾಲುಮನಿ. ಕೂಡ್ಲಗಿ…