ಕೂಡ್ಲಿಗಿ:ಕಮಲ ಬಿಟ್ಟು ಹೊರೆಹೊತ್ತ ಕೋಡಿಹಳ್ಳಿ ಭೀಮಪ್ಪ-ನಾಡಿನ ಸರ್ವತೋಮುಖ ಅಭಿವೃದ್ದಿಗಾಗಿ ಜೆಡಿಎಸ್ ಅನಿವಾರ್ಯ ಮಾಜಿ ಸಚಿವ ಎನ್. ಎಮ್.ನಬಿ.

ಕೂಡ್ಲಿಗಿ ಏ.18

ವಿಜಯನಗರ ಜಿಲ್ಲೆ ಕೂಡ್ಲಿಗಿ ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಹಾಗೂ ಕಾರ್ಮಿಕರ,ರೈತರ,ಮಹಿಳೆಯರ,ದೀನ ದಲಿತರ ಏಳ್ಗೆಗಾಗಿ ಜೆಡಿಎಸ್ ಅಧಿಕಾರಕ್ಕೆ ತರಬೇಕಿದೆ ಎಂದು. ಜೆಡಿಎಸ್ ರಾಜ್ಯ ಮುಖಂಡರು ಹಾಗೂ ಮಾಜಿ ಸಚಿವರಾದ ಎನ್.ಎಮ್.ನಬಿ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಎ17ರಂದು ಸಂಜೆ ಅವರ ನಿವಾಸದಲ್ಲಿ, ಜರುಗಿದ ಪಕ್ಷ ಸೇರ್ಪಡೆ ಸರಳ ಕಾರ್ಯಕ್ರಮ ಜರುಗಿತು.


ಬಹುಕಾಲ ಬಿಜೆಪಿಯಲ್ಲಿದ್ದು ಇತ್ತಿಚೆಗಷ್ಟೇ ಪಕ್ಷಕ್ಕೆ ಗುಡ್ ಬೈ ಹೇಳಿರುವ.ಜೆಡಿಎಸ್ ಪಕ್ಷಕ್ಕೆ ಆಗಮಿಸಿದ, ಕೋಡಹಳ್ಳಿ ಪೂಜಾರಿ ಭೀಮಪ್ಪರನ್ನು ಪಕ್ಷಕ್ಕೆ ಸೇರಿಸಿಕೊಂಡು.ನಂತರ ಅವರು ಮಾತನಾಡಿದರು, ಕುಮಾರ ಸ್ವಾಮಿ ನೇತೃತ್ವದ ಜೆಡಿಎಸ್ ಸರ್ಕಾರದಲ್ಲಿ, ಅಸಂಖ್ಯಾತ ಜನಪರ ಯೋಜನೆಗಳನ್ನು ಜಾರಿಗೆ ತರಲ‍ಾಯಿತು.ಸಾಲ ಮನ್ನ ಸೇರಿದಂತೆ ಹತ್ತಾರು ಯೋಜನೆಗಳು, ಬಡವರ ರೈತರ ಮಹಿಳೆಯರ ಗ್ರ‍ಾಮೀಣ ಜನರ ಜೀವನವನ್ನು ಹಸನು ಮಾಡಿವೆ. ಅವುಗಳ ಕುರಿತು ಜನರಲ್ಲಿ ತಿಳಿ ಹೇಳಿ, ಈ ಬಾರಿ ಜೆಡಿಎಸ್ ಪಕ್ಷವನ್ನು ನಾಡಿನರು ಅಧಿಕಾರಕ್ಕೆ ತಂದರೆ. ಈ ಹಿಂದೆ ಜಾರಿಗೆ ತಂದಿರುವುದಕ್ಕಿಂತ, ಅತಿ ಹೆಚ್ಚು ಉತ್ತಮ ಯೋಜನೆಗಳನ್ನು ಜಾರಿತರಲು ಪಕ್ಷವು ನಿರ್ಧರಿಸಿದೆ. ಅದರ ಬಗ್ಗೆ ಮತದಾರರಲ್ಲಿ ತಿಳಿಹೇಳಲಾಗುವುದು, ಈ ಮೂಲಕ ಜನರಲ್ಲಿ ಮತಯಾಚನೆ ಮಾಡಲಾಗುತ್ತಿದೆ ಎಂದರು. ರಾಜ್ಯದಲ್ಲಿ
ಮಾತಿನಂತೆ ನಡೆಯುವ ಏಕೈಕ ಪಕ್ಷ ಜೆಡಿಎಸ್ ಪಕ್ಷವಾಗಿದ್ದು, ಜನ ಈ ಬಾರಿ ಪಕ್ಷವನ್ನು ಅಧಿಕಾರಕ್ಕೆ ತರಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಜಿಲ್ಲೆಯ ಕೂಡ್ಲಿಗಿ,ಹರಪನಹಳ್ಳಿ, ಹಗರಿಬೊಮ್ಮನಹಳ್ಳಿ, ಈ ಮೂರು ಕ್ಷೇತ್ರಗಳ ಜವಾಬ್ದಾರಿಯನ್ನು ಪಕ್ಷ ನನ್ನ ಹೆಗಲಿಗೆ ಹೊರಿಸಿದೆ. ಪ್ರ‍ಾಮಾಣಿಕವಾಗಿ ಪ್ರಯತ್ನ ನಡೆಸಿದ್ದೇನೆ, ಹರಪನಹಳ್ಳಿಯಲ್ಲಿ ತಮ್ಮ ಪುತ್ರ ಎನ್.ಎಮ್.ನೂರು ಅಹಮ್ಮದ್ ಪಕ್ಷವನ್ನು ಪ್ರತಿನಿಧಿಸುತ್ತಿದ್ದಾರೆ.

