ಬಿಜೆಪಿಯವರು ಕಪಟ ನಾಟಕ ; ಲೋಕೇಶ್ ತಾಳಿಕಟ್ಟೆ ಆರೋಪ……
ತರೀಕೆರೆ (ಮಾರ್ಚ್ . 4) :
ಭಾರತೀಯ ಜನತಾ ಪಕ್ಷದವರು ಇಡೀ ರಾಜ್ಯದಲ್ಲಿ ಅಧಿಕಾರ ನಡೆಸಿದ್ದಾಗಿನಿಂದ ಇಲ್ಲಿಯವರೆಗೂ ರೈತರಿಗೆ ಯಾವುದೇ ಜನಪರವಾದ ಯೋಜನೆಗಳನ್ನು ರೈತ ಸಮುದಾಯದವರಿಗೆ ನೀಡಿಲ್ಲ ಎಂದು ಈ ಬಾರಿಯ ಕಾಂಗ್ರೆಸ್ ಪಕ್ಷದ ಆಕಾಂಕ್ಷಿ ಅಭ್ಯರ್ಥಿ ಲೋಕೇಶ್ ಆರೋಪಿಸಿದರು.
ಅವರು ತರೀಕೆರೆಯ ಪ್ರವಾಸಿ ಮಂದಿರದಲ್ಲಿ ಪತ್ರಿಕಾ ಗೋಷ್ಠಿ ಸಭೆ ನಡೆಸಿ ಮಾತನಾಡಿದರು. ಈಗ 2023ರ ಚುನಾವಣೆ ಹತ್ತಿರ ಬರುತ್ತಿರುವುದನ್ನು ನೋಡಿಕೊಂಡು ಬಿಜೆಪಿಯವರು ರೈತರ ಪರವಾದ ಮೊಸಳೆ ಕಣ್ಣೀರ ನಾಟಕಕ್ಕೆ ಮುಂದಾಗಿದ್ದಾರೆ ಎಂದು ಹೇಳಿದರು. ರಾಜ್ಯದಲ್ಲಿ ಅಧಿಕಾರ ನಡೆಸಿದ ಬಿಜೆಪಿ ರೈತರಿಗೆ ಯಾವುದೇ ಸಾಲ ಮನ್ನಾ ಮಾಡಿಲ್ಲ ಆದರೆ ರೈತೋತ್ಸವ ಕಾರ್ಯಕ್ರಮಕ್ಕೆ ಮುಂದಾಗಿರುವುದು ಇವರ ಡೋಂಗಿ ನಾಟಕಕ್ಕೆ ಸಾಕ್ಷಿಯಾಗಿದೆ ಎಂದು ಕ್ಷೇತ್ರ ಶಾಸಕ ಡಿ ಎಸ್ ಸುರೇಶರವರು ತರೀಕೆರೆ ಕ್ಷೇತ್ರದಲ್ಲಿ ಸರಿ ಸುಮಾರು 82 ಕೆರೆಗಳಿಗೆ ಏತ ನೀರಾವರಿ ಯೋಜನೆಯ ಮೂಲಕ ಅನುದಾನ ತಂದು ರೈತರ ಬದುಕು ಅಸನು ಮಾಡಲಾಗಿದೆ ಎಂದು ಸುಳ್ಳು ನುಡಿದಿದ್ದಾರೆ ಆದರೆ ಈ ಹಿಂದೆ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದು ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ಹೊಸದುರ್ಗಕ್ಕೆ ಕುಡಿಯುವ ನೀರಿನ ಯೋಜನೆ ತಂದು ತರೀಕೆರೆ ಅಜ್ಜಂಪುರ ಮೂಲಕ ಹೆಚ್ಚು ಅನುದಾನ ತಂದು ಏತ ನೀರಾವರಿಗೆ ರೈತ ಕಲ್ಯಾಣ ಕಾರ್ಯಕ್ರಮಕ್ಕೆ ಮುಂದಾಗಿರುತ್ತಾರೆ.ಆದರೆ ಇದರ ಮಧ್ಯೆ ಶಾಸಕ ಡಿಎಸ್ ಸುರೇಶ್ ರವರು ಕೆಲವು ಮುಂದುವರಿದ ಭಾಗಗಳಿಗೆ ಏತ ನೀರಾವರಿಯನ್ನು ವಿಸ್ತರಣೆ ಮಾಡಿರುವುದಿಲ್ಲ ಇದು ಇವರ ಕಾಲದಲ್ಲಿ ಆದ ರೈತರಿಗೆ ದೊಡ್ಡ ಮೋಸ ಎಂದು ಹೇಳಿದರು.
ಶಾಸಕ ಸುರೇಶ್ ರವರು ರೈತರ ಇಂತಹ ಮೂಲ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಹೆಚ್ಚು ಒತ್ತು ಕೊಡಬೇಕಾಗಿತ್ತು, ಆದರೆ ಅನಗತ್ಯ ಕಾಲ ಹರಣ ಮಾಡಿ ಇದೀಗ ಚುನಾವಣೆ ಹತ್ತಿರ ಬರುತ್ತಿರುವುದರಿಂದ ರೈತೋತ್ಸವ ಎಂಬ ಕಾರ್ಯಕ್ರಮ ಮಾಡಿ ಜನರಿಗೆ ದಿಕ್ಕು ತಪ್ಪಿಸುತ್ತಿದ್ದಾರೆ. ತರೀಕೆರೆ ತಾಲೂಕಿನಲ್ಲಿ ಮತ್ತು ಪಟ್ಟಣದಲ್ಲಿ ಕುಡಿಯುವ ನೀರಿನ ಅಭಾವ ನಿರಂತರ ಸಮಸ್ಯೆಯಾಗಿದೆ ಇದೆಲ್ಲವನ್ನು ಮರೆತು ಶಾಸಕರು ಸರ್ಕಾರದ ಹಣ ದುರುಪಯೋಗ ಮಾಡುವಲ್ಲಿ ರೈತೋತ್ಸವ ಕಾರ್ಯಕ್ರಮ ಮಾಡುತ್ತಿದ್ದಾರೆ ಇದು ಅವರಿಗೆ ಶೋಭೆ ತರುವುದಿಲ್ಲ.
ದೇಶದಲ್ಲಿ ಮತ್ತು ರಾಜ್ಯದಲ್ಲಿ ಸರಿಸುಮಾರು 50 ಪರ್ಸೆಂಟ್ ಜನ ರೈತರಿದ್ದು ಅವರನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವು ಯೋಜನೆಗಳನ್ನು ಅನುಷ್ಠಾನಕ್ಕೆ ತಂದು ರೈತರನ್ನು ಅಭಿವೃದ್ಧಿ ಪಡಿಸುವಲ್ಲಿ ಮಲತಾಯಿ ಧೋರಣೆ ನಡೆಸಿವೆ ಇಂತಹ ಪರಿಸ್ಥಿತಿ ದೇಶ ವ್ಯಾಪಿ ನಡೆದು ನೂರಾರು ಜನ ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದು ಮಾತ್ರವಲ್ಲದೇ ರೈತ ಬೆಳೆಯುವ ಪ್ರತಿಯೊಂದು ಬೆಳೆಗಳಿಗೆ ಬೆಂಬಲ ಬೆಲೆ ನೀಡಿಲ್ಲ ಹಾಗೆಯೇ ಅಡಿಕೆಯನ್ನು ಬೇರೆ ಬೇರೆ ಕಡೆಯಿಂದ ಆಮದು ಮಾಡಿಕೊಂಡು ದೇಶದ ಕೆಲವು ಕಂಪನಿಗಳಿಗೆ ರೈತರ ಹೆಸರಿನಲ್ಲಿ ಅಡಿಕೆ ಮಾರಾಟ ಮಾಡಿ ರೈತರಿಗೆ ದ್ರೋಹ ಮಾಡಲಾಗುತ್ತಿದೆ ಇಂತಹ ಪರಿಸ್ಥಿತಿಯಲ್ಲಿ ರೈತರು ಕಣ್ಣೀರಲ್ಲಿ ಕೈತೊಳೆಯುತ್ತಿದ್ದು ಶಾಸಕರು ಇದನ್ನು ಗಮನಿಸಿದಂತಿಲ್ಲ, ಇಂತಹ ಅವಿವೇಕಿ ಶಾಸಕನ ಧೋರಣೆ ಖಂಡನೀಯವಾಗಿದ್ದು ಮುಂಬರುವ 2023ರ ಚುನಾವಣೆಯಲ್ಲಿ ಕ್ಷೇತ್ರದ ಜನತೆ ಸುರೇಶಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಲೋಕೇಶ್ ತಾಳಿಕಟ್ಟೆ ಆರೋಪಿಸಿದರು.
ಈ ಸಭೆಯಲ್ಲಿ ಸಮಾಜದ ಮುಖಂಡರಾದ ಹಾಲು ವಜ್ರಪ್ಪ, ಹಾಲೇಶ್, ಚಂದ್ರಶೇಖರ್, ಸಿದ್ದೇಗೌಡ,, ಚಂದ್ರಯ್ಯ,ರಂಗಪ್ಪ ಮತ್ತು ಇತರರು ಹಾಜರಿದ್ದರು.
ವರದಿಗಾರರು : ತರೀಕೆರೆ N. ವೆಂಕಟೇಶ್…