ಸಮುದಾಯ ಆಧಾರಿತ ಆರೋಗ್ಯ ಜಾಗೃತ ಕಾಯ೯ಕ್ರಮ
- ವಿಜಯನಗರಜಿಲ್ಲೆ:ಮಾರ್ಚ .10 ಕೂಡ್ಲಿಗಿ ಪಟ್ಟಣ ಪಂಚಾಯ್ತಿ ವ್ಯಾಪ್ತಿಯ ಅಮರ ದೇವರ ಗುಡ್ಡ ಗ್ರಾಮದಲ್ಲಿ ತಾಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಐಸಿಟಿಸಿ, ಜಿಲ್ಲಾ ಹೆಚ್.ಐ.ವಿ ಏಡ್ಸ್ ನಿರ್ಮೂಲನ ಇಲಾಖೆ. ಸ್ಥಳೀಯ ಆಡಳಿತ ಸಹಯೋಗದಲ್ಲಿ.
ಸಮುದಾಯ ಆಧಾರಿತ ಆರೋಗ್ಯ ಜಾಗೃತ, ಕಾರ್ಯಕ್ರಮ ಆಯೋಜಿಸಲಾಗಿತ್ತು. ಹೆಚ್.ಐ.ವಿ, ಏಡ್ಸ್ ರೋಗದ ಬಗ್ಗೆ ಜಾಗೃತ ಮೂಡಿಸಲಾಯಿತು, ರಕ್ತ ಗುಂಪು ಮಾದರಿ ಪರೀಕ್ಷೆ, ಹಾಗೂ ರಕ್ತದೊತ್ತಡ, ಸಕ್ಕರೆ ಪ್ರಮಾಣ ಪತ್ತೆ ಪರೀಕ್ಷೆ ಮಾಡಲಾಯಿತು. ಗ್ರಾಮದ ಜನತೆಯಲ್ಲಿ ವೈಯಕ್ತಿಕ ಸ್ವಚ್ಚತೆ ಹಾಗೂ ಸಮೂಹಿಕ ಸ್ವಚ್ಚತೆ ಕುರಿತು, ಮತ್ತು ಪರಿಸರದಲ್ಲಿ ನೈರ್ಮಲ್ಯತೆ ಕಾಪಾಡಿಕೊಳ್ಳುವ ಕುರಿತು ಜಾಗೃತ ಮೂಡಿಸಲಾಯಿತು. ಆರೋಗ್ಯ ಇಲಾಖೆ ಹಾಗೂ ಐಸಿಟಿಸಿ ಸಿಬ್ಬಂದಿ ಹಾಜರಿದ್ದರು,ಮಹಿಳೆಯರು,ಮಕ್ಕಳು,ವೃದ್ಧರು, ಯುವಕರು,ಗರ್ಭಿಣಿಯರು, ನಾಗರೀಕರು, ಗ್ರಾಮಸ್ಥರು ಭಾಗವಹಿಸಿದ್ದರು. ವರದಿ: ರಾಘವೇಂದ್ರ ಸಾಲುಮನಿ. ಕೂಡ್ಲಿಗಿ