ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಸಹಯೋಗದಲ್ಲಿ – ವಲಯ ಮಟ್ಟದ ಕ್ರೀಡಾಕೂಟ ಆಯೋಜನೆ.
ಹುಲ್ಲೂರು ಆ.29





ಮುದ್ದೇಬಿಹಾಳ ತಾಲ್ಲೂಕಿನ ಬಸರಕೋಡ ಗ್ರಾಮದ ಶ್ರೀ ಪವಾಡ ಬಸವೇಶ್ವರ ಸಂಸ್ಥೆಯ ಮಾತೋಶ್ರೀ ಶಿವಲಿಂಗಮ್ಮ ಬ ನಾಡಗೌಡರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಸಹಯೋಗದಲ್ಲಿ ಹುಲ್ಲೂರು ಹೋಬಳಿ ಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟ ಶನಿವಾರ ಜರುಗಲಿದ್ದು, ಬಸರಕೋಡ, ಯರಝೆರಿ, ಬಳಬಟ್ಟಿ, ಹುಲ್ಲೂರು ವಲಯದ ವಿಜೇತ ವೈಯಕ್ತಿಕ ಪ್ರಥಮ, ದ್ವಿತೀಯ ಹಾಗೂ ಗುಂಪು ಪ್ರಥಮ ಸ್ಥಾನ ಪಡೆದ ಶಾಲಾ ಮಕ್ಕಳು ಭಾಗಿಯಾಗಲಿವೆ. ಹಾಗೂ ಆಟಕ್ಕೆ ಮೈದಾನ ಸಂಪೂರ್ಣ ತಯಾರಿ ಹಾಗೂ ಎಲ್ಲ ಸಿದ್ಧತೆಗಳನ್ನು ಮಾಡಿ ಕೋಳ್ಳಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷರು ಶ್ರೀ ಕೆ.ವಾಯ್ ಬಿರಾದಾರ ಹಾಗೂ ಮುಖ್ಯ ಗುರುಗಳು ಶ್ರೀ ಎಸ್.ಸಿ ಬಳವಾಟ ಈ ಮೂಲಕ ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್ ಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ.