ಶೋಷಿತ ಸಮಾಜಗಳು ಒಂದಾಗಬೇಕು ಅನ್ಯಾಯದ ವಿರುದ್ದ ಹೋರಾಡಬೇಕು ಎಂದು ಡಿ.ಆರ್.ಪಾಂಡುರಂಗಸ್ವಾಮಿ ಕರೆಕೊಟ್ಟರು……
ಹರಪನಹಳ್ಳಿ (ಮಾರ್ಚ್ 9 ) :
ಶೋಷಿತ ಸಮಾಜಗಳು ಒಂದಾಗಬೇಕು ಅನ್ಯಾಯದ ವಿರುದ್ಧ ಹೋರಾಡಬೇಕು ಎಂದು ಡಿಆರ್ ಪಾಂಡುರಂಗಸ್ವಾಮಿ ಅವರು ಕ.ದ. ಸಂ. ಸ. ವಿಜಯನಗರ ಜಿಲ್ಲೆಯ ಜಿಲ್ಲಾ ಸಮಿತಿ ರಚನೆ ಮಾಡಲು ಹರಪನಹಳ್ಳಿ ಪ್ರವಾಸಿ ಮಂದಿರದಲ್ಲಿ ಕರೆದಿದ್ದ ಸಭೆಯನ್ನು ಉದ್ದೇಶಿಸಿ ಹೇಳಿದರು.
ಶೋಷಿತರೆಲ್ಲರೂ ಒಂದಾಗಬೇಕು ತಮ್ಮ ಹಕ್ಕುಗಳಿಗಾಗಿ ಹೋರಾಡಲು ಸಂಘಟನೆಯ ಅನಿವಾರ್ಯತೆ ಇದೆ ಆದ್ದರಿಂದ ವಿಜಯನಗರ ಜಿಲ್ಲೆಯ ಜಿಲ್ಲಾ ಸಂಚಾಲಕರನ್ನಾಗಿ ದುರ್ಗಾ ದಾಸ್ ರವರನ್ನು ಜಿಲ್ಲಾ ಸಂಚಾಲಕರಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು ಜಿಲ್ಲಾ ಸಂಘಟನಾ ಸಂಚಾಲಕರಾಗಿ ರಾಘವೇಂದ್ರ, ಸಾಲುಮನಿ ಮತ್ತು ಜಿಲ್ಲಾ ಸಂಘಟನಾ ಸಂಚಾಲಕರಾಗಿ ವಕೀಲರಾದ ಗಣೇಶ್, ಹಾಗೂ ಹರಪನಹಳ್ಳಿ ತಾಲೂಕು ಸಂಚಾಲಕರಾಗಿ ಕಾಳಪ್ಪ, ಹೂವಿನ ಹಡಗಲಿ ತಾಲೂಕು ಸಂಚಾಲಕರಾಗಿ ಪರಶುರಾಮ, ಕೊಟ್ಟೂರು ತಾಲೂಕು ಸಂಚಾಲಕರಾಗಿ ಸಿದ್ದೇಶ್, ತಾಲೂಕು ಸಂಘಟನಾ ಸಂಚಾಲಕರಾಗಿ ಬದ್ರಿ, ಬಸವರಾಜ್, ಹಗರಿಬೊಮ್ಮನಹಳ್ಳಿ ತಾಲೂಕು ಸಂಚಾಲಕರಾಗಿ ಸೋಮಶೇಖರ್, ತಾಲೂಕು ಸಂಘಟನಾ ಸಂಚಾಲಕರಾಗಿ ಚಾರಪ್ಪರವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು ಈ ಆಯ್ಕೆ ಪ್ರಕ್ರಿಯೆಯನ್ನು ರಾಜ್ಯ ಸಂಘಟನಾ ಸಂಚಾಲಕರಾದ ತರೀಕೆರೆ ಎಲ್ ವೆಂಕಟೇಶ್ ರವರು ನೆರವೇರಿಸಿ ಕೊಟ್ಟರು.
ಈ ಸರ್ವ ಸದಸ್ಯರ ಸಭೆಯಲ್ಲಿ ದಾವಣಗೆರೆ ಜಿಲ್ಲಾ ಸಂಚಾಲಕರಾದ ಶ್ರೀನಿವಾಸ್ ರವರು ಹಾಗೂ ಹರಿಹರ ತಾಲೂಕಿನ ಎಂಜಿ ಸಂತೋಷ್ ಮತ್ತು ಮಲೆಬೆನ್ನೂರಿನ ಪ್ರಕಾಶ್, ಚಿತ್ರದುರ್ಗ ಜಿಲ್ಲಾ ಸಂಚಾಲಕರಾದ ದಿವಾಕರ್, ಜಿಲ್ಲಾ ಸಂಘಟನಾ ಸಂಚಾಲಕರಾದ ಪ್ರಸನ್ನ ರವರು ಉಪಸ್ಥಿತರಿದ್ದರು.
ವರದಿಗಾರರು : ತರೀಕೆರೆ N. ವೆಂಕಟೇಶ್….