ಕಾಂಗ್ರೆಸ್ ಪಕ್ಷದ ಟಿಕೆಟ್ ಸಿಕ್ಕಿರುವುದು ಸಂತೋಷ ತಂದಿದೆ-ಜಿಎಚ್.ಶ್ರೀನಿವಾಸ್
ತರೀಕೆರೆ ಏ.15.
2023 ವಿಧಾನಸಭಾ ಚುನಾವಣೆಯಲ್ಲಿ ತರೀಕೆರೆ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಾನು ಅರ್ಜಿ ಹಾಕಿದ್ದು ನನಗೆ ಟಿಕೆಟ್ ಸಿಕ್ಕಿರುವುದಕ್ಕೆ ಅtತೀವ ಸಂತೋಷವಾಗಿದೆ ಎಂದು ಮಾಜಿ ಶಾಸಕ ಜಿ ಎಚ್ ಶ್ರೀನಿವಾಸ್, ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ನಾನು ಈ ಹಿಂದೆ ತರೀಕೆರೆ ಕ್ಷೇತ್ರದ ಶಾಸಕರಾಗಿ ಕ್ಷೇತ್ರದ್ಯಾಂತ ಸರ್ಕಾರದ ಅನುದಾನವನ್ನು ತಂದು ಪ್ರತಿ ಹಳ್ಳಿ ಹಳ್ಳಿ, ಅಭಿವೃದ್ಧಿ ಪಡಿಸಿರುತ್ತೇನೆ ಹಾಗೆಯೇ ತರೀಕೆರೆ ಪಟ್ಟಣದಲ್ಲಿ ಪುರಸಭಾ ಚುನಾವಣೆಯಲ್ಲಿ ಸರಿಸುಮಾರು 15 ಜನ ಪುರಸಭಾ ಸದಸ್ಯರು ಕಾಂಗ್ರೆಸ್ ಪಕ್ಷದ ನಿಷ್ಠೆ ಪ್ರಮಾಣಿಕತೆ, ಮತ್ತು ಅಭಿವೃದ್ಧಿಯ ಪರ್ವವನ್ನು ಹಿಂಬಾಲಿಸಿ ಪುರಸಭೆ ಆಡಳಿತವು ಕಾಂಗ್ರೆಸ್ ಹಿಡಿತದಲ್ಲಿ ಇರುವಂತಾಯಿತು , ಇದಕ್ಕೆ ಕಾಂಗ್ರೆಸ್ ಪಕ್ಷದ ಎಲ್ಲಾ ಪ್ರಮುಖರು ಮತ್ತು ಮತದಾರರು ಕಾರಣೀಭೂತರಾಗಿರುತ್ತಾರೆ.

ಈ ಬೆಳವಣಿಗೆಯನ್ನು ಕಂಡು ಕಾಂಗ್ರೆಸ್ ವರಿಷ್ಠರಾದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರಾದ ಡಿಕೆ ಶಿವಕುಮಾರ್, ವೇಣುಗೋಪಾಲ್, ಸುರ್ಜಿ ವಾಲಾ, ಇವರೆಲ್ಲರ ಸಹಕಾರದಿಂದ ನನಗೆ ಈ ಬಾರಿ ತರೀಕೆರೆ ಕ್ಷೇತ್ರದಲ್ಲಿ ಸ್ಪರ್ಧಿಸಲು ಅವಕಾಶವಾಗಿದೆ. ರಾಷ್ಟ್ರೀಯ ನಾಯಕರದ ಶ್ರೀ ಸೋನಿಯಾ ಗಾಂಧಿ,ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ,ಮತ್ತು ಇತರೆ ಮುಖಂಡರಿಗೆ ಈ ಸಂದರ್ಭದಲ್ಲಿ ಧನ್ಯವಾದ ಹೇಳಲು ಬಯಸುತ್ತೇನೆ. ನಾನು ಈ ಬಾರಿ ಟಿಕೆಟ್ ಪಡೆದು ಕಣಕ್ಕೆ ಇಳಿಯಲು ತರೀಕೆರೆ ಮತ್ತು ಅಜ್ಜಂಪುರ ತಾಲೂಕಿನ ಮತದಾರ ಬಂಧುಗಳು ಬಹಳಷ್ಟು ಶ್ರಮಪಟ್ಟು ನನಗೆ ಟಿಕೆಟ್ ಸಿಗಬೇಕೆಂದು ತಮ್ಮ ಅಭಿಮಾನದ ಮೂಲಕ ಮುಖಂಡರುಗಳಿಗೆ ಮನವಿ ಮಾಡಿಕೊಂಡಿದ್ದರು. ನಾನು ಅವರೆಲ್ಲರನ್ನು ಕ್ಷೇತ್ರದಿಂದ ಭೇಟಿ ಮಾಡಿ ಧನ್ಯವಾದಗಳು ಹೇಳುವುದರೊಂದಿಗೆ ಎಲ್ಲರಿಗೂ ನನ್ನೊಂದಿಗೆ ಇದ್ದು ನನ್ನ ಗೆಲುವಿಗೆ ಮುಂದಡಿ ಇರಬೇಕೆಂದು ಬಯಸುತ್ತೇನೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದ ಪ್ರಕಾಶ್ ವರ್ಮ, ಭಾಗ್ಯಲಕ್ಷ್ಮಿ, ಲಕ್ಷ್ಮೀಬಾಯಿ, ಕೆ ಹೊಸೂರಿನ ಎಚ್ ಎಸ್ ಮೆಹಬೂಬ್, ಮಿರ್ಜಾ ಇಸ್ಮಾಯಿಲ್, ಸಮಿಉಲ್ಲಾ, ಜಯ ಕರ್ನಾಟಕ ಸಂಘಟನೆಯ ಜಗದೀಶ್, ಮಾಜಿ ಪುರಸಭಾ ಸದಸ್ಯ ಕೃಷ್ಣ, ಜಿಯಾ ಉಲ್ಲಾ, ಪರ್ವೀನ್ ತಾಜ್, ಗೀತಾ ಗಿರಿರಾಜ್, ಗೌರೀಶ್, ಅಣ್ಣಯ್ಯ, ಪರಮೇಶ್, ಹಾಗೂ ನೂರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು:ಎನ್ ವೆಂಕಟೇಶ್.ತರೀಕೆರೆ