“ಭಕ್ತಿ. ಸಂಭ್ರಮದಿಂದ ರಂಜಾನ್ ಹಬ್ಬ ಆಚರಣೆ”
ಕೊಟ್ಟೂರು ಏ.22

ಕೊಟ್ಟೂರು ತಾಲ್ಲೂಕಿನಾದ್ಯಂತ ಈದ್ ಉಲ್ ಫಿತ್ರ್ ಪವಿತ್ರ ರಂಜಾನ್ ಹಬ್ಬದ ನಿಮಿತ್ತ ಶನಿವಾರ ನಗರದ ಈದ್ಗಾ ಮೈದಾನದಲ್ಲಿ ಪ್ರಾರ್ಥನೆಯಲ್ಲಿ ಪಾಲ್ಗೊಂಡು ನಡೆಸಿದರು.
ಪಟ್ಟಣದ ವಿವಿಧ ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸಿದ ಮುಸ್ಲಿಂ ಬಾಂಧವರು ಹ್ಯಾಳ್ಯಾ ರಸ್ತೆಯಲ್ಲಿರುವ ಈದ್ಗಾ ಮೈದಾನಕ್ಕೆ ತೆರಳಿ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿದರು. ನಂತರ ಪರಸ್ಪರ ಆಲಂಗಿಸಿಕೊಂಡು ಹಬ್ಬದ ಶುಭಾಶಯವನ್ನು ವಿನಿಮಯ ಮಾಡಿಕೊಂಡರು.
ಮುಸ್ಲಿಂ ಧರ್ಮಗುರುಗಳಾದ ಆಶೀರ್ವಾದ ಅಲ್ಲಾಹ್ ಪ್ರೇರಣೆಯಂತೆ ಜಗತ್ತಿನಲ್ಲಿ ಶಾಂತಿ, ಸುಖ, ಸಮೃದ್ಧಿ, ಸೌಹಾರ್ದತೆಯ ಗುಣಗಳು ಎಲ್ಲರಲ್ಲೂ ನೆಲೆಸಲಿ.

ಮುಸ್ಲಿಂ ಬಾಂಧವರ ವ್ರತಾಚರಣೆಯು ಉತ್ತರದ ಇಂದು ದಿನವಾದ ಎಲ್ಲರಿಗೂ ಸನ್ಮಂಗಳವಾಗಲಿ ಎಂದು ಕೋರಿದರು. ಪ್ರತಿಯೊಬ್ಬರೂ ಪರಸರ ಲೋಕ ಕಲ್ಯಾಣಾರ್ಥ ಜಗದೊಡೆಯನಾದ ಅಲ್ಲಾವು ನಲ್ಲಿ ಪ್ರಾರ್ಥಿಸಿದರು.ಧಾರ್ಮಿಕ ಆಚರಣೆಗಳನ್ನು ಅಳವಡಿಸಿ ಕೊಳ್ಳುವುದರಿಂದ ಮನಸ್ಸಿನಲ್ಲಿನ ಕೆಲಸ ನಿವಾರಣೆಯಾಗಿ, ಹೃದಯ ಮತ್ತು ಮನಸ್ಸು ಪರಿಶುದ್ಧವಾಗುತ್ತದೆ.
ಐಯೂಬ್ ಖಾನ್ ,ಕೆ.ನಜೀರ್ ಅಹಮದ್, ಸೈಪುಲ್ಲಾ, ಮಹಮದ್ ಯಾಸಿನ್, ಹೆಗಡೆ ಮಾಬುಸಾಬ್ ,ಮಾಬುಸಾಬ್, ರಹಮತ್ ಉಲ್ಲಾ ಸಾಬ್, ಸದ್ದಾಂ, ಸ್ಟೀಲ್ ಖಾಜಾ ಮುಂತಾದ ಮುಖಂಡರು ಪಾಲ್ಗೊಂಡಿದ್ದರು.
ತಾಲೂಕ ವರದಿಗಾರರು:ಪ್ರದಿಪ್. ಕುಮಾರ್.ಕೊಟ್ಟೂರು