ಕಿತ್ನೂರ್ ಗ್ರಾಮದಲ್ಲಿ ಡಾ. ಬಿ. ಆರ್.ಅಂಬೇಡ್ಕರ್ ಅವರ 132ನೇ ಹಾಗೂ ಡಾ.ಬಾಬು ಜಗಜೀವನ್ ರಾಮ್ ರವರ 116ನೇ ಜಯಂತಿಯನ್ನು ಕೇಕ್ ಕಟ್ ಮಾಡುವುದರ ಮೂಲಕ ಆಚರಿಸಿದರು
ಕಿತ್ನೂರ್ ಏ.14-

ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕಿನ ಕಿತ್ನೂರ್ ಗ್ರಾಮದಲ್ಲಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ನಗರದ ಮುಖಂಡರುಗಳು ಅಂಬೇಡ್ಕರ್ ಅವರ 132ನೇ ಜಯಂತಿ ಡಾಕ್ಟರ್ ಬಾಬು ಜಗಜೀವನ್ ರಾಮ್ ರವರ 116 ನೇ ಜಯಂತಿಯನ್ನು ಕೇಕ್ ಕಟ್ ಮಾಡುವುದರ ಮೂಲಕ ಸರಳವಾಗಿ ಜಯಂತೋತ್ಸವವನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಿದರು.

ಈ ಸಂದರ್ಭದಲ್ಲಿ ದಲಿತ ಮುಖಂಡ ಹಾಗೂ ಆರ್ಟಿಸ್ಟ್ ಸಂಘದ ಅಧ್ಯಕ್ಷರಾದ ಹೇಮಂತ್ ಇವರು ಅಂಬೇಡ್ಕರ್ ಇಂದಿನ ದಿನಮಾನಗಳಲ್ಲಿ ಭಾರತ ದೇಶದಲ್ಲಿ ದೀನ ದಲಿತರ ಮೇಲೆ ಜಾತೀಯ ಹೆಸರಿನಲ್ಲಿ ದಲಿತರ ಮೇಲೆ ಆಗುವಂತಹ ಅನ್ಯಾಯಗಳು ಕಡುಕಟ್ಟಾಗಿ ಡಾ. ಬಿಆರ್ ಅಂಬೇಡ್ಕರ್ ಅವರೇ ಅನುಭವಿಸಿದಂತಹ ದಿನಮಾನಗಳನ್ನು ಡಾ. ಬಿಆರ್ ಅಂಬೇಡ್ಕರ್ ಅವರು ತಮ್ಮ ಜೀವನ ದುದ್ದಕ್ಕೂ ನಮ್ಮ ಭಾರತ ದೇಶದಲ್ಲಿ ಪ್ರತಿಯೊಬ್ಬ ಮನುಷ್ಯನಿಗೂ ಸರ್ವಸಮಾನರು ಎಂಬ ಬಹುದೊಡ್ಡ ಅರ್ಥವನ್ನು ಕಲ್ಪಿಸಿಕೊಂಡು ಭಾರತ ದೇಶಕ್ಕೆ ಬೇಕಾಗಿರುವಂತಹ ಸಂವಿಧಾನವನ್ನು ಬರೆದು ಸಂವಿಧಾನದ ಮೂಲಕ ಭಾರತ ದೇಶದ ಕಟ್ಟ ಕಡೆಯ ಪ್ರಜೆಗಳಿಗೂ ಸಮಾನತೆಯನ್ನು ಹಾಗೂ ರಕ್ಷಣೆಯನ್ನು ಪಡೆದುಕೊಳ್ಳುವಂತಹ ಕಾನೂನುಗಳನ್ನು ಬರೆದಿರುವಂತ ಸಂವಿಧಾನ ಶಿಲ್ಪಿ ಭಾರತ ರತ್ನ ಡಾಕ್ಟರ್ ಬಿಆರ್ ಅಂಬೇಡ್ಕರ್ ಏಪ್ರಿಲ್ 14ನೇ ದಿನವನ್ನು ವಿಶ್ವಜ್ಞಾನಿ ದಿನವೆಂದು ಇಂದು ವಿಶ್ವಸಂಸ್ಥೆಯೇ ಜನ್ಮದಿನಾಚರಣೆಯನ್ನು ಆಚರಣೆ ಮಾಡುತ್ತಿದೆ ,ಎಂದು ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ತಿಳಿಸಿದರು.

ಹಾಗೂ ಕಂದಗಲ್ ತಿಮ್ಮಲಾಪುರದಲ್ಲಿ ದಲಿತ ಮುಖಂಡರು ಡಾ.ಬಿ.ಆರ್.ಅಂಬೇಡ್ಕರ ರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಾಕ್ಷ ರಾದ ಚೇನ್ನಬಸವನ ಗೌಡ್ರು ದಲಿತ ಮುಖಂಡರ ಜೊತೆ ಹಾಗೂ ಈ ಸಂದರ್ಭದಲ್ಲಿ ದಲಿತ ಸಂಘರ್ಷ ಗ್ರಾಮ ಘಟಕದ ಅಧ್ಯಕ್ಷರಾದ ಮೈಲಾರಪ್ಪ,ಸುಭಾಷ ಚಂದ್ರ,ಮಲ್ಲೆಶ್,ರವಿ,ಮರಿಸ್ವಾಮಿ,ವಿಶ್ವನಾಥ ಗೌಡ ಗ್ರಾಮ ಪಂಚಾಯಿತಿ ಮಾಜಿ ಅಧ್ಯೇಕ್ಷ,ಬಾರಿಕರ ರಮೇಶ್,ಗ್ರಾ.ಪಂ.ಸದಸ್ಯ,ಪೀರ್ಯಾನಾಯಕ ಗ್ರಾ,ಪಂ,ಸದಸ್ಯ ಹಾಗೂ ಊರಿನ ಮುಖಂಡರುಗಳು ಭಾಗವಹಿಸಿದ್ದರು
ಜಿಲ್ಲಾ ವರದಿಗಾರರು:ರಾಘವೇಂದ್ರ ಸಾಲುಮನೆ. ಕೂಡ್ಲಿಗಿ