ಮಾರ್ಚ್ – 11.12–ಉಚಿತ ಕಣ್ಣು.ಆರೋಗ್ಯ ಉಚಿತ ತಪಾಸಣೆ ಹಾಗೂ ಚಿಕಿತ್ಸೆ ಶಿಬಿರ
ವಿಜಯನಗರ ಮಾರ್ಚ್:10
ವಿಜಯನಗರ ಜಿಲ್ಲೆ- ಕೂಡ್ಲಿಗಿ ತಾಲೂಕು, ಸಮಾಜ ಸೇವಕ ಡಾ, ಎನ್.ಟಿ.ಶ್ರೀನಿವಾಸ ಅಭಿಮಾನಿ ಬಳಗದಿಂದ. ಬಡೇಲಡಕು ಹಾಗೂ ಗುಡೇಕೋಟೆ ಗ್ರಾಮಗಳಲ್ಲಿ, ಉಚಿತವಾಗಿ ಕಣ್ಣು ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸೆ, ಆರೋಗ್ಯ ತಪಾಸಣೆ ಮತ್ತು ಉಚಿತ ಚಿಕಿತ್ಸೆ ಶಿಬಿರ ಆಯೋಜಿಸಲಾಗಿದೆ. ಕ್ಷೇತ್ರದ ಮಾಜಿ ಶಾಸಕ ದಿವಂಗತ ಎನ್.ಟಿ.ಬೊಮ್ಮಣ್ಣ ನವರ ಸ್ಮರಣಾರ್ಥ, ಸಮಾಜ ಸೇವಕ ಹಾಗೂ ನೇತ್ರತಜ್ಞರಾದ ಎನ್.ಟಿ.ಶ್ರೀನಿವಾಸ ರವರ ಅಭಿಮಾನಿ ಬಳಗದಿಂದ. ಮಾ11 ತಾಲೂಕಿನ ಬಡೇಲಡಕು, ಮತ್ತು ಮಾ12ರಂದು ತಾಲೂಕಿನ ಗುಡೇಕೋಟೆ ಗ್ರಾಮದಲ್ಲಿ. ಉಚಿತ ಕಣ್ಣಿನ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸೆ ಶಿಬಿರ, ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆ ಶಿಬಿರ ಆಯೋಜಿಸಲಾಗಿದೆ. ಬಡೇಲಡಕು ಗುಡೇಕೋಟೆ ಗ್ರಾಮಗಳ ಗ್ರಾಮಸ್ಥರು ಸೇರಿದಂತೆ, ನೆರೆ ಹೊರೆ ಗ್ರಾಮಗಳ ಹಾಗೂ ತಾಲೂಕಿನ ವಿವಿದೆಡೆಯ ಗ್ರಾಮಗಳ ಗ್ರಾಮಸ್ಥರು. ನಿಗದಿತ ದಿನಾಂಕ ಹಾಗೂ ನಿಗದಿತ ಸ್ಥಳಗಳಲ್ಲಿನ ಶಿಬಿರಗಳಲ್ಲಿ, ಚಿಕಿತ್ಸೆ ಅಗತ್ಯ ಇರುವ ಶಿಬಿರದ ಸದುಪಯೋಗ ಪಡೆದುಕೊಳ್ಳುವಂತೆ. ಸಾರ್ವಜನಿಕರಲ್ಲಿ ಹಾಗೂ ನಾಗರೀಕರಲ್ಲಿ , ಡಾ,ಎನ್.ಟಿ.ಶ್ರೀನಿವಾಸ ಅಭಿಮಾನಿ ಬಳಗದಿಂದ ಕೋರಲಾಗಿದೆ*
*ವರದಿ ರಾಘವೇಂದ್ರ ಸಾಲುಮನೆ ಕೂಡ್ಲಿಗಿ*