ಮತದಾನ ಬಹಿಷ್ಕಾರ ಮನವೊಲಿಕೆ – ಎಂ.ಕುಮಾರಸ್ವಾಮಿ …
ನಿಂಬಲಗೇರಿ (ಮೇ.2) :
ಕೊಟ್ಟೂರು ತಾಲೂಕಿನ ವ್ಯಾಪ್ತಿಯಲ್ಲಿ ಬರುವ ನಿಂಬಳಗೇರೆಯ ಗ್ರಾಮದ ಮುಸ್ಲಿಂ ಸಮುದಾಯದವರು ಮತದಾನ ಬಹಿಷ್ಕಾರ ನಿರ್ಣಯದ ಬಗ್ಗೆ ಕೊಟ್ಟೂರು ತಹಸಶೀಲ್ದಾರ್ ಎಂ ಕುಮಾರಸ್ವಾಮಿಯ ನೇತೃತ್ವದಲ್ಲಿ ಮನವೊಲಿಕೆ ಮಾಡಲಾಯಿತು.

96-ಕೂಡ್ಲಿಗಿ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ನಿಂಬಳಗೇರಿ ಗ್ರಾಮದ ಮುಸ್ಲಿಂ ಸಮುದಾಯದ ಜನರು ಮತದಾನ ಬಹಿಷ್ಕಾರ ಮಾಡುವುದಾಗಿ ತಿಳಿಸಿದ ಕಾರಣ ಮಾನ್ಯ ತಹಶೀಲ್ದಾರರು ಕೊಟ್ಟೂರು, ತಾಲೂಕು ಪಂಚಾಯತಿ ಅಧಿಕಾರಿಗಳು ಕೊಟ್ಟೂರು ಹಾಗೂ ಪಿಎಸ್ಐ ಹೊಸಹಳ್ಳಿರವರು ನಿಂಬಳಗೇರಿ ಗ್ರಾಮಕ್ಕೆ ಭೇಟಿ ನೀಡಿ ಸ್ಥಾನಿಕ ವಿಚಾರಣೆ ನಡೆಸಿ ಸದರಿಯವರ ಮನವೊಲಿಸಿ ಮತದಾನ ಬಹಿಷ್ಕಾರ ಮಾಡದಂತೆ ತಿಳಿಸಿದರು.
ತಾಲೂಕ ವರದಿಗಾರರು: ಪ್ರದೀಪ್.ಕುಮಾರ್.C ಕೊಟ್ಟೂರು.