ಆದಿವಾಸಿ ಬುಡಕಟ್ಟು ಜನಾಂಗದವರಿಗೆ ಮನೆಯ ನಿವೇಶನಕ್ಕೆ ಒತ್ತಾಯಿಸಿ ಮನವಿ…..
ತರೀಕೆರೆ, ಮಾ,10
ಕಾಫಿ ತೋಟದ ಲೈನ್ ಮನೆಗಳಲ್ಲಿ ಸುಮಾರು 80 ವರ್ಷಗಳಿಂದಲೂ ಜೀತದಾಳುಗಳಾಗಿ ದುಡಿಯುತ್ತಿರುವ ಆದಿವಾಸಿ ಬುಡಕಟ್ಟು ಜನಾಂಗದವರಿಗೆ ಮನೆಯ ನಿವೇಶನ ಮೂಲಭೂತ ಸೌಕರ್ಯಗಳು ಕೊಡಬೇಕೆಂದು, ಮಹಾತ್ಮ ಪ್ರೊಫೆಸರ್ ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕರಾದ ತರೀಕೆರೆ ವೆಂಕಟೇಶ್ ರವರು ತರೀಕೆರೆ ತಹಶಿಲ್ದಾರ ಸಿ ಎಸ್ ಪೂರ್ಣಿಮಾ ರವರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಕೊಟ್ಟು ಮಾತನಾಡಿದರು
. ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ಪೊನ್ನಮ್ಪೇಟೆ ಕಾಫಿ ತೋಟದಲ್ಲಿ ಸುಮಾರು 4,700 ಕ್ಕಿಂತಲೂ ಹೆಚ್ಚಿನ ಆದಿವಾಸಿ ನಿವಾಸಿಗಳು ವಾಸವಾಗಿದ್ದು ಇವರಿಗೆ ನೂರಾರು ವರ್ಷಗಳಿಂದಲೂ ಶಿಕ್ಷಣವಿಲ್ಲ ಕನಿಷ್ಠ ವೇತನ ಸಿಗುತ್ತಿಲ್ಲ ನಮ್ಮ ದೇಶಕ್ಕೆ ಸ್ವತಂತ್ರ ಸಿಕ್ಕರು ಇವರಿಗೆ ಮಾತ್ರ ಸ್ವಾತಂತ್ರ್ಯ ಸಿಕ್ಕಿಲ್ಲ ಎಂದು ಹೇಳಿದರು. ಇವರಿಗೆ ಸ್ವಂತ ಮನೆ ನಿವೇಶನಗಳು ಇಲ್ಲದೆ ಮೂಲಭೂತ ಯಾವುದೇ ಸೌಕರ್ಯಗಳು ಕಲ್ಪಿಸದೆ ಇರುವುದರಿಂದ, ಮನೆ ನಿವೇಶನಗಳ ಜೊತೆಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ ಕೊಡಬೇಕು ಎಂದು ಒತ್ತಾಯಿಸಿ, ಸುಮಾರು 250 ದಿನಗಳಿಂದ ಅನಿರ್ದಿಷ್ಟವಧಿ ಧರಣಿ ಸತ್ಯಾಗ್ರಹ ಮಾಡುತ್ತಿದ್ದಾರೆ, ಆದರೆ ಕೊಡಗು ಜಿಲ್ಲಾ ಆಡಳಿತ ತಾಲೂಕ ಆಡಳಿತ ಹಾಗೂ ಜಿಲ್ಲಾ ಪಂಚಾಯಿತಿ ಮತ್ತು ಜಿಲ್ಲಾಧಿಕಾರಿಗಳು ಹಾಗೂ ಸರ್ಕಾರವು ಸ್ಪಂದಿಸುತ್ತಿಲ್ಲ ಎಂದು ದೂರಿದರು. ತರೀಕೆರೆ ತಾಲೂಕು ಸ್ಲಂ ಜನರ ಸಂಘಟನೆ ಯಾ ಜಿಲ್ಲಾ ಸಂಚಾಲಕ ಉಮೇಶ್ ನಾಯ್ಕ, ನವ ಪ್ರಜಾ ರಕ್ಷಣಾ ವೇದಿಕೆಯ ರಾಜ್ಯ ಸಂಘಟನಾ ಸಂಚಾಲಕರಾದ ಓಂಕಾರಪ್ಪ, ವಕೀಲರು ಹಾಗೂ ತಾಲೂಕು ಬಂಜಾರ ಸಂಘದ ಮುಖಂಡರಾದ ಶಿವಶಂಕರ್ ನಾಯಕ್, ಕರ್ನಾಟಕ ದಲಿತ ಸಂಘರ್ಷ ಸಮಿತಿಯ ತಾಲೂಕು ಸಂಚಾಲಕರಾದ ಎಚ್ ಏನ್ ಬಸವರಾಜ್, ತಾಲೂಕು ಸಂಘಟನಾ ಸಂಚಾಲಕರಾದ ಬೆಲೆನಹಳ್ಳಿ ಸಿದ್ದಪ್ಪ, ಕುಂಟಿನಮಡು ನಾಗರಾಜ್, ಎಂ ಸಿ ಹಳ್ಳಿ ಪುಟ್ಟಸ್ವಾಮಿ, ಮುಂತಾದವರು ಮನವಿ ನೀಡಿದರು. ಮನವಿ ಪತ್ರ ಸ್ವೀಕರಿಸಿದ ತಹಶೀಲ್ದಾರ್ ಸಿ ಎಸ್ ಪೂರ್ಣಿಮಾ ಅವರು ಮಾತನಾಡಿ ಸೂಕ್ತ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಮನವಿ ಪತ್ರ ಕಳಿಸುವದಾಗಿ ತಿಳಿಸಿದರು.
- ಜಿಲ್ಲಾ ವರದಿಗಾರರು : ತರೀಕೆರೆ ಎನ್ ವೆಂಕಟೇಶ್