ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ (ಎಸ್.ಸಿ) ಮೀಸಲು ಕ್ಷೇತ್ರದಿಂದ ದೀನಾ ಮಂಜುನಾಥ್ ಏಕೈಕ್ ಮಹಿಳಾ ಪ್ರಬಲ ಆಕಾಂಕ್ಷಿಗಾಗಿ ಸಾರ್ವಜನಿಕ ಮಹಿಳೆಯರಿಂದ ದೇವರ ಮೊರೆ
ವಿಜಯನಗರ ( ಮಾರ್ಚ್.9 ) :
ವಿಜಯ ನಗರ ಜಿಲ್ಲೆ ಕೊಟ್ಟೂರು ತಾಲೂಕೀನ ಪಟ್ಟಣದಲ್ಲಿ ಇಂದು ದೀನಾ ಮಂಜುನಾಥ ರವರ ನೂರಾರು ಮಹಿಳಾ ಬೆಂಬಲಿಗರು ಈ ಬಾರಿ 2023 ರ ಮುಂಬರುವ ಸಾರ್ವತ್ರಿಕ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಬಿಜೆಪಿ ಟಿಕೆಟ್ ಆಕಾಂಕ್ಷಿ ಏಕೈಕ ಮಹಿಳೆ ಬಳ್ಳಾರಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರು ದೀನಾ ಮಂಜುನಾಥ್ ಅವರು ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ (ಎಸ್.ಸಿ) ಮೀಸಲು ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಪ್ರಬಲ ಆಕಾಂಕ್ಷಿಯಾಗಿ ಅವರು ಇಂದು ಶ್ರೀ ಕ್ಷೇತ್ರ ಕೊಟ್ಟೂರು ಗುರುಬಸವೇಶ್ವರ ದೇವಸ್ಥಾನಕ್ಕೆ ಬಿಜೆಪಿ ಟಿಕೆಟ್ ಸಿಗಲೆಂದು. ಈ ಬಾರಿ ಮಹಿಳೆಯಾದ ದೀನಾ ಮಂಜುನಾಥರವರಿಗೆ ಬಿಜೆಪಿ ಟೀಕೆಟ್ ಕೋಡಬೇಕು ಏನ್ನುವುದು ಬಹು ದೊಡ್ಡ ಬೇಡಿಕೆಯು ಸಾರ್ವಜನಿಕ ಮಹಿಳೆಯರದ್ದಾಗಿದೆ, ಈ ಸಂದರ್ಭದಲ್ಲಿ ಹಗರಿಬೊಮ್ಮನಹಳ್ಳಿ ಕ್ಷೇತ್ರದ ಸುತ್ತಮುತ್ತಲಿನ ಹಳ್ಳಿಗಳ ಬಿಜೆಪಿ ಮಹಿಳಾ ಕಾರ್ಯಕರ್ತರು ಹಾಗೂ ಹಳ್ಳಿಗಳಿಂದ ಆಗಮಿಸಿದಂತಹ ಸಾವಿರಾರು ಮಹಿಳೆಯರು ಕಾರ್ಯಕರ್ತರು ಶ್ರೀ ಗುರುಕೊಟ್ಟೂರೇಶ್ವರ ಸ್ವಾಮಿಗೆ 101 ತೆಂಗಿನ ಕಾಯಿ ಒಡೆಯುವ ಮೂಲಕ ದೀನಾ ಮಂಜುನಾಥ್ ಅವರಿಗೆ ಟಿಕೆಟ್ ಸಿಗಲಿ ಎಂದು ಆಗ್ರಹಿಸಿ ಹರಕೆ ತೀರಿಸುವುದರ ಮೊರೆ ಹೊದರು. ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ನೂರಾರು ಬಿಜೆಪಿ ಕಾರ್ಯಕರ್ತರು ಹಾಜರಿದ್ದರು.