ಎರಡುವರೆ ಲಕ್ಷ ಸರಕಾರಿ ಉದ್ಯೋಗ ಭರ್ತಿ – ಪ್ರಿಯಾಂಕ ಗಾಂಧಿ ….
ಇಂಡಿ (ಮೇ.3) :
ರಾಜ್ಯದಲ್ಲಿ ಬಿಜೆಪಿ ಸರಕಾರ ೨.೫ ಲಕ್ಷ ಸರಕಾರಿ ಉದ್ಯೋಗ ಖಾಲಿ ಇಟ್ಟಿದ್ದು ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ತಕ್ಷಣ ಅವುಗಳನ್ನು ಭರ್ತಿ ಮಾಡಲಾಗುವದೆಂದು ಎಐಸಿಸಿ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಹೇಳಿದರು. ಪಟ್ಟಣದ ಧನಶೆಟ್ಟಿ ಮಂಗಲ ಕಾರ್ಯಾಲಯದ ಆವರಣದಲ್ಲಿ ಅವರು ಕಾಂಗ್ರೆಸ್ ಪಕ್ಷದ ಪ್ರಚಾರ ಸಭೆಯಲ್ಲಿ ಮಾತನಾಡಿರಾಜ್ಯದ ಅಭಿವೃದ್ದಿ ಮತ್ತು ರೈತರಿಗಾಗಿ ಬಿಜೆಪಿ ಸರಕಾರ ಏನು ಮಾಡಿದೆ ಎಂಬುದೇ ಈ ಬಾರಿ ಚುನಾವಣೆಯ ಪ್ರಶ್ನೆಯಾಗಿದೆ. ಬೆಲೆ ಏರಿಕೆಯಿಂದ ಬಡವರ ಜೆಬಿನಿಂದ ಲೂಟಿ,ತೆರಿಗೆ ಹೆಸರಿನಲ್ಲಿ ರಾಜ್ಯದ ಹಣ ಲೂಟಿ ಮಾಡುವ ಮೂಲಕ ಬಿಜೆಪಿ ಸರಕಾರ ಜನರನ್ನು ಲೂಟಿ ಮಾಡುತ್ತಿದೆ ಎಂದರು. ದೊಡ್ಡ ದೊಡ್ಡ ನಾಯಕರು ಬಂದು ಬಾಷಣ ಮಾಡುತ್ತಿದ್ದಾರೆ. ಆದರೆ ಬೆಲೆ ಏರಿಕೆ ಹಾಗೂ ರಾಜ್ಯದ ಜನರ ಅಭಿವೃದ್ದಿ ಹಾಗೂ ಇಲ್ಲಿನ ಸಮಸ್ಯೆಗಳ ಬಗ್ಗೆ ಇವತ್ತಿನ ವರೆಗೂ ಯಾರೂ ಮಾತನಾಡುತ್ತಿಲ್ಲ. ಬಿಜೆಪಿ ಸರಕಾರ ರಾಜ್ಯದ ೨.೫ ಲಕ್ಷ ತೆರಿಗೆ ಹಣವನ್ನು ಲೂಟಿ ಮಾಡಿದೆ. ರೈತರ ಅಭಿವೃದ್ದಿಗೆ ಏನೂ ಕೊಟ್ಟಿಲ್ಲ. ಪ್ರಧಾನಿಗಳು ೯೭ ಅಂಶಗಳ ಬಗ್ಗೆ ಮಾತನಾಡುತ್ತಾರೆ. ರಾಜ್ಯದ ಜನರಿಗೆ ಏನು ಮಾಡಿದ್ದೇವೆ ಎಂಬುದನ್ನು ಇಲ್ಲಿ ಹೇಳುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು. ಈ ಬಿಜೆಪಿ ಸರಕಾರ ಮನೆಗಳಿಂದ, ಅಂಗಡಿಗಳಿಂದ ಹಾಗೂ ಜನರ ಜೇಬಿನಿಂದ ನೇರವಾಗಿ ಕಳ್ಳತನ ಮಾಡುತ್ತಿದೆ.

