ಕೂಡ್ಲಿಗಿ ತಾಲೂಕೀನಾದ್ಯಂತ ಹಳ್ಳಿ-ಹಳ್ಳಿಗಳಲ್ಲಿ ,ಅಪಾರ ಅಭಿಮಾನಿಗಳಿಂದ ಹಾಗೂ ಬಿಜೆಪಿ ಕಾರ್ಯಕ್ರರ್ತರಿಂದ ಹುಟ್ಟು ಹಬ್ಬವನ್ನು ಆಚರಿಸಿಕೊಂಡ ಬಿಜೆಪಿಯ ಅಭ್ಯರ್ಥಿ ಶ್ರೀ ಲೋಕೇಶ್ ವಿ ನಾಯಕ್…..
ಕೂಡ್ಲಿಗಿ ಏ.17.
ವಿಜಯನಗರ ಜಿಲ್ಲೆ, ಕೂಡ್ಲಿಗಿ ತಾಲೂಕಿನ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಯಾದಂತ ಲೋಕೇಶ್ ವಿ ನಾಯಕ್ ಇವರ ಜನ್ಮದಿನದ ಪ್ರಯುಕ್ತವಾಗಿ ಕೂಡ್ಲಿಗಿ ತಾಲೂಕಿನಾದ್ಯಾಂತ ಐವತ್ತಕ್ಕೂ ಹೆಚ್ಚು ಹಳ್ಳಿಗಳಲ್ಲಿ ಲೋಕೇಶ್ ವಿನಾಯಕ್ ಇವರ ಹುಟ್ಟು ಹಬ್ಬ ದಿನವನ್ನು ವಿಧ ವಿಧ ಬಗೆಯ ಕೇಕುಗಳನ್ನು ಲೋಕೇಶ್ ವಿ ನಾಯಕ್ ಇವರ ಅಭಿಮಾನಿಗಳು ಅಭಿಮಾನದಿಂದ ಕೆಲವರು ತಮ್ಮ ತಮ್ಮ ಗ್ರಾಮಗಳಲ್ಲಿ ಅವರ ಹೆಸರನ್ನು ಕೇಕ್ ನಲ್ಲಿ ಬರಸಿಕೊಂಡು ಕೇಕ್ ಕತ್ತರಿಸುವುದರ ಮೂಲಕ ಸಿಹಿ ಹಂಚಿ ಸಂಭ್ರಮಿಸಿದ್ದಾರೆ.

ಹಾಗೆ ಲೋಕೇಶ್ ವಿ ನಾಯಕ್ ಇವರು ಕೂಡ್ಲಿಗಿ ತಾಲೂಕಿಗೆ ಆಕಾಂಕ್ಷಿಯಾಗಿ ಆಗಮಿಸಿದಂತಹ ಸಂದರ್ಭದಲ್ಲಿ ಇವರು ಮೊದಲನೇ ಬಾರಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯೆಂದು ಗುರುತಿಸಿಕೊಳ್ಳುವುದರೊಂದಿಗೆ ಟಿಕೆಟ್ ನೀಡುವ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಟಿಕೆಟ್ ಕೈ ತಪ್ಪಿತು ಆದರೆ ಇವರು ಅಂಜದೆ ಅಳುಕದೆ , ಇವರು ಕೂಡ್ಲಿಗಿ ಕ್ಷೇತ್ರದ ಜನತೆಯ ವಿಶ್ವಾಸಕ್ಕೆ ಹಾಗೂ ಅಭಿಮಾನಕ್ಕೆ ಮಣಿದು ಪಕ್ಷೇತರ ಅಭ್ಯರ್ಥಿಯಾಗಿ ನಿಂತು, ಮೊದಲನೇ ಬಾರಿಗೆ ರಾಷ್ಟ್ರೀಯ ಪಕ್ಷಗಳ ಸಮನಾಂತರಕ್ಕೂ ಮೀರಿ ಮತಗಳನ್ನು ತಮ್ಮೆಡೆಗೆ ಬಹುದೊಡ್ಡ ಸಂಖ್ಯೆಯ ಮತವನ್ನು ತಮ್ಮದಾಗಿಸಿಕೊಂಡು ಸೋಲನ್ನು ಕಂಡುಕೋಳ್ಳುತ್ತಾರೆ ನಂತರ ಎರಡನೇ ಬಾರಿಗೆ ಪುನಃ ಕಾಂಗ್ರೆಸ್ ಅಭ್ಯರ್ಥಿಯ ಆಕಾಂಕ್ಷಿ ಎಂದು ಸುಮಾರು 8 ರಿಂದ ಒಂಬತ್ತು ವರ್ಷಗಳಿಂದ ಕೂಡ್ಲಿಗಿ ತಾಲೂಕಿನ ಪ್ರತಿ ಹಳ್ಳಿಗಳಿಗೂ ಪಕ್ಷ ಸಂಘಟನೆ ಮಾಡುವುದರೊಂದಿಗೆ ಎಲ್ಲಾ ಜನಗಳ ಮಧ್ಯೆ ಬೇರೆತು ಹಳ್ಳಿಗಳ ಜನರ ಮನೆಗಳಿಗೆ ಹಾಗೂ ಹಬ್ಬ ಹರಿದಿನಗಳಿಗೂ ಮತ್ತು ಜಾತ್ರೆ ಶುಭಾ ಸಮಾರಂಭಗಳಿಗೂ ಹಾಗೂ ದುಖಃದ ಕಾರ್ಯಕ್ರಮಗಳಿಗೂ ಸ್ಥಳಕ್ಕೆ ಧಾವಿಸಿ, ಅಲ್ಲಿನ ಜನರ ಕಷ್ಟಗಳನ್ನು ಕೇಳುವುದರ ಜೊತೆಗೆ ಇಷ್ಟಪಟ್ಟು ಜನರ ಜೊತೆ ಒಂಬತ್ತು ವರ್ಷಗಳಿಂದ ತಮ್ಮದೇ ಆದಂತಹ ಸಾಮಾಜಿಕ ಸೇವೆಯಿಂದ ದೊಡ್ಡ ಅಭಿಮಾನಿ ಬಳಗವನ್ನೇ ಸಂಪಾದಿಸಿಕೊಂಡಿದ್ದಾರೆ.

ಈ ಬಾರಿಯು ಸಹ ಕಾಂಗ್ರೆಸ್ ಪಕ್ಷದಿಂದ ಆಕಾಂಕ್ಷಿ ಎಂದು ನೀರಿಕ್ಷೆ ಇಟ್ಟುಕೊಂಡಿದ್ದರು ಆದರೆ ಮತ್ತೆ ಕೊನೆಯ ಕ್ಷಣದಲ್ಲಿ ಅಭ್ಯರ್ಥಿಯೆಂದು ಘೋಷಿಸಲು ವರಿಷ್ಠರು ಇವರ ಬಗ್ಗೆ ಸರಿಯಾದ ರೀತಿಯ ಮಾಹಿತಿ ತೆಗೆದುಕೋಳ್ಳದೆ ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಸರ್ವೆ ರೀಪೋರ್ಟ್ ಮಾಡದೆ ಮತ್ತೆ ಕೈ ಟಿಕೆಟ್ ಕೊಡದೆ ಬಿಟ್ಟಿರುವುದು ಅಭಿಮಾನಿಗಳಿಗೆ ತುಂಬಲಾರದಂತ ನಷ್ಟ ಕಾಂಗ್ರೆಸ್ ಪಕ್ಷ ಲೋಕೇಶ್ ವಿ ನಾಯಕ್ ಇವರಿಗೆ ಟಿಕೆಟ್ ಕೊಡದೆ ಕೈ ಬಿಟ್ಟಿದ್ದರಿಂದ ಭಾರತೀಯ ಜನತಾ ಪಾರ್ಟಿಯು ಇವರ ಸಂಪೂರ್ಣ ವಾದಂತಹ ತಾಲೂಕಿನಾದ್ಯಾಂತ ಸರ್ವೆ ರಿಪೋರ್ಟ್ ಮೂಲಕ ತಿಳಿದು ಈ ಬಾರೀ ಇವರಿಗೆ ಬಿಜೆಪಿ ಪಕ್ಷದ ಅಭ್ಯರ್ಥಿಯೆಂದು ಘೋಷಿಸಿದ್ದಕ್ಕೆ ಗೆಲುವು ಖಚಿತವಾಗುವುದು ಎಂಬ ದೊಡ್ಡ ನಂಬಿಕೆ ಬಿಜೆಪಿ ಪಕ್ಷದ ನಂಬಿಕೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ತುಂಬಾ ನೋವು ಉಂಟಾಗಿದೆ.ಕಾರಣ ಲೋಕೇಶ್ ವಿ ನಾಯಕ್ ಇವರ ಈ ಬಾರೀ ಕಾಂಗ್ರೇಸ್ ಪಕ್ಷದ ಟಿಕೆಟ್ಟನ್ನು ಕೊಟ್ಟಿದ್ದರೆ ಸುಲಭವಾಗಿ ಗೆಲುವು ಕಾಂಗ್ರೇಸ್ ಪಕ್ಷವು ಕಾಣುತ್ತಿತ್ತು ಎಂದು ಬೇಸರಗೊಂಡು ಅಭಿಮಾನಕ್ಕೆ ಕಾಂಗ್ರೇಸ್ ಪಕ್ಷವನ್ನೇ ಬದಲಾಯಿಸಿ ಇವರ ಅಭಿಮಾನಿಗಳಾಗಿ ಈ ಬಾರಿ ಬಿಜೆಪಿ ಪರ ನಿಂತು ಲೋಕೇಶ್ ವಿ ನಾಯಕ್ ಇವರನ್ನು ಗೆಲ್ಲಿಸುವಿದೆ ನಮ್ಮ ಗುರಿ! ಎಂದು ಅನೇಕ ಅಭಿಮಾನಿಗಳು ಇಂದು ಅವರ ಹುಟ್ಟುಹಬ್ಬವನ್ನು ತಮ್ಮ ತಮ್ಮ ಹಳ್ಳಿಯಲ್ಲಿ ತಾವೇ ತಮ್ಮ ಸ್ವಂತ ಹಣದಿಂದ 50 ರಿಂದ ನೂರು ಕಡೇಗೆ ಅಭಿಮಾನಿಗಳು ಕೇಕ್ ಕತ್ತರಿಸುವುದರ ಮೂಲಕ ಸಿಹಿ ಹಂಚುತ್ತ ಸಂಭ್ರಮಿಸಿದ್ದಾರೆ. ಈ ಸಂಭ್ರಮದ ಸಂತೋಷವನ್ನು ಅನುಭವಿಸಲು ಲೋಕೇಶ್ ವಿ ನಾಯಕ್ ಇವರು ಕೆಲವು ಅಭಿಮಾನಿಗಳು ಕೇಕುಗಳು ತಂದು ಅವರ ಮೂಲಕ ಕೇಕ್ ಕತ್ತರಿಸಿ ಅಭಿಮಾನಿಗಳು ಅವರ ಬಾಯಿ ಸಿಹಿ ಮಾಡಿ ಸಂಭ್ರಮಿಸಿದರು ಈ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ಲೋಕೇಶ್ ವಿ ನಾಯಕ್ ಇವರ ಅಭಿಮಾನಿಗಳು ಸಂಭ್ರಮಾಚರಣೆ ಮಾಡಿದರು
ಜಿಲ್ಲಾ ವರದಿಗಾರರು:ರಾಘವೇಂದ್ರ ಸಾಲುಮನೆ. ಕೂಡ್ಲಿಗಿ