ಭಾರೀ ಜನಸ್ತೋಮ ಹಾಗೂ ಭವ್ಯ ಮೆರವಣಿಗೆ ಮೂಲಕ ಯಶವಂತರಾಯಾಗೌಡ ಪಾಟೀಲರಿಂದ ನಾಮಪತ್ರ ಸಲ್ಲಿಕೆ
ಇಂಡಿ ಏ.17.

ಬರುವ ಮೇ.೧೦ರಂದು ಜರುಗಲಿರುವ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಗೆ ಇಂಡಿ ವಿಧಾನಸಭಾ ಮತಕ್ಷೇತ್ರದ ಕಾಂಗ್ರೇಸ್ ಪಕ್ಷದ ಅಭ್ಯರ್ಥಿಯಾದ ಶಾಸಕ ಯಶವಂತರಾಯಗೌಡ ಪಾಟೀಲ ಅವರು ತಮ್ಮ ಭಾರಿ ಪ್ರಮಾಣದ ಬೆಂಬಲಿಗರೊಂದಿಗೆ ಆಗಮಿಸಿ ಸೋಮವಾರಂದು ಪಟ್ಟಣದ ಮಿನಿ ವಿಧಾನಸೌಧದಕ್ಕೆ ತೆರಳಿ ಕಂದಾಯ ಉಪವಿಭಾಗಾಧಿಕಾರಿ ಹಾಗೂ ಚುನಾವಣಾಧಿಕಾರಿಗಳಾದ ರಾಮಚಂದ್ರ ಗಡದೆಯವರಿಗೆ ನಾಮಪತ್ರ ಸಲ್ಲಿಸಿದರು.

ನಾಮಪತ್ರ ಸಲ್ಲಿಸುವ ಪೂರ್ವಲ್ಲಿ ಪಟ್ಟಣದ ಭಿರಪ್ಪ ದೇವರಿಗೆ ಪೂಜೆ ಸಲ್ಲಿಸಿ ಲಾಯನ್ಸ ಶಾಲಾ ಆವರಣದಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು. ಸಾವಿರಾರು ಸಂಖ್ಯೇಯಲ್ಲಿ ಆಗಮಿಸಿದ ಭಾರಿ ಪ್ರಮಾಣದ ಜನಸ್ತೋಮದೊಂದಿಗೆ ತೆರೆದ ವಾಹನದ ಮೂಲಕ ಡೊಳ್ಳು, ಹಲಗೆ, ಗೊಂಬೆಗಳ ಕುಣಿತದೊಂದಿಗೆ ಭವ್ಯವಾದ ಮೇರವಣಿಗೆ ಜರುಗಿತು. ಈ ಮೇರವಣಿಗೆಯು ವಿವಿಧ ವೃತ್ತಗಳ ಮೂಲಕ ಹಾದು ಮಿನಿವಿಧಾನಸೌದಕ್ಕೆ ಶಾಸಕರು ತೆರಳಿ ನಾಮ ಪತ್ರ ಸಲ್ಲಿಸಿದರು.

ನಾಮ ಪತ್ರ ಸಲ್ಲಿಕೆ ಇಲಿಯಾಸ ಬೊರಾಮಣಿ, ಭಿಮಾಶಂಕರ ಮುರಮನ, ಶೇಖರ ನಾಯಕ, ಸಂದರ್ಭದಲ್ಲಿ ಪ್ರಶಾಂತ ಅಲಗೊಂಡ ಇದ್ದರು.
ತೆರೆದ ವಾಹನದ ಮೇರವಣಿಗೆಯಲ್ಲಿ ಕಾಂಗ್ರೇಸ್ ಪಕ್ಷದ ಮುಖಂಡರಾದ ಜಿಲ್ಲಾ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಲೊಣಿ, ಭಾಬುಸಾವುಕಾರ ಮೇತ್ರಿ, ಎಸ್.ಎಂ.ಪಾಟೀಲ ಗಣಿಯಾರ, ಗುರನಗೌಡ ಪಾಟೀಲ, ಜಾವಿದ ಮೋಮಿನ, ಇಲಿಯಾಸ ಬೊರಾಮಣಿ, ಭಿಮಣ್ಣ ಕವಲಗಿ, ಮಲ್ಲನಗೌಡ ಪಾಟೀಲ, ಶೇಖರ ನಾಯಕ, ಸಣ್ಣಪ್ಪ ತಳವಾರ, ಲಿಂಬಾಜಿ ರಾಠೋಡ, ಗೀರಿಶ ಚಾನಕೊಟೆ, ಪ್ರಶಾಂತ ಅಲಗೊಂಡ, ಹಣಮಂತ ಖಡೆಖಡೆ, ರಾವುತಪ್ಪ ಹುನ್ನೂರ, ಪ್ರಶಾಂತ ಕಾಳೆ, ಚಂದ್ರಶೇಖರ ರೂಗಿ, ಸದಾಶಿವ ಪ್ಯಾಟಿ, ಪರಶು ಹತ್ತರಕಿ, ನಿರ್ಮಲಾ ತಳಕೇರಿ, ಕಲ್ಲನರ್ಗವಡ ಬೀರಾದಾರ, ರಮೇಶ ಕಲ್ಯಾಣಿ, ಸಂಜುಗೌಡ ಪಾಟೀಲ, ನೀಲಕಂಠ ರೂಗಿ ಸೇರಿದಂತೆ ನೂರಾರು ಜನ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಸರಳವಾಗಿ ಆಗಮಿಸಿ ನಾಮ ಪತ್ರ ಸಲ್ಲಿಸಿದರು.
ಜಿಲ್ಲಾ ವರದಿಗಾರರು:ಬೀ ಎಸ್ ಹೊಸೂರ್. ವಿಜಯಪೂರ್