ಬಿಜೆಪಿ ಸರ್ಕಾರ ರೈತರಿಗೆ ಸ್ಪಂದಿಸಿಲ್ಲ–ಡಾ.ಅಂಶುಮಥ್
ತರೀಕೆರೆ ಏ.17.
ರೈತರು, ಕಾರ್ಮಿಕರು,ಮಹಿಳೆಯರು, ವಿದ್ಯಾರ್ಥಿಗಳು,ಯುವಕರು, ಕಾಂಗ್ರೆಸ್ ಪಕ್ಷದ ಬೆನ್ನಿಗೆ ನಿಂತು ಕೆಲಸ ಮಾಡಲು ಸಿದ್ಧವಾಗಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷರಾದ ಡಾ. ಅಂಶುಮತ್ ರವರು ಇಂದು ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ತರೀಕೆರೆ ವಿಧಾನಸಭಾ ಕ್ಷೇತ್ರವು ರೈತಾಪಿವೃತ್ತಿಯನ್ನು ಅವಲಂಬಿಸಿದ ಕ್ಷೇತ್ರ ಇಲ್ಲಿ ಆಡಳಿತ ನಡೆಸಿದ ಬಿಜೆಪಿ ಸರ್ಕಾರದಿಂದ ಶಿಕ್ಷಣ ವ್ಯವಸ್ಥೆ ಸರಿಯಾಗಿಲ್ಲ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ರದ್ದು ಮಾಡಿದ್ದಾರೆ ಕ್ಷೇತ್ರದ ಆಯ್ದ ಭಾಗಗಳಲ್ಲಿ ಅಡಿಕೆ ತೆಂಗು ಈರುಳ್ಳಿ ಕಾಫಿ ಬೆಳೆಯುವ ರೈತರೇ ಇರುವುದರಿಂದ ಕೇಂದ್ರ ಸರ್ಕಾರ ಅಡಿಕೆ ಬೆಳೆಗಾರರಿಗೆ ಮೋಸ ವಂಚನೆ ಮಾಡಿ ಅಡಿಕೆಯಿಂದ ಕ್ಯಾನ್ಸರ್ ಬರುತ್ತದೆ ಎಂದು ಪ್ರಚಾರ ಮಾಡಿ,ಅಡಿಕೆ ಬೆಳೆಯುವ ರೈತರಿಗೆ ವಂಚನೆ ಮಾಡಿದೆ,ಗೊಬ್ಬರದ ಬೆಲೆ ಕಡಿಮೆಯಾದರೂ ಕರ್ನಾಟಕದಲ್ಲಿ ಬೆಲೆ ಕಡಿಮೆಯಾಗಿಲ್ಲ ರೈತರು ಸಂಕಷ್ಟದಲ್ಲಿದ್ದಾರೆ.
ಬಿಜೆಪಿ ಸರ್ಕಾರ ರೈತರಿಗೆ ಸ್ಪಂದಿಸಿಲ್ಲ ಬ್ರಷ್ಟಾಚಾರ ಜನವಿರೋಧಿ ನೀತಿ,ರೈತ ವಿರೋಧಿ ನೀತಿ,ಅನುಸರಿಸುತ್ತಿದೆ. ಹಿಂದೆ ಮಾಜಿ ಶಾಸಕರಾದ ಜಿಎಸ್ ಶ್ರೀನಿವಾಸ್ ರವರು ತಮ್ಮ ಆಡಳಿತ ಅವಧಿಯಲ್ಲಿ ಕ್ಷೇತ್ರದ ಪ್ರತಿಯೊಬ್ಬರ ಮನ, ಮನೆ ಮುಟ್ಟುವ ಕೆಲಸ ಮಾಡಿದ್ದಾರೆ. ತರೀಕೆರೆ ವಿಧಾನಸಭಾ ಕ್ಷೇತ್ರದ ಸಮಸ್ತ ಅಭಿವೃದ್ಧಿಗೆ ಪೂರಕವಾದ ಕೆಲಸ ಮಾಡಲು ಎಲ್ಲರೂ ಸಹಕಾರ ನೀಡಬೇಕು ಎಂದು ಹೇಳಿದರು. ಮಾಜಿ ಶಾಸಕರಾದ ಜಿಎಸ್ ಶ್ರೀನಿವಾಸ್ ಮಾತನಾಡಿ ಬಿಜೆಪಿ ಸರ್ಕಾರ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ ಶಾಸಕರು ಇವರ ಸರ್ಕಾರ ಭ್ರಷ್ಟಾಚಾರದಲ್ಲಿ ಮೊದಲನೆಯದವರಾಗಿದ್ದಾರೆ. ಮಾನವೀಯತೆ ಇಲ್ಲದವರು ಕರೋನಾ ಸಂದರ್ಭದಲ್ಲಿ ಮರಣ ಹೊಂದಿದ ಕಾರ್ಯಕರ್ತರನ್ನು ನೋಡಲು ಹೋಗಲೇ ಇಲ್ಲ ಶಾಸಕ, ಬಾವಿ ಕೆರೆಯಲ್ಲಿ ಮಹಿಳೆಯೊಬ್ಬರ ಜಮೀನು ನುಂಗಿ ಮಹಿಳೆಯಿಂದ ಶಾಪಕ್ಕೆ ತುತ್ತಾಗಿದ್ದಾರೆ.

ಮಹಿಳೆಯರ ಶಾಪ ಕಂಡಿತ ತಟ್ಟುತ್ತದೆ. ನಾನು ಎಲ್ಲಾ ಜಾತಿ ಧರ್ಮದವರನ್ನು ಒಗ್ಗೂಡಿಸಿಕೊಂಡು ವಿಶ್ವಾಸದಿಂದ ಮತ್ತು ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಗಳೆಲ್ಲರನು ವಿಶ್ವಾಸಕ್ಕೆ ತೆಗೆದುಕೊಂಡು ಒಟ್ಟಿಗೆ ಇದ್ದು ಕೆಲಸ ಮಾಡುತ್ತೇವೆ.ಹೊಸದಾಗಿ ಕಾಂಗ್ರೆಸ್ ಪಕ್ಷಕ್ಕೆ ಕೆಲವು ಮುಖಂಡರು ಸೇರ್ಪಡೆಯಾಗುತ್ತಿದ್ದಾರೆ. ದಿನಾಂಕ- 19 -4 -2023 ರಂದು ನಾನು ನಾಮಪತ್ರ ಸಲ್ಲಿಸುತ್ತಿದ್ದೇನೆ. ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿಕೊಂಡರು. ಪತ್ರಿಕಾಗೋಷ್ಠಿಯಲ್ಲಿ ತರೀಕೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಚ್ ಯು ಫಾರೂಕ್, ಅಜ್ಜಂಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಅನಂತಕುಮಾರ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ಸಂತೋಷ್, ಸಮೀವುಲ್ಲಾ, ರವಿಶಾನ್ ಬೊಗ್, ಪರಶುರಾಮ್, ಮಾಜಿ ಪುರಸಭಾ ಅಧ್ಯಕ್ಷರಾದ ಪ್ರಕಾಶ್ ವರ್ಮ, ಹಾಲಿ ಪುರಸಭಾ ಸದಸ್ಯರಾದ ಪರಮೇಶ್, ಮಾಜಿ ಪುರಸಭಾ ಸದಸ್ಯರಾದ ಕೃಷ್ಣ, ಜಿಯಾವುಲ್ಲ, ಆದಿಲ್ ಪಾಷಾ, ಕಸಬಾ ಹೋಬಳಿ ಅಧ್ಯಕ್ಷರಾದ ವೀರಮಣಿ, ಮುಂತಾದವರು ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು:ಎನ್ ವೆಂಕಟೇಶ್.ತರೀಕೆರೆ