ಹಗರಿಬೊಮ್ಮನಹಳ್ಳಿಯಲ್ಲಿಯೂ ಉತ್ತಮ ವ್ಯಕ್ತಿ,ಪಕ್ಷವನ್ನು ಪ್ರತಿನಿಧಿಸುತ್ತಿದ್ದಾರೆ. ಕೂಡ್ಲಿಗಿಯಲ್ಲಿ ಬಿಜೆಪಿ ತೊರೆದು ಜೆಡಿಎಸ್ ಗೆ ಆಗಮಿಸಿದ, ಕೋಡಿಹಳ್ಳಿ ಪೂಜಾರಿ ಭಿಮಣ್ಣ ನವರ ಆಗಮನದಿಂದಾಗಿ ಪಕ್ಷಕ್ಕೆ ಭೀಮಭಲ ಬಂದಿದೆ. ಕಾರ್ಯಕರ್ತರಲ್ಲಿ ಉತ್ಸಾಹ ತಂದಿದ್ದು, ಪಕ್ಷ ಚುನಾವಣೆಯನ್ನು ಎದುರಿಸುವಲ್ಲಿ ಸರ್ವಸನ್ನದ್ದವಾಗಿದೆ ಎಂದರು. ಕೋಡಿಹಳ್ಳಿ ಪೂಜಾರಿ ಭೀಮಪ್ಪನವರೆಗೆ ಪಕ್ಷದಜಂಡಾ ನೀಡಿ, ಪಕ್ಷದ ಶಾಲು ಹಾಕಿ ಪಕ್ಷಕ್ಕೆ ಸೇರಿಸಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಕೋ.ಪೂ.ಭೀಮಪ್ಪ ಮಾತನಾಡಿದರು, ಜೆಡಿಎಸ್ ತತ್ವ ಸಿದ್ಧಾಂತಗಳನ್ನು ಮತ್ತು ಕುಮಾರಸ್ವಾಮಿರವರ ಜನಪರ ಕಾಳಜಿ ಮೆಚ್ಚಿದ್ದು. ಕೂಡ್ಲಿಗಿ ಕ್ಷೇತ್ರದಲ್ಲಿ ಜೆಡಿಎಸ್ ಸ್ಥಾನವನ್ನು ತಂದು ಪಕ್ಷ ಭಲಪಡಿಸಿ, ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿ ಪ್ರಾಮಾಣಿವಾಗಿ ಶ್ರಮಿಸುವುದಾಗಿ ಅವರು ತಿಳಿಸಿದರು. ಪಕ್ಷದ ಗ್ರಾಮೀಣ ಮುಖಂಡರಾದ ಹುಲಿಕೇರಿ ಮಾರಣ್ಣ ಮಾತಾಡಿದರು, ರಾಜ್ಯದ ಹಿತಕ್ಕಾಗಿ ಬಡ ರೈತರ ಹಿತಕ್ಕಾಗಿ ಮಹಿಳೆಯರ ಶ್ರೇಯೋಭಿವೃದ್ಧಿಗೆ ಜೆಡಿಎಸ್ ಪಕ್ಷ ಅಗತ್ಯವಾಗಿದ್ದು. ಜೆಡಿಎಸ್ ಅಧಿಕಾರಕ್ಕೆ ಬರಬೇಕು, ಕುಮಾರ ಸ್ವಾಮಿ ಮುಖ್ಯಮಂತ್ರಿ ಆಗಬೇಕಿದೆ. ಆರೋಗ್ಯವಂತರ ರಾಜಕಾರಣಕ್ಕೆ ಜೆಡಿಎಸ್ ಪಕ್ಷ ಅಧಿಕಾರಕ್ಕೆ ತರಬೇಕಿದೆ, ನಾಡಿನ ಸರ್ವತೋಮುಖ ಅಭಿವೃದ್ಧಿಗಾಗಿ. ಕುಮಾರಣ್ಣ ನ ನೇತೃತ್ವದಲ್ಲಿ, ಜೆಡಿಎಸ್ ರಾಜ್ಯದಲ್ಲಿ ಅಧಿಕಾರದಲ್ಲಿರ ಬೇಕಿದೆ ಎಂದರು. ಪಕ್ಷದ ಜಿಲ್ಲಾ ಅಧ್ಯಕ್ಷ ಕೊಟ್ರೇಶ, ತಾಲೂಕಾಧ್ಯಕ್ಷ ಬ್ಯಾಳಿ ವಿಜಯಕುಮಾರ್ ಗೌಡ, ರೈತಸಂಘದ ಮುಖಂಡ ಕಕ್ಕುಪ್ಪಿ ಬಸವರಾಜ ಮಾತನಾಡಿದರು. ಹಿರಿಯ ಮುಖಂಡರಾದ ವೆಂಕಟರೆಡ್ಡಿ, ಅಬ್ದುಲ್ ಸಲೀಂ, ಪಕ್ಷದ ಯುವ ಮುಖಂಡ ಹಾಗೂ ಹರಪನಹಳ್ಳಿ ಕ್ಷೇತ್ರದ ಪಕ್ಷದ ಪ್ರತಿನಿಧಿ, ನಬಿಯವರ ಪುತ್ರನಾದ ಎನ್.ಎಮ್.ನೂರ್ ಅಹಮ್ಮದ್, ಕೊಟ್ಟೂರಿನ ಪಕ್ಷದ ಮುಖಂಡರಾದ ಸೋಮಶೇಖರ್.
ಪಟ್ಟಣ ಪಂಚಾಯ್ತಿ ಸದಸ್ಯರಾದ ಕಾಲ್ಚೆಟ್ಟಿ ಈಶಪ್ಪ,ಪೂರ್ಯಾನಾಯ್ಕ, ಸಿರಿಬಿ ಮಂಜುನಾಥ,ಶ್ರೀಮತಿ ಸರಸ್ವತಿ ರಾಘವೇಂದ್ರ, ವೇದಿಕೆಯಲ್ಲಿದ್ದರು. ಮಹಿಳಾ ಮುಖಂಡರಾದ ಲಕ್ಷ್ಮೀದೇವಿ, ಯುವ ಮುಖಂಡರಾದ ಬಿ.ಕೆ.ರಾಘವೇಂದ್ರ,ಬಡೇಲಡಕು ಕರಿಯಪ್ಪ, ಹಿರೇಹೆಗ್ಡಾಳು ಪ್ರಕಾಶ, ಖಾದರ್ ಭಾಷಾ, ಅನ್ವರ್ ಭಾಷಾ, ಗುಡೇಕೋಟೆರ ಬಟ್ಟೆಅಂಗಡಿ ಮಾಲೀಕ ರಾಘವೇಂದ್ರ ಶೆಟ್ಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಕೂಡ್ಲಿಗಿ ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆಯಿಂದ ಆಗಮಿಸಿದ್ದ, ನೂರಾರು ಕಾರ್ಯಕರ್ತರು ಇದ್ದರು.

ಜಿಲ್ಲಾ ವರದಿಗಾರರು:ರಾಘವೇಂದ್ರ ಸಾಲುಮನೆ ಕೂಡ್ಲಿಗಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button