ನಮ್ಮ ನಡೆ-ಮತಗಟ್ಟೆ ಕಡೆ ಅಭಿಯಾನ ಮತದಾನವು ಪ್ರಜಾಪ್ರಭುತ್ವದ ಭದ್ರ ಬುನಾದಿ-ಬಸವರಾಜ ಬಬಲಾದ.
ಹಿರೇರೂಗಿ ಏ.30.

18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ತಪ್ಪದೇ ಮತದಾನ ಮಾಡಬೇಕು. ಮತದಾನ ಮಾಡಲು ನಮ್ಮ ಸುತ್ತಲಿನವರಿಗೆ ತಿಳಿವಳಿಕೆ ನೀಡಬೇಕು. ಪ್ರತಿಯೊಬ್ಬರೂ ಮೇ 10 ರಂದು ಮತದಾನ ಕೇಂದ್ರಕ್ಕೆ ತೆರಳಿ ಮತ ಚಲಾಯಿಸಲು ಪ್ರೇರಣೆ ನೀಡಬೇಕು ಎಂದು ಹಿರೇರೂಗಿ ಗ್ರಾಮ ಪಂಚಾಯಿತಿ ಪಿಡಿಓ ಬಸವರಾಜ ಬಬಲಾದ ಹೇಳಿದರು. ಅವರು ಜಿಲ್ಲಾಡಳಿತ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ವಿಜಯಪುರ,ಗ್ರಾಮ ಪಂಚಾಯಿತಿ ಹಿರೇರೂಗಿ ಮತ್ತು ಕೆಬಿಎಸ್,ಕೆಜಿಎಸ್, ಯುಬಿಎಸ್ ಶಾಲೆಗಳ ಸಂಯುಕ್ತ ಆಶ್ರಯದಲ್ಲಿ ನಮ್ಮ ನಡೆ-ಮತಗಟ್ಟೆ ಕಡೆ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು. ಶಿಕ್ಷಕ ಸಂತೋಷ ಬಂಡೆ ಮಾತನಾಡಿ,ಪ್ರಜಾಪ್ರಭುತ್ವ ರಾಷ್ಟ್ರವಾಗಿ ಭಾರತವನ್ನು ಚುನಾವಣೆಯ ತಳಹದಿಯ ಮೇಲೆ ಕಟ್ಟಲಾಗಿದೆ. ಮತದಾನದ ಹಕ್ಕು ಕೇವಲ ಸವಲತ್ತು ಅಲ್ಲ,ಅದೊಂದು ಮೂಲಭೂತ ಮಾನವ ಹಕ್ಕಾಗಿದೆ.

ಎಲ್ಲರಲ್ಲಿ ಮತದಾನದ ಜಾಗೃತಿ ಹೆಚ್ಚಿಸಬೇಕಾಗಿದೆ ಎಂದು ಹೇಳಿದರು. ನಮ್ಮ ನಡೆ-ಮತಗಟ್ಟೆ ಕಡೆ, ನಮ್ಮ ಮತ-ನಮ್ಮ ಹಕ್ಕು, ಜನ ಪ್ರತಿನಿಧಿ ಆರಿಸಿ-ಸಾಮಾಜಿಕ ಕಳಕಳಿ ನಿರ್ವಹಿಸಿ ಎನ್ನುವ ಅನೇಕ ಫಲಕಗಳನ್ನು ಹಿಡಿದು ಜಾಥಾ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು. ಗ್ರಾಮ ಲೆಕ್ಕಾಧಿಕಾರಿ ಶ್ರೀಶೈಲ ಹಂಚಿನಾಳ,ಮುಖ್ಯ ಶಿಕ್ಷಕರಾದ ಅನಿಲ ಪತಂಗಿ,ಸುರೇಶ ಅಂಕಲಗಿ, ಎ ಎಂ ಬೆದ್ರೇಕರ, ಶಿಕ್ಷಕರಾದ ಎಸ್ ಎಸ್ ಅರಬ,ಎಸ್ ಎಂ ಪಂಚಮುಖಿ,ಎಸ್ ಆರ್ ಚಾಳೇಕಾರ,ಎಸ್ ಎಚ್ ಮೈದರಗಿ,ಎನ್ ಬಿ ಚೌಧರಿ,ಎಸ್ ಡಿ ಬಿರಾದಾರ, ವಿ ವೈ ಪತ್ತಾರ,ಜೆ ಸಿ ಗುಣಕಿ,ಎಸ್ ಎನ್ ಡಂಗಿ,ಜೆ ಎಂ ಪತಂಗಿ,ಎಂ ಎಂ ಪತ್ತಾರ, ಸುರೇಶ ದೊಡ್ಯಾಳಕರ,ಪಂಚಾಯಿತಿ ಸಿಬ್ಬಂದಿಗಳಾದ ಅಕ್ಬರ ಕೊರಬು, ಶ್ರೀಧರ ಬಾಳಿ,ಶರಣು ನಾಟೀಕಾರ,ಬಸವರಾಜ ತಳಕೇರಿ,ಸಚಿನ ಹೊಸೂರ ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು,ಬಿ ಎಲ್ ಓ ಗಳು,ಗ್ರಾಮಸ್ಥರು ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು:ಬೀ.ಎಸ್.ಹೊಸೂರು. ವಿಜಯಪುರ