ತಾಳಿಕೋಟಿ ತಾಲೂಕಿನಲ್ಲಿ ಅತಿಥಿ ಶಿಕ್ಷಕರ ಪದಾಧಿಕಾರಿಗಳ ಆಯ್ಕೆ
ತಾಳಿಕೋಟಿ ಏ.18
ವಿಜಯಪೂರ ಜಿಲ್ಲೆಯ ತಾಳಿಕೋಟಿ ತಾಲೂಕಿನಲ್ಲಿ ಶ್ರೀ ಖಾಸ್ಗೇತೇಶ್ವರ ದೇವಾಲಯದಲ್ಲಿ ಸೊಮವಾರ ಪ್ರಾಥಮಿಕ ಹಾಗೂ ಪ್ರೌಢಶಾಲೆ ಅತಿಥಿ ಶಿಕ್ಷಕರ ಪದಾಧಿಕಾರಿಗಳ ನೇಮಕ ಹಾಗೂ ಸದಸ್ಯತ್ವ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಈ ಸಭೆಯಲ್ಲಿ ಜಿಲ್ಲಾ ಅತಿಥಿ ಶಿಕ್ಷಕರ ಅಧ್ಯಕ್ಷರಾದ ದಾನೇಶ ಕಲಕೇರಿ ಮಾತನಾಡಿ ಅತಿಥಿ ಶಿಕ್ಷಕರೆಲ್ಲರೂ ಒಂದುಗೂಡುವ ಮೂಲಕ ನಾವು ಒಂದು ಶಕ್ತಿಯಾಗಿ ರಾಜ್ಯ ಸಂಘಕ್ಕೆ ಬಲ ಕೊಡೋಣ ಎಂದು ಹೇಳಿದರು.

ಅದೇ ಸಂದರ್ಭದಲ್ಲಿ ನೂತನ ಅಧ್ಯಕ್ಷರಾಗಿ ಸಂತೋಷ ರಾಠೋಡ್ ಹಾಗೂ ಗೌರವ ಅಧ್ಯಕ್ಷರಾಗಿ ಶ್ರೀಮತಿ ಶರಣಮ್ಮ ಹೀರೆಮಠ.ಉಪಾಧ್ಯಕ್ಷರಾಗಿ ಶರಣಗೌಡ ಚೌದರಿ.ಪ್ರಧಾನ ಕಾರ್ಯದರ್ಶಿರಾಗಿ ಶಂಕರಲಿಂಗ ನಂದಿಮಠ. ಖಜಾಂಚಿಯಾಗಿ ಜಟ್ಟೆಪ್ಪ ಚಲವಾದಿ. ಸಂಘಟನಾ ಕಾರ್ಯದರ್ಶಿಗಳಾಗಿ ಹಸನಪಟೇಲ ಬಿರಾದಾರ. ಸಂಚಾಲಕರಾಗಿ ಸಿದ್ದಲಿಂಗಯ್ಯ ಹಿರೇಮಠ. ನಿರ್ದೇಶಕರಾಗಿ ಹನುಮಂತ್ರಾಯ ಶಿವಣಗಿ. ಶ್ರೀಮತಿ ದಾನಶ್ರೀ ಹೀರೆಮಠ. ಶ್ರೀಮತಿ ಶಿವಗಂಗಮ್ಮ ಹಡಲಗೇರಿ. ಆನಂದಕುಮಾರ ರಾಠೋಡ ಇವರನ್ನು ನೇಮಿಸಲಾಯಿತು ಈ ಸಂದರ್ಭದಲ್ಲಿ ದಶರಥ ಯಡ್ರಾಮಿ ಶ್ರೀಮತಿ ಪ್ರತಿಭಾ ಕರ್ಕಳ್ಳಿ.ಮಡಿವಾಳಪ್ಪ ನಾಯ್ಕೋಡಿ.ರಮೇಶ ಮಡಿವಾಳರ ಸಂತೋಷ ಮಾದರ ವಿಜಯಕುಮಾರ ಟಕ್ಕಳಕಿ ಶ್ರೀಮತಿ ಪ್ರೀಯದರ್ಶೀನಿ ಪತ್ತಾರ ಮೈಲಾರಪ್ಪ ಬಸರಿಕಟ್ಟಿ ಸೇರಿದಂತೆ ಮತ್ತಿತರರು ಅತಿಥಿ ಶಿಕ್ಷಕರು ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು:ಬೀ ಎಸ್ ಹೊಸೂರ್.