ಬಂಜಾರ ಸಮಾಜಕ್ಕೆ ನ್ಯಾಯ ಒದಗಿಸಲು ಜೆಡಿಎಸ್ ಬದ್ದ …
ಇಂಡಿ (ಮೇ.3) :
ಇಂಡಿ ನಗರದ ವಾರ್ಡ್ ನಂಬರ್ 23ರಲ್ಲಿ ಬರುವ ಕೇಸರಾಳ ತಾಂಡಾದಲ್ಲಿ ಜೆಡಿಎಸ್ ಅಭ್ಯರ್ಥಿ ಬಿ ಡಿ ಪಾಟೀಲ ಧರ್ಮ ಪತ್ನಿ ಮಾಜಿ ಜಿಲ್ಲಾ ಪಂಚಾಯತ ಸದಸ್ಯರಾದ ಶ್ರೀಮತಿ ಪದ್ಮಾವತಿ ಬಸವರಾಜ ಪಾಟೀಲರ ನೇತೃತ್ವದಲ್ಲಿ ತಾಂಡಾದ ಪ್ರತಿ ಮನೆ ಮನೆಗೆ ತೆರಳಿ ಪಂಚರತ್ನ ಯೋಜನೆಯ ಮಹತ್ವ ಹಾಗೂ ನನ್ನ ಪತಿ ಬಿ ಡಿ ಪಾಟೀಲರು ತಮ್ಮ ಜೀವನವನ್ನು ಬಡವರ ರೈತರ ಕಾರ್ಮಿಕರ ದಿನದಲಿತರ ಹಿಂದೂಳಿದ ಅಲ್ಪಸಂಖ್ಯಾತರ ಹಾಗೂ ಮಹಿಳೆಯರ ನ್ಯಾಯಕ್ಕಾಗಿ ಅವಿರತವಾಗಿ ಹೋರಾಟ ಮಾಡಿದ್ದಾರೆ.

ಅವರ ನಿರಂತರ ಹೋರಾಟಕ್ಕೆ ನ್ಯಾಯ ಒದಗಿಸಬೇಕು ಎಂದು ಕಳಕಳಿಯ ಮನವಿಯನ್ನು ಮಾಡಿದರು.ನಂತರ ಡಾ ರಮೇಶ ರಾಠೋಡ ಮಾತನಾಡಿ ನಮ್ಮ ತಾಂಡಾಗಳು ಅಭಿವೃದ್ಧಿ ಇಂದ ವಂಚಿತರಾಗಿದ್ದಾರೆ, ಹಾಗೂ ಗೂಳೆ ಹೋಗುವ ಜನಾಂಗಕ್ಕೆ ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿ ಮಾಡುವ ಸಂಕಲ್ಪ ನಮ್ಮ ಅಭ್ಯರ್ಥಿ ಬಿ ಡಿ ಪಾಟೀಲರು ಮಾಡಿದ್ದಾರೆ.ಬಡವರ ಪರವಾದ ಸೇವೆಯನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ ಎಂದು ಸಂಕಲ್ಪ ಮಾಡಿದ್ದಾರೆ ಎಂದು ಮಾತನಾಡಿದರು.ಇದೆ ಸಂದರ್ಭದಲ್ಲಿ ಮಾಜಿ ಪುರಸಭಾ ಸದಸ್ಯ ಸಿದ್ದು ಡಂಗಾ, ಬಸವರಾಜ ಹಂಜಗಿ ದೇಸಾಯಿ ರಾಠೋಡ,ಬಾಳು ರಾಠೋಡ,ಅನೀಲ ರಾಠೋಡ,ವಿಶಾಲ ರಾಠೋಡ, ಶ್ರೀಮತಿ ಗಿರಿಜಾ ಹಂಜಗಿ, ಸವಿತಾ ಅಡವಿ, ಸಾವಿತ್ರಿ ಗೌಡರ,ಮಹಾನಂದ ಗೌಡರ,ಲಾಯವ್ವ ಬಟರ್,ಅನುಸುಬಾಯಿ ಹಿರೇಕುರಬರ,ಅಭೀಷೇಕ ರಾಠೋಡ,ವಿಲಾಸ ರಾಠೋಡ, ಪಂಡಿತ್ ರಾಠೋಡ,ಸಂಜು ಚೌವ್ಹಾಣ್,ಗೀರಿಶ ರಾಠೋಡ,ಆನಂದ ರಾಠೋಡ, ರಮೇಶ್ ರಾಠೋಡ ಮುಂತಾದ ಕಾರ್ಯಕರ್ತರು ಉಪಸ್ಥಿತರಿದ್ದರು. ಜಿಲ್ಲಾ ವರದಿಗಾರರು:ಬೀ.ಎಸ್.ಹೊಸೂರ್.ವಿಜಯಪುರ