ಇದರ ಜೊತೆಗೆ ಪ್ರಜಾಪ್ರಭುತ್ವದ ಲೂಟಿ,ಯುವ ಶಕ್ತಿ ಲೂಟಿ,ನಿಮ್ಮ ಆಸ್ತಿ ಲೂಟಿ ಮಾಡುತ್ತಿದ್ದು ಕಳ್ಳರಲ್ಲಿ ಅತಿ ದೊಡ್ಡ ಕಳ್ಳರು ಎಂದರು. ಇಲ್ಲಿಗೆ ಮತಯಾಚಿಸಲು ಬಂದಿಲ್ಲ,ಬಿಜೆಪಿ ಬಗ್ಗೆ ನಿಮ್ಮನ್ನು ಎಚ್ಚರಿಸಲು ಬಂದಿದ್ದೇನೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ಪಕ್ಷ ಕರ್ನಾಟಕ ರಾಜ್ಯದ ಜನರಿಗೆ ಗ್ಯಾರಂಟಿಯಾಗಿ ಗ್ಯಾರಂಟಿ ಕಾರ್ಡು ನೀಡಿದೆ. ಕಳೆದ ಬಾರಿಯ ಕಾಂಗ್ರೆಸ್ ಸರಕಾರದಲ್ಲಿ ಅನ್ನಭಾಗ್ಯ,ಕ್ಷೀರಭಾಗ್ಯ,ಇಂದಿರಾ ಕ್ಯಾಂಟಿನ್ ನಂತಹ ಜನಪರ ಯೋಜನೆಗಳ ಮೂಲಕ ಬಡತನ ನಿರ್ಮೂಲನೆಗೆ ಯೋಜನೆ ಜಾರಿ ಮಾಡಿತ್ತು. ಅಧಿಕಾರಕ್ಕೆ ಬಂದ ಬಿಜೆಪಿ ಸರಕಾರ ರಾಜ್ಯದಲ್ಲಿ ಲೂಟಿ ಮಾಡಿದೆ.ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಮೇಲೆ ನಿರುದ್ಯೋಗಿ ಯುವಕರಿಗೆ ಭತ್ಯೆ ನೀಡಲಿದೆ.೨೦೦ ಯೂನಿಟ್ ವಿದ್ಯುತ್ ಉಚಿತ, ಗೃಹಣಿಯರಿಗೆ ೨೦೦೦ ಪ್ರತಿ ಮಾಹೆ, ತಲಾ ೧೦ ಕೆಜಿ ಅಕ್ಕಿ, ಮಹಿಳೆಯರಿಗೆ ಉಚಿತ ಸಾರಿಗೆ ವ್ಯವಸ್ಥೆಯಂತಹ ಅನೇಕ ಯೋಜನೆಗಳನ್ನು ಜಾರಿಗೆ ಘೋಷಣೆ ಮಾಡಿದೆ ಎಂದರು. ರಾಜೀವಗಾಂಧಿ ಪ್ರಧಾನಿಗಳಿದ್ದಾಗ ಕರ್ನಾಟಕ ಐಟಿ ಹಬ್ ಮಾಡುವ ಕನಸ್ಸು ಕಂಡಿದ್ದರು.ಅದನ್ನು ಮಾಡು ನೀರಿಕ್ಷೆ ಹೊಂದಿದ್ದೇವೆ ಎಂದರು.ಬಿಜೆಪಿಯವರು ಲೂಟಿ ಮಾಡಿದ ಹಣದಲ್ಲಿ ೧೦೦ ಏಮ್ಸ ಆಸ್ಪತ್ರೆ,೧೭೫ ಇಎಸ್‌ಐ ಆಸ್ಪತ್ರೆ,೩೦೦೦ ಸ್ಮಾರ್ಟ ಕ್ಲಾಸರೂಮಗಳು,೩೦ ಲಕ್ಷ ಬಡವರಿಗೆ ದಲಿತರಿಗೆ ಮನೆ ನೀಡಬಹುದಿತ್ತು ಎಂದರು. ಇಂಡಿ ಕಾಂಗ್ರೆಸ್ ಅಭ್ಯರ್ಥಿ ಯಶವಂತರಾಯಗೌಡ ಪಾಟೀಲ,ಕಾಂತಾ ನಾಯಕ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಾಜು ಆಲಗೂರ,ಎಐಸಿಸಿ ರಾಜ್ಯ ಸದಸ್ಯೆ ಸಂಯುಕ್ತಾ ಪಾಟೀಲ,ಇಲಿಯಾಸ ಬೋರಾಮಣಿ,ಪುಂಡಲೀಕ ಹೂಗಾರ,ವಿಜಯಪುರ ಕಾಂಗ್ರೆಸ್ ಅಭ್ಯರ್ಥಿ ಹಮೀದ ಮುಸ್ರೀಫ್,ಎಸ್.ಎಂ.ಪಾಟೀಲ ಗಣಿಯಾರ, ಬಿಡಿಸಿಸಿ ಬ್ಯಾಂಕ ಉಪಾಧ್ಯಕ್ಷ ರಾಜಶೇಖರ ಗುಡದಿನ್ನಿ,ಮಲ್ಲಿಕಾರ್ಜುನ ಲೋಣಿ, ದಯಾನಂದ ಪಾಟೀಲ,ಎಐಸಿಸಿಯ ಪ್ರೀತಿ ಜೋಶ್ವಾಲ ಮಾತನಾಡಿದರು.ವೇದಿಕೆಯ ಮೇಲೆ ರಾಜ್ಯ ನಾಯಕ ಸಲೀಂ ಅಹಮ್ಮದ,ಬಾಬುಸಾವಕಾರ ಮೇತ್ರಿ,ಪ್ರಕಾಶ ರಾಠೋಡ,ಪ್ರಶಾಂತ ಕಾಳೆ,ಜಟ್ಟೆಪ್ಪ ರವಳಿ,ಧರ್ಮರಾಜ ವಾಲಿಕಾರ,ಸುರೇಶ ಗೊಣಸಗಿ, ಜಾವಿದ ಮೋಮಿನ ಮತ್ತಿತರಿದ್ದರು.
ಜಿಲ್ಲಾ ವರದಿಗಾರರು: ಬೀ.ಎಸ್.ಹೊಸೂರ್.ವಿಜಯಪುರ …….