ಕವಿಗಳ ಕಾವ್ಯನಮನ ವಿಶ್ವ ದಾಖಲೆ ಕಾರ್ಯಕ್ರಮ
ಇಂಡಿ: ವಿಜಯಪುರದ ಜ್ಞಾನಯೋಗಾಶ್ರಮದಲ್ಲಿ ರವಿವಾರದಂದು ಕನ್ನಡ ಬುಕ್ ಆಫ್ ರೆಕಾರ್ಡ್ಸ್ ಧಾರವಾಡ ಹಾಗೂ ಯೂನಿವರ್ಸಲ್ ಅಚೀವರ್ಸ್ ಬುಕ್ ಆಫ್ ರೆಕಾರ್ಡ್ಸ್ ಚೆನ್ನೈ ವತಿಯಿಂದ ಶತಮಾನದ ಸಂತ ಜ್ಞಾನಯೋಗಿ ಪೂಜ್ಯಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳಿಗೆ “ಕವಿಗಳ ಕಾವ್ಯ ನಮನ”ಎಂಬ ವಿಶ್ವದಾಖಲೆ ಕಾರ್ಯಕ್ರಮದಲ್ಲಿ 20 ನಿಮಿಷ 23 ಸೆಕೆಂಡುಗಳಲ್ಲಿ ಒಟ್ಟಿಗೆ 236 ಕವಿಗಳು ಕವನ ರಚಿಸಿ,ವಿಶ್ವದಾಖಲೆ ನಿರ್ಮಿಸಲಾಯಿತು.


ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ತಾಲೂಕಿನ ಹಿರೇರೂಗಿ ಗ್ರಾಮದ ಯುಬಿಎಸ್ ಶಾಲಾ ಶಿಕ್ಷಕ ಸಂತೋಷ ಬಂಡೆ ಅವರಿಗೆ ವಿಶ್ವದಾಖಲೆಯ ಪ್ರಮಾಣ ಪತ್ರಗಳನ್ನು ಆಶ್ರಮದ ಪೂಜ್ಯಶ್ರೀ ಡಾ.ಶ್ರದ್ಧಾನಂದ ಸ್ವಾಮಿಗಳು ವಿತರಿಸಿದರು. ಕಾರ್ಯಕ್ರಮದಲ್ಲಿ ಆಶ್ರಮದ ಅಧ್ಯಕ್ಷ ಪೂಜ್ಯಶ್ರೀ ಬಸವಲಿಂಗ ಮಹಾಸ್ವಾಮಿಗಳು, ಮಂಜುನಾಥ ಬಾರಕೇರ್, ಸದಾನಂದ ಏಳಗಂಟಿ, ವಿ ಸಿ ನಾಗಠಾಣ, ಡಾ ವಿ ಡಿ ಐಹೊಳ್ಳಿ, ಬಿ ವಿ ಪಟ್ಟಣಶೆಟ್ಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು:ಬಿ ಎಸ್ ಹೊಸೂರ್.ವಿಜಯಪುರ